ಬಲೂಚಿಸ್ತಾನದಲ್ಲಿ ಭದ್ರತಾಪಡೆ ಮೇಲೆ ದಾಳಿ -ಐವರ ಅಧಿಕಾರಿಗಳ ಸಾವು

Share

ಬಲೂಚಿಸ್ತಾನದಲ್ಲಿ ಭದ್ರತಾಪಡೆ ಮೇಲೆ ದಾಳಿ -ಐವರ ಅಧಿಕಾರಿಗಳ ಸಾವು

by-ಕೆಂಧೂಳಿ

ಬಲೂಚಿಸ್ತಾನ, ಮಾ, ೧೬- ಅಲ್ಲಿ ಯಾವಾಗ ಏನಾಗುತ್ತದೆ ಎನ್ನುವ ಭಯ ಇದ್ದೆ ಇರುತ್ತದೆ ಈ ಭಯದಲ್ಲೇ ದೊಡ್ಡ ದುರಂತವೂ ಈಗ ಸಂಭವಿಸಿದೆ ಹೌದು..ಭದ್ರತಾ ಪಡೆಗಳಿದ್ದ ಬಸ್ ಸಮೀಪವೇ ಬಾಂಬ್ ಸ್ಪೋಟಗೊಳಿಸಿರುವ ಪರಿಣಾಮ ಐವರು ಅಧಿಕಾರಿಗಳು ಅಸುನೀಗಿದ ಘಟನೆ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸಂಭವಿಸಿದೆ.
ಈ ದುರಂತದಲ್ಲಿ ಹತ್ತು ಮಂದಿ ಅಧಿಕಾರಿಗಳು ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸ್ ಮುಖ್ಯಸ್ಥ ಜಾಫರ್‌ಜಮಾನಾನಿ ತಿಳಿಸಿದ್ದಾರೆ
ಈ ಘಟನೆಯನ್ನು ಬಲೂಚಿಸ್ತಾನದ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಖಂಡಿಸಿದ್ದಾರೆ.

ಇಲ್ಲಿಯವರೆಗೆ ಬಾಂಬ್? ಸ್ಫೋಟದ ಹೊಣೆಯನ್ನು ಯಾವ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲ. ಕೆಲವು ದಿನಗಳ ಹಿಂದೆ ರೈಲಿನ ಮೇಲೆ ಹೊಂಚು ಹಾಕಿ, ಅದರಲ್ಲಿದ್ದ ಸುಮಾರು ೪೦೦ ಜನರನ್ನು ಒತ್ತೆಯಾಳಾಗಿಟ್ಟುಕೊಂಡು ೨೬ ಒತ್ತೆಯಾಳುಗಳನ್ನು ಕೊಂದ ಬಲೂಚ್ ಲಿಬರೇಶನ್ ಆರ್ಮಿಯ ಮೇಲೆ ಅನುಮಾನ ಮೂಡಿದೆ. ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಎಲ್ಲಾ ೩೩ ದಾಳಿಕೋರರನ್ನು ಕೊಂದಿದ್ದರು.

ತೈಲ ಮತ್ತು ಖನಿಜ ಸಮೃದ್ಧ ಬಲೂಚಿಸ್ತಾನ್ ಪಾಕಿಸ್ತಾನದ ಅತಿದೊಡ್ಡ ಮತ್ತು ಕಡಿಮೆ ಜನಸಂಖ್ಯೆ ಹೊಂದಿರುವ ಪ್ರಾಂತ್ಯವಾಗಿದೆ. ಬಲೂಚ್ ನಿವಾಸಿಗಳು ಕೇಂದ್ರ ಸರ್ಕಾರವು ತಾರತಮ್ಯವನ್ನು ತೋರಿಸುತ್ತಿದೆ ಎಂದು ಬಹಳ ಹಿಂದಿನಿಂದಲೂ ಆರೋಪಿಸುತ್ತಲೇ ಬಂದಿದ್ದಾರೆ ಇಸ್ಲಾಮಾಬಾದ್ ಈ ಆರೋಪವನ್ನು ನಿರಾಕರಿಸುತ್ತಲೇ ಬಂದಿದೆ.
ಶನಿವಾರ ಮುಂಜಾನೆ, ಪಾಕಿಸ್ತಾನದ ಕ್ವೆಟ್ಟಾದಲ್ಲಿ ನಡೆದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟದಲ್ಲಿ ಒಬ್ಬ ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಫ್) ಸಿಬ್ಬಂದಿ ಸಾವನ್ನಪ್ಪಿದ್ದರು ಮತ್ತು ಆರು ಮಂದಿ ಗಾಯಗೊಂಡಿದ್ದರು. ಕರಣಿ ಪ್ರದೇಶದ ಬರೋರಿ ರಸ್ತೆಯಲ್ಲಿ ಎಟಿಎಫ್ ಗಸ್ತು ವಾಹನವನ್ನು ಗುರಿಯಾಗಿಸಿಕೊಂಡು ಸ್ಫೋಟಿಸಲಾಯಿತು. ಈ ಸ್ಫೋಟದಲ್ಲಿ ಏಳು ಅಧಿಕಾರಿಗಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆರು ಮಂದಿ ಗಾಯಗೊಂಡಿದ್ದರೆ, ಒಬ್ಬರು ಸಾವನ್ನಪ್ಪಿದ್ದಾರೆ.

Girl in a jacket
error: Content is protected !!