ಚುನಾವಣೆ ನನ್ನ ನೇತೃದಲ್ಲೇ ನಡೆಯಲಿದೆ- ಡಿಕೆಶಿ
by-ಕೆಂಧೂಳಿ
ಬೆಂಗಳೂರು, ಫೆ,26-ನಾನು ಕೆಪಿಸಿಸಿ ಅಧ್ಯಕ್ಷ ಚುನಾವಣೆ ನನ್ನ ನೇತೃತ್ವದಲ್ಲಿಯೇ ನಡರಯುತ್ಯದೆ ಎಂದು ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ
ರಾಜ್ಯವಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ವೊದ್ಯಮಾನಗಳ ಕುರಿತು ನೀಡಿರುವ ಈ ಹೇಳಿಕೆ ತಮ್ಮ ವಿರೋಧಿ ಗುಂಪಿಗೆ ಸಂದೇಶ ರವಾನಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಇದ್ದೇನೆ. ಕಾಂಗ್ರೆಸ್ ನನ್ನನ್ನು ಡಿಸಿಎಂ ಮಾಡಿದೆ. ಈ ಹಿಂದೆ ಪ್ರಚಾರ ಸಮಿತಿ ಅಧ್ಯಕ್ಷ ಆಗಿದ್ದೆ. ನನಗೆ ನನ್ನದೇ ಆದ ಜನಪ್ರಿಯತೆ ಇದೆ. ನನ್ನನ್ನು ದೆಹಲಿ ಚುನಾವಣೆಗೂ ಕರಿತಾರೆ. ಬಿಹಾರ, ಕೇರಳ ಚುನಾವಣೆಗೂ ಕರೀತಾರೆ. ತಮಿಳೂನಾಡು ಆಂಧ್ರ, ತೆಲಂಗಾಣ ಚುನಾವಣೆಗೂ ಕರೆಯುತ್ತಾರೆ. ನಾಯತಕತ್ವ ಇದೆ ಅಂತಾನೇ ನನ್ನನ್ನ ಕರೆಯುತ್ತಾರೆ ಎಂದರು.
ದೆಹಲಿ ಭೇಟಿ ವಿಚಾರ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಹೈಕಮಾಂಡ್ ನಾಯಕರನ್ನು ಭೇಟಿ ಆಗಿದ್ದೇನೆ. ಪಾರ್ಟಿ ಕಚೇರಿ ನಮಗೆ ದೇವಸ್ಥಾನ ಇದ್ದ ಹಾಗೆ. ಕಾಂಗ್ರೆಸ್ ಕಚೇರಿಗೆ ಹೋಗದೆ ಬಿಜೆಪಿ ಕಚೇರಿ, ಅಥವಾ ಕೇಶವ ಕೃಪಕ್ಕೆ ಹೋಗಲೇ? ಎಂದು ಪ್ರಶ್ನಿಸಿದರು.
ನಾನು ಕಚೇರಿಯಲ್ಲಿ ಎಲ್ಲರ ಜೊತೆಗೆ ಮಾತನಾಡಿ ಬಂದಿದ್ದೇನೆ. ಇದರ ಹೊರತಾಗಿ ಬೇರೇನೂ ಇಲ್ಲ. ಇಶಾ ಫೌಂಡೇಶನ್ ಗೆ ನಾನು ಹೋಗಿದ್ದಕ್ಕೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.