ಕುಡಿದು ಹೊಡೆದಾಡಿಕೊಂಡು ಮೂವರು ಬಿಹಾರಿ ಕಾರ್ಮಿಕರ ಕೊಲೆ
by-ಕೆಂಧೂಳಿ
ಆನೇಕಲ್,ಮಾ,೧೬-ಕುಡಿದ ಬಿಹಾರಿ ಕಾರ್ಮಿಕರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡ ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ಸರ್ಜಾಪುರ ಬಾಗಲೂರು ಮುಖ್ಯರಸ್ತೆಯ ತಿಂಡ್ಲು ಅಪಾರ್ಟ್ಮೆಂಟ್ವೊಂದರಲ್ಲಿ ನಡೆದಿದೆ.
ಬಿಹಾರ ಮೂಲದ ರಾಧೆಶ್ಯಾಮ್, ಕನ್ಸರ್ ಸೇರಿ ಮೂವರು ಕೊಲೆಯಾಗಿದ್ದಾರೆ. ಇನ್ನು ಮೃತ ರಾಧೆಶ್ಯಾಮ್ ತಮ್ಮ ಬಿರಾದಾರ್ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾನೆ. ಸೋನು ಮತ್ತು ಅವನ ಸ್ನೇಹಿತ ಕೊಲೆ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರೆಲ್ಲರೂ ಹೊಳಿಯ ಸಂಭ್ರಮದಲ್ಲಿ ಬಣ್ಣ ಎರಚಾಡುತ್ತಿದ್ದರು ಜೊತೆಗೆ ಕುಡಿದಿದ್ದರಿಂದ ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಂಡಿದ್ದಾರೆ, ಕುಡಿದ ಮತ್ತಿನಲ್ಲಿ ರಾಡ್ನಿಂದ ಹೊಡೆದ ಪರಿಣಾಮ ಈ ಘಟನೆ ನಡೆದಿದೆ.
ತಿಂಡ್ಲು ಬಳಿಯ ಟಿವಿಎಸ್ ಕಲ್ಯಾಣ ಮಂಟಪದ ಹಿಂದಿನ ನಿರ್ಮಾಣ ಹಂತದ ಫೋರ್ ವಾಲ್ ಅವಿನ್ಯೂ ಕಟ್ಟಡದ ಮೂರನೇ ಮಹಡಿಯಲ್ಲಿ ಕೊಲೆ ನಡೆದಿದೆ. ಇವರು ವಿವಿಧ ಗುತ್ತಿಗೆದಾರರ ಬಳಿ ಮರದ ಕೆಲಸಮಾಡುವ ಕಾರ್ಮಿಕರಾಗಿದ್ದಾರೆ.
ಶನಿವಾರ ರಾತ್ರಿ ಆರು ಮಂದಿ ಸ್ನೇಹಿತ ಪಾರ್ಟಿ ಮಾಡಿದ್ದರು. ಪಾರ್ಟಿಯ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆ ನಡೆದಿದೆ, ರಾಡ್ನಿಂದ ಮೂವರು ಉಳಿದ ಮೂವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಅವರಲ್ಲಿ ಓರ್ವ ತಪ್ಪೊಸಿಕೊಂಡು ಆಚೆಗೆ ಓಡಿ ಬಂದು ಜನರಿಗೆ ವಿಷಯ ತಿಳಿಸಿದ್ದಾನೆ. ಜನ ಮಹಡಿಗೆ ಹೋಗುವಷ್ಟರಲ್ಲಿ ಮೂವರು ಹತ್ಯೆಯಾಗಿ ಇಬ್ಬರು ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಗಾಯಗೊಂಡ ಬಿರಾದಾರ್ ಸರ್ಜಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.