ಬೆಂಗಳೂರು ನಗರ ವಿಶ್ವವಿದ್ಯಾನಿಲಯ; *ಕಣ್ಮನ ಸೂರೆಗೊಂಡ ವಿನ್ಯಾಸ ವೈಭವ-2 ಫ್ಯಾಷನ್ ಶೋ
ಬೆಂಗಳೂರು,ಆ,-04- ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಫ್ಯಾಷನ್ ಮತ್ತು ಉಡುಪು ವಿನ್ಯಾಸ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ “ವಿನ್ಯಾಸ ವೈಭವ-2” ಫ್ಯಾಷನ್ ಶೋ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡು ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಒಟ್ಟು 12 ತಂಡಗಳ 64 ವಿದ್ಯಾರ್ಥಿಗಳು ವಿವಿಧ ಪರಿಕಲ್ಪನೆಗಳನ್ನು ಆಧರಿಸಿದ ವರ್ಣರಂಜಿತ ಉಡುಪು ವಿನ್ಯಾಸ ಪ್ರದರ್ಶಿಸುತ್ತಾ ಆಕರ್ಷಕ ಹಾವಭಾವಗಳ ಬಿಂಕದ ನಡಿಗೆಯ ಮೂಲಕ ಸಭಿಕರನ್ನು ಬೆರಗುಗೊಳಿಸಿದರು. ಝಗಮಗಿಸುವ ಬೆಳಕಿನ ಚಿತ್ತಾರಗಳ ಹಿನ್ನೆಲೆಯ ವೇದಿಕೆಯ ಮೇಲೆ ಸಾಂಪ್ರದಾಯಿಕ…