ಎಂಇಎಸ್ ಅನ್ನು ನಿಷೇಧಿಸುವಂತೆ ಆಗ್ರಹಿಸಿ ಪ್ರತಿಭಟನೆ

Share

ಎಂಇಎಸ್ ಅನ್ನು ನಿಷೇಧಿಸುವಂತೆ ಆಗ್ರಹಿಸಿ ಪ್ರತಿಭಟನೆ

by-ಕೆಂಧೂಳಿ

ಬೆಂಗಳೂರು, ಮಾ,16-ಬೆಳಗಾವಿಯಲ್ಲಿ ಮರಾಠಿ ಮೇಯರ್ ಮಾಡಿರುವುದನ್ನು ಖಂಡಿಸಿ ಎಂಇಎಸ್ ಅನ್ನು ನಿಷೇಧಿಸುವಂತೆ ಒತ್ತಾಯಿಸಿ ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಇದೇ ಮಾರ್ಚ್ 22 ರಂದು ಕರ್ನಾಟಕ ಬಂದ್ ನಡೆಸಲಿದ್ದು ಎಲ್ಲಾ ಸಂಘಟನೆಗಳು ವ್ಯಾಪಾರಿಗಳು ಸಹಕರಿಸುವಂತೆ ವಾಟಾಳ್ ನಾಗರಾಜ್ ಮನವಿ ಮಾಡಿದರು.ಈ ವೇಳೆ ಎಂ ಇಎಸ್ ನಿಷೇಧಿಸಬೇಕೆಂದು ಹಾಗೂ ಬೆಳಗಾವಿಯಲ್ಲಿ ಮರಾಠಿ ಮೇಯರ್ ಆಯ್ಕೆ ಮಾಡಿರುವುದನ್ನು ಖಂಡಿಸಿ ಎಂಇಎಸ್ ಫಲಕವನ್ನು ಸುಟ್ಟಿ ಚಳವಳಿ ನಡೆಸಲಾಯಿತು ಹಾಗೂ ಎಲ್ಲ ಕನ್ನಡಪರ ಹೋರಾಟಗಾರರನ್ನು ಪೊಲೀಸರು ಬಂಧನಗೊಳಿಸಿದರು,

ಕನ್ನಡ ಪರ ಸಂಘಟನೆಗಳ ಮುಖಂಡರಾದ ಸಾ.ರಾ.ಗೋವಿಂದು ಮೊದಲಾದವರು ಹಾಜರಿದ್ದರು.

 

Girl in a jacket
error: Content is protected !!