ಪಕ್ಷ ಆಕ್ಟೀವ್ ಗೊಳಿಸಲು ಜೆಡಿಎಸ್ ಸಮಾವೇಶಕ್ಕೆ ಸಿದ್ದತೆ

Share

ಪಕ್ಷ ಆಕ್ಟೀವ್ ಗೊಳಿಸಲು ಜೆಡಿಎಸ್ ಸಮಾವೇಶಕ್ಕೆ ಸಿದ್ದತೆ

by-ಕೆಂಧೂಳಿ

ಬೆಂಗಳೂರು,ಫೆ,೧೯- ಇಷ್ಟು ದಿನ ಮಂಕಾಗಿದ್ದ ಜೆಡಿಎಸ್ ಪಕ್ಷ ಈಗ ಕಾರ್ಯಕರ್ತರನ್ನು ಚುರುಕುಗೊಳಿಸಲು ಸಮಾವೇಶ ಹಮ್ಮಿಕೊಳ್ಳಲು ಸಿದ್ದೆತೆ ನಡೆಸುತ್ತಿದೆ. ಹಾಸನ ಅಥವಾ ತುಮಕೂರಿನಲ್ಲಿ ಸಮಾವೇಶ ಮಾಡುವ ಮೂಲಕ ನಮ್ಮ ಪಕ್ಷವೂ ಆಕ್ಟೀವ್ ಆಗಿದೆ ಎನ್ನುವ ಸಂದೇಶ ರವಾನಿಸಲಿದೆ.

ಕಾಂಗ್ರೆಸ್ ಪಕ್ಷ ಹಾಸನದಲ್ಲಿ ಸಮಾವೇಶ ಮಾಡಿದ ನಂತರ ಜೆಡಿಎಸ್ ಅಲ್ಲಿ ಅಸ್ತಿತ್ವವೇ ಕಳೆದುಕೊಳ್ಳುತ್ತಿದೆ ಎನ್ನುವ ಮಾತುಗಳು ಇದ್ದವು ಈ ನಡುವೆ ನಿಖಿಲ್ ಕುಮಾರಸ್ವಾಮಿ ಅವರನ್ನು ಜಡಿಎಸ್ ರಾಜ್ಯಾಧ್ಯಕ್ಷ ಮಾಡಲು ವರಷ್ಠಿರ ಹುಮ್ಮಸ್ಸಿನಲ್ಲಿದ್ದಾರೆ ಇದಕ್ಕೂ ಮುನ್ನ ಈ ಸಮಾವೇಶ ಮಡಲು ಮುಂದಾಗಿದೆ.


ಹಳೇ ಮೈಸೂರು ಭಾಗದಲ್ಲಿ ತನ್ನದೇ ಆದ ಪ್ರಾಬಲ್ಯ ಹೊಂದಿದ್ದ ಪಕ್ಷ ಇವತ್ತು ಇದ್ದು ಇಲ್ಲದಂತೆ ಭಾಸವಾಗುತ್ತಿದೆ. ಇದಕ್ಕೆ ಪಕ್ಷವನ್ನು ಮುನ್ನಡೆಸುತ್ತಿದ್ದ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರ ರಾಜಕೀಯದತ್ತ ಒಲವು ತೋರಿದ್ದೇ ಕಾರಣ ಎಂದು ಹೇಳಿದರೂ ಇವತ್ತಿನ ಪರಿಸ್ಥಿತಿಯಲ್ಲಿ ಅಧಿಕಾರ ಅನಿವಾರ್ಯವಾದ ಕಾರಣದಿಂದ ಅವರ ನಿರ್ಧಾರಗಳು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಪಕ್ಷ ಸಂಘಟನೆ ಎಲ್ಲೊ ಒಂದು ಕಡೆ ನೇಪಥ್ಯಕ್ಕೆ ಸರಿಯಿತಾ ಎಂಬ ಬೇಸರ ಪಕ್ಷದ ಕಾರ್ಯಕರ್ತರಲ್ಲಿ ಮೂಡುವ ಹೊತ್ತಿಗೆ ಈ ಸಮಾವೇಶ ನಡೆಸಲಿದೆ ಮತ್ತು ದೇವೇಗೌಡರು ಕೂಡ ಮತ್ತೆ ರಾಜ್ಯಾದ್ಯಂತ ಪ್ರವಾಸ ಮಾಡಿ ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ ಎನ್ನಲಾಗಿದೆ


ರಾಜ್ಯಕ್ಕೊಂದು ಪ್ರಬಲ ರಾಜಕೀಯ ಪಕ್ಷವಾಗಿ ಜೆಡಿಎಸ್ ಇವತ್ತು ಉಳಿದಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಇದಕ್ಕೆ ಕಾರಣಗಳು ಅನೇಕ ಇವೆ. ಆದರೆ ಕುಟುಂಬ ರಾಜಕಾರಣ ಮತ್ತು ಅಧಿಕಾರದ ಹಪಾಹಪಿ ಕೂಡ ಪಕ್ಷನ್ನು ಮಂಕು ಮಾಡಿತಾ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇವತ್ತಿಗೂ ದೇವೇಗೌಡರೇ ಇಳಿ ವಯಸ್ಸಿನಲ್ಲಿ ಪಕ್ಷ ಸಂಘಟನೆಗಾಗಿ ಬೀದಿಗಿಳಿಯುವಂತಹ ಪರಿಸ್ಥಿತಿ ಬಂದಿದೆ. ದೇವೇಗೌಡರು ಮತ್ತು ಹೆಚ್.ಡಿ.ಕುಮಾರಸ್ವಾಮಿ ಹೊರತು ಪಡಿಸಿದರೆ ಪಕ್ಷವನ್ನು ತೆಗೆದುಕೊಂಡು ಹೋಗುವ ನಾಯಕರೇ ಕಾಣದಂತಾಗಿದೆ. ಇಲ್ಲಿ ಪಕ್ಷವನ್ನು ಮುನ್ನೆಡೆಸುವ ಸಂಪೂರ್ಣ ಅಧಿಕಾರವನ್ನು ದೇವೇಗೌಡರ ಕುಟುಂಬದ ಹೊರತಾಗಿ ಇತರೆ ನಾಯಕರಿಗೆ ನೀಡದಿರುವುದು ಕೂಡ ಒಂದು ಕಾರಣ ಎನ್ನುವುದನ್ನು ತಳ್ಳಿಹಾಕಲಾಗುತ್ತಿಲ್ಲ.

ಅಂದು, ಇಂದು ಮತ್ತು ನಾಳೆಯೂ ದೇವೇಗೌಡರ ಕುಟುಂಬದ ಹೊರತಾಗಿ ಪಕ್ಷ ಉಳಿದು ಬೆಳೆಯುವುದು ಕಷ್ಟವೇ.. ಇವತ್ತು ಜೆಡಿಎಸ್ ಪಕ್ಷದ ನಾಯಕತ್ವವನ್ನು ಬೇರೆ ನಾಯಕರಿಗೆ ನೀಡಬಹುದಿತ್ತು. ಆ ಕೆಲಸ ಆದಂತೆ ಕಾಣುತ್ತಿಲ್ಲ. ಇವತ್ತಿನ ಹೋರಾಟಗಳು ಕೂಡ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿದೆ. ಇದನ್ನು ಗಮನಿಸಿದಾಗ ಪಕ್ಷದಲ್ಲಿ ಸುಮಾರು ೧೮ ಶಾಸಕರಿದ್ದರೂ ಪಕ್ಷವೇಕೆ ಹೀಗಾಗಿದೆ ಎಂಬ ಪ್ರಶ್ನೆಗಳು ಜನಸಾಮಾನ್ಯರಲ್ಲಿ ಮೂಡದಿರದು. ಪಕ್ಷವನ್ನು ಕುಟುಂಬದ ಆಚೆಗೆ ತಂದು ಕಟ್ಟಿ ಬೆಳೆಸುವ ನಾಯಕರು ಕೂಡ ಪಕ್ಷದಲ್ಲಿ ಗೋಚರಿಸುತ್ತಿಲ್ಲ.

ಪಕ್ಷದಲ್ಲಿ ಶಾಸಕರಾಗಿರುವ ಜಿ.ಟಿ.ದೇವೇಗೌಡರು ಸಚಿವರಾಗಿದ್ದವರು ಮತ್ತು ಒಕ್ಕಲಿಗ ನಾಯಕರೂ ಹೌದು ಆದರೆ ಅವರು ಹೆಚ್.ಡಿ.ದೇವೇಗೌಡರ ಕುಟುಂಬದೊಂದಿಗೆ ಮುನಿಸಿಕೊಂಡು ಪಕ್ಷದಲ್ಲಿದ್ದರೂ ಪಕ್ಷದಲ್ಲಿ ಇಲ್ಲದವರಂತೆ ಮುನ್ನಡೆಯುತ್ತಿದ್ದಾರೆ. ಹೀಗಾಗಿ ಈಗ ಪಕ್ಷದಲ್ಲಿ ಇರುವ ನಾಯಕರನ್ನೇ ವಿಶ್ವಾಸಕ್ಕೆ ತಗೆದುಕೊಂಡು ಪಕ್ಷ ಮುನ್ನೆಡೆಸಲು ಸಿದ್ದವಾಗಿದೆ ಅದು ಯಾವ ರೀತಿ ಮುನ್ನಡಿಸುತ್ತಾರೆ ಎನ್ನುವ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

Girl in a jacket
error: Content is protected !!