ನಮ್ಮ ಕೊನೆ ಉಸಿರಿರುವರೆಗೂ ಮಂಡ್ಯ ಜನರ ಸೇವೆ ಮಾಡುತ್ತೇವೆ- ನಿಖಿಲ್ ಕುಮಾರಸ್ವಾಮಿ
ಮದ್ದೂರು,ಜೂ,30- ಪೆನ್ನು ಪೇಪರ್ ನಾಯಕರೇ ನಿಮ್ದು ಏನೇ ರಾಜಕಾರಣ ಇದ್ದರು ನಿಮ್ಮ ಚೌಕಟ್ಟಿಗೆ ಮಾತ್ರ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಮದ್ದೂರು ವಿಧಾನಸಭಾ ಕ್ಷೇತ್ರದ ಶಾಂತಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು ಅವರು. ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆವರೆಗೂ ಗೃಹಲಕ್ಷ್ಮಿ ಹಣ ಹಾಕಲ್ಲ. ಯಾವುದಾದರು ಉಪಚುನಾವಣೆ, ಸಂಸತ್ ಚುನಾವಣೆ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ…