ಬುದ್ಧ, ಬಸವ, ಅಂಬೇಡ್ಕರ್ ರವರ ತತ್ವ-ಸಿದ್ಧಾಂತ ಎಲ್ಲ ಕಾಲಕ್ಕೂ ಶ್ರೇಷ್ಠ: ಛಲವಾದಿ ನಾರಾಯಣಸ್ವಾಮಿ
ಎರಡರಬೆಂಗಳೂರುಏ,30- ಬುದ್ಧ, ಬಸವ, ಅಂಬೇಡ್ಕರ್ ರವರ ತತ್ವ-ಸಿದ್ಧಾಂತಗಳು ಎಲ್ಲ ಕಾಲ್ಲಕ್ಕೂ ಶ್ರೇಷ್ಠ. ಅವರ ತತ್ವ-ಸಿದ್ಧಾಂತಗಳು ಸಾರ್ವಕಾಲಿಕ ಮತ್ತು ಸದಾ ಜನರಿಗೆ ಒಳ್ಳೆಯದನ್ನೆ ಬಯಸುವ ಸಿದ್ಧಾಂತಗಳು ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು. ಜಗಜ್ಯೋತಿ ಬಸವಣ್ಣನವರ ಜಯಂತಿ ಪ್ರಯುಕ್ತ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪುಷ್ಪಾರ್ಚನೆ ಮಾಡಿದ ಬಳಿಕ ಅವರು ಮಾತನಾಡಿದರು. ತುಳಿತಕ್ಕೆ ಒಳಗಾದವರು, ಅಂಧಕಾರದಲ್ಲಿದ್ದ ಜನರಿಗೆ ಬಸವಣ್ಣನವರು ಬೆಳಕಾದವರು. ಜಾತ್ಯತೀತವಾದ ಸಮಾಜ ನಿರ್ಮಾಣ ಮಾಡಬೇಕು, ಮಾನವ ಧರ್ಮ ಕಟ್ಟಬೇಕು…