ಬೆಳೆಗಳಿಗೆ ವಿದ್ಯುತ್ ಪೂರೈಸಲು ಆಗ್ರಹಿಸಿ ಬೆಸ್ಕಾಂ ವಿರುದ್ಧ ರೈತರ ಪ್ರತಿಭಟನೆ
by-ಕೆಂಧೂಳಿ
ಚಳ್ಳಕೆರೆ ,ಫೆ,20-ಬೆಸ್ಕಾಂ ನಿರ್ಕಕ್ಷ್ಯದಿಂದ ತಳಕು ವ್ಯಾಪ್ತಿಯ ವಿದ್ಯುತ್ ಸರಬುರಾಜು ಇಲ್ಲದೆ ಬೆಳೆಗಳು ಒಣಗಿತ್ತಿದ್ದು ಕೀಡಲೇ ವಿದ್ಯುತ್ ಸರಬುರಾಜು ನೀಡುವಂತೆ ರೈತರು ತಳಕು ಬೆಸ್ಕಾಂ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಬೇಡ ರೆಡ್ಡಿ ಹಳ್ಳಿ ಬಸವ ರೆಡ್ಡಿ ಅಧಿಕಾರಿಗಳ ನಿರ್ಲಕ್ಷತನಕ್ಕೆ ಇಂದು ಬೆಳೆ ಒಣಗುವ ಪರಿಸ್ಥಿತಿ ಬಂದಿದೆ ಎಂದು ದೂರಿದರು.
ಈ ಹಿಂದೆ ಇದೇ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಮನವಿ ಪತ್ರ ನೀಡಲಾಗಿತ್ತು ಅಂದು ಇನ್ನು ಒಂದು ವಾರದೊಳಗೆ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದರು,ಆದರೆ ಇಂದಿಗೂ ಯಾವುದೇ ಸಮಸ್ಯೆ ಬಗೆಹರಿಸಿಲ್ಲ ಆದರೆ ಎಚ್ಚೆತ್ತುಕೊಳ್ಳಲು ಅಧಿಕಾರಿಗಳು ರೈತರ ಆತ್ಮಹತ್ಯೆಗೆ ಪ್ರಚೋದನೆನೀಡುವಂತಾಗಿರುತ್ತಾರೆ ಇಂತಹ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಿ ಪಂಪ್ ಸೆಟ್ ಗಳಿಗೆ ತೋಟದ ಮನೆಗಳಿಗೆ ಸಕಾಲಕ್ಕೆ ವಿದ್ಯುತ್ ಪೂರೈಸಬೇಕು ಮತ್ತು ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು
ಇದೇ ವೇಳೆ ಮಾತನಾಡಿದ ಆರ್ ಬಿ ನಿಜಲಿಂಗಪ್ಪ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷಕ್ಕೆ ರೈತರು ಬೀದಿಗೆ ಬಂದಿದ್ದಾರೆ ರೈತರು ಸಾಲ ಮಾಡಿ ಬೆಳೆ ಇಟ್ಟಿದ್ದಾರೆ ಆದರೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷಕ್ಕೆ ಬೆಳೆ ಒಣಗುವ ಪರಿಸ್ಥಿತಿ ಬಂದಿದೆ ಈ ತಕ್ಷಣಕ್ಕೆ ಅಧಿಕಾರಿಗಳು ಸ್ಥಳಕ್ಕೆ ಹೋಗಿ ರೈತರ ಕಷ್ಟಗಳನ್ನು ಸರಿಪಡಿಸಬೇಕು ಎಂದು ತಿಳಿಸಿದರು
ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಹಿರಿಯೂರು ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಮಚಂದ್ರಪ್ಪ ಸುತಾರ ಮಾತನಾಡಿ ಇಂದು ಎರಡು ಮೂರು ದಿನಗಳಲ್ಲಿ ಎಲ್ಲಾ ಲೈನ್ ಗಳನ್ನು ದುರಸ್ತಿ ಮಾಡಿ ರೈತರಿಗೆ ವಿದ್ಯುತ್ತನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು ನಂತರ ಚಳುವಳಿಯನ್ನು ವಾಪಸ್ ಪಡೆಯಲಾಯಿತು
ಪ್ರತಿಭಟನೆಯಲ್ಲಿ ಮುಖಂಡರು ಮಂಜಣ್ಣ ಮೀಸೆ ತಿಪ್ಪೇಸ್ವಾಮಿ ಚಿಕ್ಕಹಳ್ಳಿ ರಂಗಾರೆಡ್ಡಿ ನರಸಿಂಹ ರೆಡ್ಡಿ ಅಶೋಕ್ ನಾಗೇಂದ್ರಪ್ಪ ಬಸವ ರೆಡ್ಡಿ ರಾಮ್ ರೆಡ್ಡಿ ಮಲ್ಲಿಕಾರ್ಜುನ್ ರೆಡ್ಡಿ ಬಿವಿ ತಿಪ್ಪೇಸ್ವಾಮಿ ಸಾವಿರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು