ಎಎಪಿಗೆ ಹೀನಾಯ ಸೋಲು,ದೆಹಲಿ ಗದ್ದುಗೆ ಹಿಡಿದ ಬಿಜೆಪಿ
by- ಕೆಂಧೂಳಿ
ನವದೆಹಲಿ, ಫೆ,08- ಎಎಪಿಯ ಹಗರಣಗಳು ಸೋಲಿಗೆ ಕಾರಣವಾಗಿದ್ದರೆ ಬಿಜೆಪಿಗೆ ಗ್ಯಾರಂಟಿಗಳು ಕೈಹಿಡಿದವು,ಕಾಂಗ್ರೆಸ್ ಕೊನೆಗೂ ಬುದ್ದಿಕಲಿಯಲಿಲ್ಲ ಹೀಗಾಗಿ ದೆಹಲಿ ಗದ್ದಿಗೆ ಮೇಲೆ ಕಮಲ ಅರಳಿದೆ.

Adavatigement
ವಿಧಾನಸಭೆ ಚುನಾವಣೆ ಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಮೂರು ಪಕ್ಷಗಳು ದೆಹಲಿಗದ್ದುಗೆಗೆ ಹಲವು ಪ್ರಯತ್ನಗಳನ್ನು ಮಾಡುತ್ತಲೆ ಅಧಿಕಾರಕ್ಕೆ ಕರ್ನಾಟಕ ಮಾದರಿ ಗ್ಯಾರಂಟಿ ಘೋಷಣೆಗಳೆ ಗೆಲುವಿನ ಕದ ತಗೆಯಲು ಸಾಧ್ಯ ಎನ್ನುವುದನ್ನು ಮನಗೊಂಡು ಮೂರುವಪಕ್ಷಗಳು ಗ್ಯಾರಂಟಿಗಳನ್ನು ಘೋಷಿಸಿದ್ದವು.
ಎಎಪಿ ಈ ಮುಂಚೆಯೇ ಹಲವು ಉಚಿತ ಯೋಜನೆಗಳು ಜನಪ್ರಿಯಗೊಂಡಿದ್ದವು ಆದರೆ ಎಎಪಿ ವರಿಷ್ಟ ಅರವಿಂದ ಕೇಜ್ರಿವಾಲ್ ಮಾಡಿಕೊಂಡ ಹಗರಣ ಸದ್ದು ಮಾಡಿದವು..ಅಲ್ಲದೆ ಭ್ರಷ್ಟಾಚಾರ ಹೊಡಿದೋಡಿಸುತ್ತೇನೆ ಎಂದು ಪೊರಕೆ ಚಿನ್ಹಯನ್ನೆ ಪಡೆದುಕೊಂಡು ಸ್ವಚ್ಚ ಆಡಳಿತ ನಡೆಸುವ ಭರವಸೆಯೊಂದಿಗೆ ಮುನ್ನುಗ್ಗಿ ಗೆದ್ದಿದ್ದರು,ಎರಡನೇ ಬಾರಿಯೂ ಗೆದ್ದು ಅಧಿಕಾರ ನಡೆಸಿದ್ದರು ಆದರೆ ಅವರ ಅಧಿಕಾರದ ದಾಹ ಕೆಲವು ಹಗರಣಗಳು ಕಾರಣವಾದವು ಅದನ್ನು ಜನರಿಗೆ ತಿಳಿಸಲು ಬಿಜೆಪಿ ನಡೆಸಿದ ತಂತ್ರ ಯಶಸ್ವಿಯಾಯಿತು.ಇದೆ ಹೊತ್ತಿಗೆ ಬಂದ ಚುನಾವಣೆ ಜನರ ಮನಸ್ಸಿನಲ್ಲಿ ಕೇಜ್ರಿವಾಲ ಕೂಡ ವಿಶೇಷವಲ್ಲ ಎನ್ನುವುದು ಸ್ಪಷ್ಟವಾಯಿತು.
ಇನ್ನೂ ಕಾಂಗ್ರೆಸ್ ಜೊತೆ ಕೈ ಹಿಡಿದು ನಡೆದಿದ್ದರೆ ಒಂದಿಷ್ಟು ಮರ್ಯಾದೆ ಉಳಿಯುತ್ತಿತ್ತು ಆದರೆ ತಮ್ಮ ದುರಹಂಕಾರದಿಂದ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎನ್ನುವ ಅವರ ನಡೆ ಇಂದಿನ ಹೀನಾಯ ಸೋಲಿಗೆ ಕಾರಣವಾಗಿದೆ.ಸ್ವತಃ ಅರವಿಂದ್ ಕೇಜ್ರಿವಾಲ್ ಕೂಡ ಗೆಲ್ಲಲಾಗದಷ್ಟು ಸೋಲು ಪಕ್ಷ ಸೋಲು ಕಂಡಿದೆ.
ಆದರೆ ಬಿಜೆಪಿಯ ಮೂರು ವಿಷಯಗಳು ಈ ಗೆಲುವಿಗೆ ಕಾರಣವಾದವು,ಗ್ಯಾರಂಟಿ ಘೋಷಣಡ,ಚುನಾವಣೆ ಹೊತ್ತಲ್ಲೆ ಕಭ ಮೇಳ ಮತ್ತು ಎಎಪಿ ವೈಫಲ್ಯವನ್ನು ಜನರಿಗೆ ತಿಳಿಸುವ ಕಾರ್ಯ ಯಶಸ್ವಿಯಾಗಿ ಮಾಡಿದರು ಇದು ಬಿಜೆಪಿ ಗೆಲುವಿಗೆ ಕಾರಣವಾಯಿತು.
ಇದೆಲ್ಲಕ್ಕಿಂತಲೂ ಕಾಂಗ್ರೆಸ್ ತನ್ನ ಅಸ್ತಿತ್ವವನ್ನೆ ಕಳೆದುಕೊಳ್ಳಲು ರಾಹುಲ್ ಗಾಂಧಿಯವಹೇಳಿಕೆಗಳು ಅವರ ನಡೆ ಈ ಸೋಲಿಗೆ ಪ್ರಮುಖ ಕಾರಣಗಳಾಗಿವೆ