ಬಿಜೆಪಿ ಎಂದರೆ ಬುರುಡೆ ಪಕ್ಷ- ರಾಮಲಿಂಗ ರೆಡ್ಡಿ
by-ಕೆಂಧೂಳಿ
ಬೆಂಗಳೂರು, ಫೆ,07-ಬಿಜೆಪಿ ಎಂದರೆ ಬುರುಡೆ ಜನರ ಪಕ್ಷ, ಅವರಿಗೆ ಬುರುಡೆಯಲ್ಲಿ ಮೆದುಳು ಇದೆಯೋ ಇಲ್ಲವೋ ಗೊತ್ತಿಲ್ಲ. ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಬಿಜೆಪಿಗೆ ಖಡಕ್ ಉತ್ತರ ನೀಡಿದ್ದಾರೆ.
ಪದೇ ಪದೇ ಬಿಜೆಪಿ ಕರ್ನಾಟಕ ಸುಳ್ಳು ಲೆಕ್ಕವನ್ನು ಕೊಡುತ್ತಿದೆ, ಈ ಮೂಲಕ ಬಿಜೆಪಿಗೆ ಮುಖಭಂಗವಾಗುತ್ತಿದೆ ಎಂದು ಸಾರಿಗೆ ಸಚಿವರು ಹೇಳುತ್ತಿದ್ದರು. ಇದೀಗ ನೇರವಾಗಿ ಬಿಜೆಪಿ ಎಂದರೆ ಬುರುಡೆ ಜನರ ಪಕ್ಷ ಎನ್ನುವ ಮೂಲಕ ಬಿಜೆಪಿ ಆರೋಪಕ್ಕೆ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

Adavatigement
ಮೊದಲಿಗೆ ಟ್ವೀಟ್ ಮಾಡಿದ್ದ ಬಿಜೆಪಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಹೆಸರನ್ನು ಪ್ರಸ್ತಾಪ ಮಾಡಿ ಆರೋಪ ಮಾಡಿತ್ತು. ಅಲ್ಲದೆ ಈ ರೀತಿ ಬಿಜೆಪಿ ಕರ್ನಾಟಕ ಮಾಡಿದ್ದ ಟ್ವೀಟ್ ಬಗ್ಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ಹೊರ ಹಾಕುತ್ತಿದ್ದರು. ಇಂತಹ ಸಂದರ್ಭದಲ್ಲೇ ನೇರವಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ಬಿಜೆಪಿ ಎಂದರೆ ಬುರುಡೆ ಜನರ ಪಕ್ಷ, ಅವರಿಗೆ ಬುರುಡೆಯಲ್ಲಿ ಮೆದುಳು ಇದೆಯೋ ಇಲ್ಲವೋ ಗೊತ್ತಿಲ್ಲ.’ ಎಂದು ಟ್ವೀಟ್ ಮಾಡಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ತಮ್ಮ ಬಗ್ಗೆ ಬಿಜೆಪಿ ಮಾಡಿದ್ದ ಆರೋಪಕ್ಕೆ ಟ್ವೀಟ್ ಮೂಲಕ ಉತ್ತರ ನೀಡಿದ್ದಾರೆ. ‘@BJP4Karnataka ಎಂದರೆ ಬುರುಡೆ ಜನರ ಪಕ್ಷ, ಅವರಿಗೆ ಬುರುಡೆಯಲ್ಲಿ ಮೆದುಳು ಇದೆಯೋ ಇಲ್ಲವೋ ಗೊತ್ತಿಲ್ಲ. ಬುರುಡೆ ಜನರೆಲ್ಲ ಕೂಡಿಕೊಂಡು ಪುಖಾಂನುಪುಂಖವಾಗಿ ಸುಳ್ಳನ್ನೇ ಸತ್ಯವೆಂದು ಬಿಂಬಿಸುವ ಬುರುಡೆ ಪಕ್ಷ ದವರೇ.. ಸಾರಿಗೆ ಸಂಸ್ಥೆಗಳು ಲೋನ್ ತೆಗೆದುಕೊಳ್ಳಬೇಕು ಯಾಕೆಂದರೆ, ತಮ್ಮ ಪಕ್ಷದ ದುರಾಡಳಿತದ ಅವಧಿಯಲ್ಲಿನ ₹5900 ಕೋಟಿ ಸಾಲ ತೀರಿಸಬೇಕಾದ ಅನಿವಾರ್ಯತೆ ಇದೆಯಲ್ಲ ಅದಕ್ಕೆ.’
‘ಲಾಭ ಆಗಿದೆ ಎಂದು ನಾವು ಎಲ್ಲೂ ಹೇಳಿಲ್ಲ’
‘ಸಾರಿಗೆ ಸಂಸ್ಥೆಗಳ ಆದಾಯ ವೃದ್ದಿಯಾಗಿದೆ ಎಂದೇ ನಾವು ಪದೇ ಪದೇ ಹೇಳುತ್ತಿರುವುದು. ಲಾಭ ಆಗಿದೆ ಎಂದು ನಾವು ಎಲ್ಲೂ ಹೇಳಿಲ್ಲ. ಆದಾಯ ಮತ್ತು ಲಾಭಕ್ಕೆ ವ್ಯತ್ಯಾಸ ತಿಳಿಯದ, ಸಾಮಾನ್ಯ ಗಣಿತವು ಬಾರದ ಅಜ್ಞಾನಿಗಳು ಬಿ.ಜೆ.ಪಿ ಅವರು.’ ಎಂದು ಕಮಲ ಪಾಳಯಕ್ಕೆ ಇದೀಗ ತಿರುಗೇಟು ನೀಡಿದ್ದಾರೆ ಸಾರಿಗೆ ಸಚಿವರು. ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ತಿಕ್ಕಾಟ ಜೋರಾಗಿದೆ.