Girl in a jacket

Daily Archives: August 11, 2025

ಅಮೇಜಾನ್ ಓಟಿಟಿಯಲ್ಲಿ ಈ ವಾರ ‘ತಿಮ್ಮನ ಮೊಟ್ಟೆಗಳು’ ಚಿತ್ರ

ಕಳೆದ ಜೂನ್ 27 ಕ್ಕೆ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ನೋಡುಗರಿಂದ ಒಳ್ಳೆಯ ಅಭಿಪ್ರಾಯ ಪಡೆದಿದ್ದ “ತಿಮ್ಮನ ಮೊಟ್ಟೆಗಳು” ಚಿತ್ರ “ಅಮೇಜಾನ್ ಪ್ರೈಮ್ ವಿಡಿಯೋ”ott ಯಲ್ಲಿ ಈ ವಾರ ಬಿಡುಗಡೆಯಾಗಿ ಜನಮನ್ನಣೆ ಪಡೆಯುತ್ತಿದೆ. ರಕ್ಷಿತ್ ತೀರ್ಥಹಳ್ಳಿ ನಿರ್ದೇಶನ ಮತ್ತು ಆದರ್ಶ್ ಅಯ್ಯಂಗಾರ್ ನಿರ್ಮಾಣ ಚಿತ್ರಕ್ಕಿದ್ದು ಕಾಳಿಂಗ ಹಾವು ಮತ್ತು ಮನುಷ್ಯನ ಸಂಭಂದವನ್ನು ಪ್ರಕೃತಿ ಜೊತೆಗೆ ಚಿತ್ರಿಸಲಾಗಿದೆ.

ಸಾರಂಗಿ ಚಿತ್ರದಲ್ಲಿ ಎರಡೇ ಪಾತ್ರಗಳು

ಹೊಸತಂಡದ ಹೊಸಪ್ರಯತ್ನಗಳು ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುತ್ತದೆ. ಅಂತಹ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ “ಸಾರಂಗಿ”. ಈ ಚಿತ್ರದಲ್ಲಿ ಕೇವಲ ಎರಡೇ ಪಾತ್ರಗಳಿರುವುದು ವಿಶೇಷ. ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ನೀಡಿದರು. ಮನುಷ್ಯ ದಿನ ಬೆಳಗ್ಗಾದರೆ ಎಲ್ಲರ ಮುಂದೆ ಒಂದೊಂದು ತರಹದ ಮುಖವಾಡ ಧರಿಸಿ ಜೀವನ ನಡೆಸುತ್ತಿರುತ್ತಾನೆ. ಆದರೆ, ಒಂದು ಅನಿರೀಕ್ಷಿತ ಸನ್ನಿವೇಶ ಎದುರಾದಾಗ ನಾವು ನಮ್ಮ ಮೌಲ್ಯಗಳನ್ನು ಉಳಸಿಕೊಳ್ಳುತ್ತೇವಾ? ಅದರಿಂದ ಹೇಗೆ ಪಾರಾಗುತ್ತೇವೆ ಎಂಬುದೆ ಚಿತ್ರದ ಕಥಾಸಾರಾಂಶ. ಜೆ.ಆಚಾರ್ ಈ ಚಿತ್ರದ ನಿರ್ದೇಶಕರು.…

ಆ.11ರಂದು ಗೋoಧಿ ಚಟ್ನಹಳ್ಳಿ ನಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನ ಉದ್ಘಾಟನೆ

ಶಿವಮೊಗ್ಗ,ಆ,11-ನೂತನವಾಗಿ ನಿರ್ಮಿಸಿರುವ ಗೋoಧಿ ಚಟ್ನಹಳ್ಳಿ ನಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನ ಪ್ರವೇಶ ಹಾಗೂ ವಿಗ್ರಹ ಪ್ರತಿಷ್ಠಾಪನೆ ಕಳಸರೋಹಣ ಅಷ್ಟ ಬಂಧನ ಮಹಾ ಕುಂಭ ಅಭಿಷೇಕ ಮಹೋತ್ಸವ ಆಗಸ್ಟ್ 13 ರಂದು ನೆರವೇರಲಿದೆ. ಅಂದು ಬೆಳಗ್ಗೆ ಪೂಜೆ ಆರಂಭಗೊಂಡು ದಿ. 14 ಗುರುವಾರ ಬೆಳಿಗ್ಗೆ 9:00 ರಿಂದ 10.30 ರವರೆಗೆ ನಡೆಯುವ ನೂತನ ದೇವಸ್ಥಾನ ಪ್ರವೇಶ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ ಅಷ್ಟ ಬಂಧನ ಮತ್ತು ಮಾಹಾ ಕುಂಭಾಭಿಷೇಕ ಕಾರ್ಯಕ್ರಮವು ಬಹು ವಿಜೃಂಭಣೆಯಿಂದ ನಡೆಯಲಿದೆ.  ಅಭಿಷೇಕವನ್ನು…

Girl in a jacket