ಅಪರೂಪದ 8 ಸೆಂ.ಮೀ. ಅಂಡಾಶಯ ಚೀಲ ಹೊಂದಿದ್ದ 16 ವರ್ಷದ ವಿದ್ಯಾರ್ಥಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಬೆಂಗಳೂರು,ಮೇ14-ಅತಿ ಅಪರೂಪದಲ್ಲಿ 8 ಸೆಂ.ಮೀಟರ್‌ನ ಅತಿದೊಡ್ಡ ಅಂಡಾಶಯ ಚೀಲ ಹೊಂದಿದ್ದ 16 ವರ್ಷದ ಶಾಲಾ ವಿದ್ಯಾರ್ಥಿಗೆ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ರೋಬೋಟ್ ಸಹಾಯದಿಂದ ಎಡ ಅಂಡಾಶಯದ ಸಿಸ್ಟಕ್ಟಮಿ ಶಸ್ತ್ರಚಿಕಿತ್ಸೆ ನಡೆಸಿದೆ. ಫೋರ್ಟಿಸ್ ಆಸ್ಪತ್ರೆ ಯುರೊಗೈನೆಕಾಲಜಿ, ಗೈನೆ-ಆಂಕೊಲಾಜಿ ಮತ್ತು ರೊಬೊಟಿಕ್ ಶಸ್ತ್ರಚಿಕಿತ್ಸೆ ಕನ್ಸಲ್ಟೆಂಟ್ ಡಾ. ರೂಬಿನಾ ಶಾನಾವಾಜ್ ಅವರ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. 10ನೇ ತರಗತಿ ಓದುತ್ತಿದ್ದರುವ 16 ವರ್ಷದ ಬಾಲಕಿಯು ಎರಡೂ ಅಂಡಾಶಯಗಳನ್ನು ಸಂರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಶಸ್ತ್ರಚಿಕಿತ್ಸೆಯಾದ ದಿನವೇ ಬಿಡುಗಡೆ ಮಾಡಲಾಯಿತು.…