ಬೆಂಗಳೂರು ವಿ.ವಿ.ಯಲ್ಲಿ ಆತ್ಮೀಯ ಬಿಳ್ಕೊಡಿಗೆ ಸಮಾರಂಭ
ಬೆಂಗಳೂರು ,ಆ,02- ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎಸ್.ಹರಿಪ್ರಸಾದ್ ಹಾಗೂ ಆಡಳಿತ ವಿಭಾಗದ ಅಧೀಕ್ಷಕರಾದ ಟಿ.ಪದ್ಮಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಿ ಅಭಿನಂದಿಸಲಾಯಿತು. ಸೆಂಟ್ರಲ್ ಕಾಲೇಜಿನ ಸರ್ ಸಿ.ವಿ.ರಾಮನ್ ಹಾಲ್ ನಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಪ್ರಭಾರ ಕುಲಪತಿಗಳಾದ ಪ್ರೊ. ಕೆ.ಆರ್.ಜಲಜಾ, ನೂತನ ಕುಲಸಚಿವರಾದ ನವೀನ್ ಜೋಸೆಫ್, ಕುಲಸಚಿವ (ಮೌಲ್ಯಮಾಪನ) ಪ್ರೊ. ಬಿ.ರಮೇಶ್ ಹಾಗೂ ವಿತ್ತಾಧಿಕಾರಿಗಳಾದ ಎಂ.ವಿ. ವಿಜಯಲಕ್ಷ್ಮಿ ಉಭಯತ್ರರನ್ನು ಸನ್ಮಾನಿಸಿ ಅಭಿನಂದಿಸಿದರು. ವಿಶ್ವವಿದ್ಯಾನಿಲಯದ ಪ್ರಗತಿಯ ಹಾದಿಯಲ್ಲಿ ಇದರಿಬ್ಬರ ಅತ್ಯಮೂಲ್ಯ ಕೊಡುಗೆಯನ್ನು ಕೃತಜ್ಞತೆಯಿಂದ…