ನಿಕ್ಕಂ, ಸೇರಿ ನಾಲ್ವರು ರಾಜ್ಯ ಸಭೆಗೆ ನಾಮ ನಿರ್ದೇಶನ
ನವದೆಹಲಿ,ಜು.೧೩- ಸಾರ್ವಜನಿಕ ಸೇವೆ,ಕಾನೂನು,ರಾಜತಾಂತ್ರಿಕತೆ ಮತ್ತು ವಿದ್ವಾಂಸರ ಕೊಡಿಗೆಗಳನ್ನು ಪರಿಗಣಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಸಭೆಗೆ ನಾಲ್ಕು ಗಣ್ಯ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿದ್ದಾರೆ. ನಾಮನಿರ್ದೇಶಿತರಾದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಅನುಭವಿ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಿಂ, ಕೇರಳ ಮೂಲದ ಶಿಕ್ಷಣ ತಜ್ಞ ಮತ್ತು ಸಮಾಜಿಕ ಕಾರ್ಯಕರ್ತ ಸಿ.ಸದಾನಂದನ್ ಮಾಸ್ಟರ್ ಮತ್ತು ಖ್ಯಾತ ಇತಿಹಾಸಕಾರ ಡಾ.ಮೀನಾಕ್ಷಿ ಜೈನ್ ಅವರನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದಾರೆ ಈ ನಾಮ ನಿರ್ದೇಶನಗಳು,ಸಾಹಿತ್ಯ,ವಿಜ್ಞಾನ,ಕಲೆ ಮತ್ತು ಸಾಮಾಜಿಕ ಸೇವೆಯಂತಹ ಕ್ಷೇತ್ರಗಳಲ್ಲಿ ಶ್ರೇಷ್ಠತೆ…