ಎಲ್ ಡಿ ಇ ಸಂಸ್ಥೆಯಿಂದ 65 ಸಂಪುಟಗಳಲ್ಲಿ ದಾಸಸಾಹಿತ್ಯ ಪ್ರಕಟ: ಎಂ ಬಿ ಪಾಟೀಲ
ಬೆಂಗಳೂರು,ಆ,30–ಶ್ರೀಸಾಮಾನ್ಯನ ನುಡಿಗಟ್ಟಿನಲ್ಲ ಭಕ್ತಿ ಮತ್ತು ಭಗವಂತನ ಪಾರಮ್ಯವನ್ನು ಗೇಯತೆಯ ಧ್ವನಿಯಲ್ಲಿ ಸಾರಿದ್ದು ದಾಸಸಾಹಿತ್ಯದ ಹಿರಿಮೆಯಾಗಿದೆ. ಇಂತಹ ದಾಸಸಾಹಿತ್ಯದ 65 ಸಂಪುಟಗಳನ್ನು ತಮ್ಮ ನೇತೃತ್ವದ ಬಿ.ಎಲ್.ಡಿ.ಇ. ಶಿಕ್ಷಣ ಸಂಸ್ಥೆಯ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಮೂಲಕ ಪ್ರಕಟಿಸಲಾಗುತ್ತಿದೆ. ಇವುಗಳ ಪೈಕಿ ಈಗಾಗಲೇ ಅರವತ್ತಕ್ಕೂ ಹೆಚ್ಚು ಸಂಪುಟಗಳು ಬಿಡುಗಡೆಗೆ ಸಿದ್ಧವಾಗಿವೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ಕಾಗಿನೆಲೆ ಮಹಾಸಂಸ್ಥಾನ ಪೀಠವು ಶನಿವಾರ ಇಲ್ಲಿನ ಕೇತೋಹಳ್ಳಿಯಲ್ಲಿ ಏರ್ಪಡಿಸಿದ್ದ, ಕನಕದಾಸ ಸಾಹಿತ್ಯದ ವೈಚಾರಿಕ ಅನುಸಂಧಾನದ ‘ತಲ್ಲಣಿಸದಿರು ಮನವೇ’ ವಿಚಾರ…