ಹುಲಿಸಾವು ಪ್ರಕರಣ- ನಾಲ್ವರು ದನಗಾಹಿಗಳ ವಶಕ್ಕೆ ಪಡೆದ ಅರಣ್ಯ ಸಿಬ್ಬಂದಿ
ಚಾಮರಾಜನಗರ, ಜೂ,27-ಮಲೇಮಹಾದೇಶ್ವರ ಬೆಟ್ಟದ ಅರಣ್ಯಪ್ರದೇಶದಲ್ಲಿ ಐದು ಹುಲಿಗಳ ಸಾವಿಗೆ ಸಂಬಂಧಿಸಿದಂತೆ ನಾಲ್ವರು ದನಗಾಹಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಹನೂರು ತಾಲೂಕಿನ ಗಾಜನೂರಿನ ನಾಲ್ವರನ್ನ ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಹುಲಿಗಳ ಕಳೇಬರ ಸಿಕ್ಕ ಸ್ಥಳದಲ್ಲಿ ಹಸುವಿನ ದೇಹ ಪತ್ತೆಯಾಗಿದ್ದು, ಬೇಟೆಯಾಡಿದ್ದ ಹಸುವಿಗೆ ಕೀಟನಾಶಕ ಸಿಂಪಡಣೆ ಮಾಡಿರುವ ಶಂಕೆ ಹಿನ್ನೆಲೆ ದನಗಾಹಿಗಳನ್ನ ವಶಕ್ಕೆ ಪಡೆಯಲಾಗಿದೆ. ಮೃತಪಟ್ಟಿರುವ ಹಸು ಯಾರದ್ದು ಎಂಬುದನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚುತ್ತಿದ್ದು, ಹಸು ಕೊಂದ ಕೋಪಕ್ಕೆ ದನಗಾಹಿಗಳು ವಿಷ…