ತೆರಿಗೆ ಮತ್ತು ಖರ್ಚು ಕಡಿತಗಳ ಹೊಸ ಕಾನೂನಿಗೆ ಟ್ರಂಪ್ ಸಹಿ
ವಾಷಿಂಗ್ಟನ್,ಜು,೦೫-ತೆರಿಗೆ ಮತ್ತು ಖರ್ಚು ಕಡಿತಗಳ ಬೃಹತ್ ಪ್ಯಾಕೇಜ್‌ನ ಹೊಸ ಕಾನೂನಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಶ್ವೇತಭವನದಲ್ಲಿ ಸಹಿಹಾಕಿದರು. ಟ್ರಂಪ್ ಅವರ ವಲಸೆ ನಿಗ್ರಹ ಕ್ರಮಕ್ಕೆ ಹಣಕಾಸು ಒದಗಿಸುವ, ೨೦೧೭ ರ ತೆರಿಗೆ ಕಡಿತಗಳನ್ನು ಶಾಶ್ವತಗೊಳಿಸುವ ಮತ್ತು ಲಕ್ಷಾಂತರ ಅಮೆರಿಕನ್ನರನ್ನು ಆರೋಗ್ಯ ವಿಮೆಯಿಂದ ವಂಚಿತಗೊಳಿಸುವ ನಿರೀಕ್ಷೆಯಿರುವ ಈ ಮಸೂದೆಯನ್ನು ಸದನದಲ್ಲಿ ಭಾವನಾತ್ಮಕ ಚರ್ಚೆಯ ನಂತರ ೨೧೮-೨೧೪ ಮತಗಳಿಂದ ಅಂಗೀಕರಿಸಲಾಯಿತು. “ನಮ್ಮ ದೇಶದಲ್ಲಿ ಜನರು ಇಷ್ಟೊಂದು ಸಂತೋಷವಾಗಿರುವುದನ್ನು ನಾನು ಎಂದಿಗೂ ನೋಡಿಲ್ಲ, ಏಕೆಂದರೆ ಹಲವಾರು ವಿಭಿನ್ನ ಗುಂಪುಗಳ…