ಸೋಮಣ್ಣ ಶಾ ಬೇಟಿ-ವಿಜಯೇಂದ್ರಗೆ ಅಧ್ಯಕ್ಷಸ್ಥಾನ ಕೈತಪ್ಟುತ್ತಾ?

Share

ಸೋಮಣ್ಣ ಶಾ ಬೇಟಿ-ವಿಜಯೇಂದ್ರಗೆ ಅಧ್ಯಕ್ಷಸ್ಥಾನ ಕೈತಪ್ಟುತ್ತಾ?

by-ಕೆಂಧೂಳಿ
ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಬೀದಿ ರಂಪಾಟದ ರಗಳೆಗಳು ಮತ್ತು ಯಾಕೆ ಬಂಡಾಯ ಎನ್ನುವ ಕುರಿತು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ವಿವರವಾಗಿ ಶಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನುವುದು ಬಿಜೆಪಿ ಮೂಲಗಳ ಮಾಹಿತಿ.
ಹೌದು..ಶಾ ಬೇಟಿಗೂ ಮುನ್ನ ಸೋಮಣ್ಣ ಅವರ ನಿವಾಸದಲ್ಲಿ ಲಿಂಗಾಯತ ನಾಯಕರಾದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ,ಮಾಜಿ ಸಚಿವ ಮುರುಗೇಶ್ ನಿರಾಣಿ,ಬಸವನಗೌಡ ಪಾಟೀಲ್ ಯತ್ನಾಳ್ ಶಾಸಕ ಅವರಿಂದ್ ಬೆಲ್ಲದ ಅವರು ಸುದೀರ್ಘ ಚರ್ಚೆ ಮಾಡಿದ್ದರು.
ಶಾ ಬೇಟಿ ವೇಳೆ ಸೋಮಣ್ನ ರಾಜ್ಯದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಹೋಗುವವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಇಲ್ಲದಿದ್ದರೆ ಮುಂದಿನ ವಿಧಾನಸ ಸಭೆ ಚುನಾವಣೆಯಲ್ಲಿ ಮತ್ತೇ ಸೋಲು ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಹಾಲಿ ಅಧ್ಯಕ್ಷ ವಿಜಯೇಂದ್ರ ಅವರ ಧೋರಣೆ ಸರಿ ಇಲ್ಲ ಎಲ್ಲವನ್ನೂ ಅವರೇ ತೀರ್ಮಾನ ಮಾಡುತ್ತಾರೆ ಅವರ ದುರಂಹಕಾರ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹಿರಿಯ ನಾಯಕರು ಪದೆ ಪದೆ ಅವರ ವಿರುದ್ಧ ಬಂಡೇಳುತ್ತಾರೆ..ಮುಂದಿನ ಬಾರಿ ಲಿಂಗಾಯರ ಅಷ್ಟೂ ಮತಗಳು ಬೀಳಬೇಕು ಎಂದರೆ ಲಿಂಗಾಯತರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಎರಡು ಹೆಸರುಗಳನ್ನು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ ಒಂದು ಮಾಹಿತಿಯ ಪ್ರಕಾರ ಒಂದು ಬಸವರಾಜ್ ಬೊಮ್ಮಾಯಿ ಅಥವಾ ನಿರಾಣಿ ಇವರಿಬ್ಬರಲ್ಲಿ ಯರಾದರೂ ಅಧ್ಯಕ್ಷ ಸ್ಥಾನ ನೀಡಿದರೆ ಮುಂದಿನ ಚುನಾವಣೆಯಲ್ಲಿ ಗೆಲುವು ನಿಶ್ಚಿತ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ರಾಜ್ಯದ ಈ ಅಹಿತಕರ ಬೆಳವಣಿಗೆಗಳ ಮೂಲ ಕಾರಣ ಏನು ಯಾಕೆ ಹೀಗಾಗುತ್ತಿದೆ ಎನ್ನುವುದನ್ನು ಸೋಮಣ್ಣ ಸುದೀರ್ಘವಾಗಿ ಅವರಿಗೆ ತಿಳಿಸಿದ್ದಾರೆಂತೆ
ಅವರ ಬೇಟಿ ನಂತರ ಸೋಮಣ್ಣ ಮಾಧ್ಯಮಗಳ ಜೊತೆ ಮಾತನಾಡಿ ತುಮಕೂರು- ಚಿತ್ರದುರ್ಗ- ದಾವಣಗೆರೆ ರೈಲು ಯೋಜನೆಯ ಭಾಗವಾದ ತಿಮ್ಮರಾಜನಹಳ್ಳಿ ಮತ್ತು ತಾವರೆಕೆರೆ ಮಧ್ಯದ ಕಾಮಗಾರಿಗೆ ರೈಲ್ವೆ ಮಂಡಳಿಯು ಗೃಹ ಇಲಾಖೆಗೆ ಕಳುಹಿಸುವ ಪ್ರಸ್ತಾವನೆಗೆ ಅನುಮೋದನೆ ನೀಡುವಂತೆ ಶಾ ಅವರಲ್ಲಿ ಮನವಿಮಾಡಿದೆ. ಇದಕ್ಕೆ ಅವರು ಸ್ಪಂದಿಸಿದ್ದಾರೆ ಎಂದು ಸೋಮಣ್ಣ ತಿಳಿಸಿದ್ದಾರೆ.

Adavatigement

Girl in a jacket
error: Content is protected !!