Girl in a jacket

Daily Archives: July 30, 2025

ಧರ್ಮಸ್ಥಳ ಹೂತಿಟ್ಟ ಶವ ಪ್ರಕರಣ ; ರವಿಕೆ ಪತ್ತೆ

ಧರ್ಮಸ್ಥಳ, ಜು,30-ನಿಗೂಢ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಐಟಿ ನಡೆಸುತ್ತಿರುವ ಶೋಧ ಕಾರ್ಯದಲ್ಲಿ ಮಹಿಳೆ ರವಿಕೆ ಪತ್ತೆಯಾಗಿದ್ದು ಮಹತ್ವದ ಸುಳಿವು ದೊರೆತಂತಾಗಿದೆ. ಕಳೆದ ಎರಡು ದಿನಗಳಿಂದ ಇಲ್ಲಿ ನಡೆಯುತ್ತಿರುವ ಶೋಧ ಕಾರ್ಯದಲ್ಲಿ ಗುಂಡಿ ಅಗೆದರೂ ಯಾವುದೆ ಸುಳಿವು ಸಿಕ್ಕಿರಲಿಲ್ಲ ಈಗ ದೊರೆತಿರುವ ರವಿಕೆ ಮಹತ್ವದ ಸುಳಿವು ದೊರೆತಂತಾಗಿದೆ. ಸೈಟ್ ನಂ.1ರಲ್ಲಿ 2.5 ಅಡಿ ಆಳದಲ್ಲಿ ಹರಿದ ಕೆಂಪು ರವಿಕೆ, ಪಾನ್ ಕಾರ್ಡ್, ಎಟಿಎಂ ಕಾರ್ಡ್ ಪತ್ತೆಯಾಗಿವೆ. ಸೈಟ್ ನಂ.1ರಲ್ಲಿ ಪತ್ತೆಯಾದಿರುವಂತ ಎಟಿಎಂ ಕಾರ್ಡ್ ನಲ್ಲಿ ಪುರುಷನ ಹೆಸರು…

ರಾಹುಲ್ ಗಾಂಧಿ ಪಾದಯಾತ್ರೆಗೆ ಯಾವ ನಿಯಮದಡಿ ಅವಕಾಶ: @ ಆರ್‌.ಅಶೋಕ ಪ್ರಶ್ನೆ

ಬೆಂಗಳೂರು, ಜು, 30-ಬುದ್ಧಿ ಕಡಿಮೆ ಇರುವ ರಾಹುಲ್‌ ಗಾಂಧಿಯವರ ಪಾದಯಾತ್ರೆಗೆ ಯಾವ ನಿಯಮದಡಿ ಅವಕಾಶ ನೀಡುತ್ತಾರೆ? ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಪ್ರಶ್ನೆ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲೋಕಸಭಾ ಚುನಾವಣೆ ನಡೆದಾಗ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಆಗ ಚುನಾವಣೆಯಲ್ಲಿ ಅಕ್ರಮ ಆಗಿದ್ದರೆ ಚುನಾವಣಾ ಆಯೋಗಕ್ಕೆ ದೂರು ನೀಡಬಹುದು ಎಂಬ ಕಾಮನ್‌ಸೆನ್ಸ್‌ ರಾಹುಲ್‌ ಗಾಂಧಿಗೆ ಇಲ್ಲ. ಅದಕ್ಕಾಗಿಯೇ ಅವರು ರಾಜ್ಯಕ್ಕೆ ಬಂದು ಪಾದಯಾತ್ರೆ ಮಾಡುತ್ತಿದ್ದಾರೆ. ಯಾವುದೇ ಯಾತ್ರೆಗೆ ಅನುಮತಿ ನೀಡಬಾರದು ಎಂದು ಕೋರ್ಟ್‌ ಆದೇಶ ಇರುವಾಗ ಅನುಮತಿ…

ಕೇಂದ್ರದಿಂದ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ .ಎನ್ ಚಲುವರಾಯಸ್ವಾಮಿ

ಬೆಂಗಳೂರು, ಜು 30-ಕೇಂದ್ರ ಸರ್ಕಾರದಿಂದ ಯೂರಿಯಾ ಪೂರೈಕೆ ಕೊರತೆಯಾದ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಿತರಣೆಯಲ್ಲಿ ಸಮಸ್ಯೆಯಾಗಿದ್ದು, ಅದನ್ನು ನಿಭಾಯಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಗೊಂದಲಗಳು ಬಗೆಹರಿಯಲಿವೆ ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಸ್ಫಷ್ಟಪಡಿಸಿದ್ದಾರೆ. ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಸಚಿವರು ರಾಜ್ಯದಲ್ಲಿ ಕಳೆದ 2ವರ್ಷಗಳಲ್ಲಿ 3 ಮುಂಗಾರು ಹಂಗಾಮಿನಲ್ಲಿ ಇದೇ ಸರ್ಕಾರ ಅಧಿಕಾರದಲ್ಲಿದೆ. ನಾನೇ ಕೃಷಿ ಸಚಿವನಾಗಿ ಇದ್ದೇನೆ. ಈ ವರಗೆ ಉಂಟಾಗದ ಸಮಸ್ಯೆ ಈಗೇಕೆ ಎಂಬುದನ್ನು ವಿಶ್ಲೇಷಿಸಬೇಕಾಗಿದೆ ಎಂದು…

ಕಾಂಗ್ರೆಸ್ ಬಳಿ ಪುರಾವೆ ಇದ್ದರೆ ನ್ಯಾಯಾಲಯಕ್ಕೆ ಸಲ್ಲಿಸಲು ವಿಜಯೇಂದ್ರ ಸವಾಲು

ಬೆಂಗಳೂರು,ಜು,30 ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಾಗದೆ ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ ಪಕ್ಷವು ಚುನಾವಣಾ ಅಕ್ರಮದ ಹೊಸ ಕಪಟ ನಾಟಕ ಮಾಡುತ್ತಿದೆ. ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಈ ಕಪಟ ನಾಟಕ ಮಾಡಲು ಮುಂದಾದಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಆಗಸ್ಟ್ 4 ಅಥವಾ 5ರಂದು ಬೆಂಗಳೂರಿಗೆ ಬಂದು ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಭಟನೆ; ಪಾದಯಾತ್ರೆ ಅಥವಾ…

ಬೆಂಗಳೂರಿನಲ್ಲಿ ಆಲ್ ಖೈದಾ ಉಗ್ರ ಸಂಘಟನೆ ನಾಯಕಿ ಯ ಬಂಧನ

ಬೆಂಗಳೂರು, ಜು,30-ಭಯೋತ್ಪಾದನಾ ಸಂಘನೆಗಳೊಂದಿಗೆ ಸಂಬಂಧ ಹೊಂದಿರುವವರ ವಿರುದ್ಧ ಸಮರ ಸಾರಿರುವ ವಿಶೇಷ ತನಿಖಾ ದಳ ಬೆಂಗಳೂರಿನಲ್ಲಿ ನೆಲಸಿದ್ದನ್ನು ಪತ್ತೆ ಹಚ್ಚಿದೆ. ಆಪರೇಷನ್ ಸಿಂಧೂರ ನಂತರ ದೇಶದಲ್ಲಿ ಉಗ್ರರ ಜೊತೆ ನಂಟು ಹೊಂದಿ ವಿವಿಧ ರಾಜ್ಯಗಳಲ್ಲಿ ನೆಲಸಿ ಮಾಹಿತಿ ಸಂಗ್ರಹಿದ್ದವರನ್ನು ಬಂಧಿಸುತ್ತಾ ಬಂದಿದೆ. ಗುಜರಾತ್ ಎಟಿಎಸ್ ಬೆಂಗಳೂರಿನ ಮಹಿಳೆಯನ್ನು ಬಂಧಿಸಿದೆ, ಅವರು ಭಯಾನಕ ಭಯೋತ್ಪಾದಕ ಸಂಘಟನೆ ಅಲ್ ಖೈದಾ ಜೊತೆ ಸಂಬಂಧ ಹೊಂದಿದ್ದಾರೆಂದು ಹೇಳಲಾಗುತ್ತದೆ. ಮಹಿಳೆಯ ಹೆಸರು ಶಮಾ ಪರ್ವೀನ್, ಈಕೆಗೆ 30 ವರ್ಷ. ಗುಪ್ತಚರ ಮಾಹಿತಿಯ ಆಧಾರದ…

Girl in a jacket