ಕದನ ವಿರಾಮ ಉಲ್ಲಂಘಿಸಿದ ಪಾಕ್ ದಾಳಿಯಲ್ಲಿ ಏಳು ಮಂದಿ ಸಾವು
ಶ್ರೀನಗರ,ಮೇ೧೧- ಭಾರತ ಪಾಕ್ ನಡುವೆ ಕದನವಿರಾಮ ಒಪ್ಪಂದ ಯಶಸ್ವಿಯಾಗಿದೆ ಎಂದು ಘೋಷಿಸಿದರು ಕೂಡ ಪಾಕಿಸ್ತಾನ ತನ್ನ ನೀಚ ಬುದ್ದಿಯನ್ನು ಬಿಡದೆ ಮತ್ತೆ ಅಪ್ರಚೋದಿತ ದಾಳಿಯನ್ನು ಮುಂದುವರೆಸಿದೆ. ಶನಿವಾರ ರಾತ್ರಿ ನಡೆಸಿದ ದಾಳಿಯಲ್ಲಿ ಕಾಶ್ಮೀರದ ಸರ್ಕಾರಿ ಅಧಿಕಾರಿ ರಾಜ್‌ಕುಮಾರ್ ಥಾಮೆಂಬುವರು ಸೇರಿ ಏಳು ಮಂದಿ ಬಲಿಯಾಗಿದ್ದಾರೆ ಅಲ್ಲದೆ ರಾಜಾಸ್ಥಾನ, ಪಂಜಾಬ್ ಮೇಲೆ ಬೆಳಿಗಿನ ವರೆಗೂ ಡ್ರೋನ್ ದಾಳಿ ನಡೆಸಿದೆ. ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್ ಪಡೆಗಳು, ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರ, ಉರಿ, ಪಂಜಾಬ್ ಸೇರಿದಂತೆ ಹಲವು…