ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಬಿಜೆಪಿ ರೆಬಲ್ ನಾಯಕ ಯತ್ನಾಳ್
by-ಕೆಂಧೂಳಿ
ಬೆಂಗಳೂರು, ಫೆ,21-ಗುರುವಾರವಷ್ಟೆ ಬಿಜೆಪಿ ಬಂಡಾಯ ನಾಯಕರು ಮುಂದಿನ ನಡೆ ಕುರಿತು ಸಭೆ ನಡೆಸಿದ ಬೆನ್ನಲ್ಲೇ ಶುಕ್ರವಾರ ಬೆಳಿಗ್ಗೆ ನಾಡದೇವತೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ರೆಬಲ್ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಪೂಜೆ ಸಲ್ಲಿಸಿದರು.
ಕೇಂದ್ರ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ನೋಟಿಸ್ ಗೆ ಪ್ರತಿಯಾಗಿ ಉತ್ತರ ಬರೆದಿರುವ ಫೈಲ್ ಅನ್ನು ಇಟ್ಟು ಪೂಜೆ ಸಲ್ಲಿಸಿದ್ದಾರೆ.
ನೋಟಿಸ್ ನಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ದೂರಿರುವ ಕುರಿತು ಮಾಹಿತಿ ಇದೆ ಎನ್ನಲಾಗಿದೆ . ಚಾಮುಂಡಿ ತಾಯಿ ಬಳಿ ಶಾಸಕ ಯತ್ನಾಳ್ ಸುಧೀರ್ಘ ಪ್ರಾರ್ಥನೆ ಸಲ್ಲಿಸಿದ್ದಾರೆ.
ಆರಂಭದಿಂದಲೂ ಬಿಜೆಪಿ ಬಂಡಾಯ ನಾಯಕರು ಚಾಮುಂಡಿ ತಾಯಿ ಮೊರೆ ಹೋಗಿದ್ದು, ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ ಬಂಡಾಯದ ಕಹಳೆ ಊದಿದ್ದರು.ಬಿ.ವೈ.ವಿಜಯೇಂದ್ರ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಶಾಸಕ ಯತ್ನಾಳ್, ಬಂಡಾಯದ ಬಳಿಕ ಮೂರನೇ ಬಾರಿಗೆ ಚಾಮುಂಡಿ ತಾಯಿ ದರ್ಶನ ಪಡೆದಿದ್ದಾರೆ.
ಸಭೆ ನಡೆಸಿದ ರೆಬಲ್ ನಾಯಕರು
ಯತ್ನಾಳ್ ನೇತೃತ್ವದ ಬಂಡಾಯ ನಾಯಕರು ಗುರುವಾರ( ನಿನ್ನೆ) ಸಧಾಶಿವನಗರದಲ್ಲಿರುವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ನಡೆಸಿದ್ದರು.
ಈ ಮೂಲಕ ನೋಟಿಸ್ ನೀಡಿದರೂ ವಿಜಯೇಂದ್ರ ಬದಲಾವಣೆ ಮಾಡಬೇಕೆಂಬ ತಮ್ಮ ಪಟ್ಟನ್ನು ಬಿಡುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಅಲ್ಲದೆ ವಿಜಯೇದ್ರ ಬಿರುದ್ದ ಯತ್ನಾಳ್ ಅಕ್ರೋಶ ವ್ಯಕ್ತ ಪಡಿಸಿದ್ದಾರೆ.