ಅಖಿಲಭಾರತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷರಾಗಿ ಕಾಶಪ್ಪನವರ್ ಆಯ್ಕೆ
ಹುಬ್ಬಳ್ಳಿ, ಏ,18-ಮಹತ್ವದ ಬೆಳವಣಿಗೆಯಲ್ಲಿ ಅಖಿಲ ಭಾರತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷರಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ಆಯ್ಕೆಯಾಗಿದ್ದಾರೆ. ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಶಪ್ಪನವರ್ ಪೀಠದಿಂದ ಕೆಳಗಿಳಿಸಿ ಬೇರೆಯವರನ್ನು ನೇಮಿಸುವ ಬಗ್ಗೆಯೂ ಕಿಡಿಕಾರಿದ್ದರು.. ಬಿಜೆಪಿಯಿಂದ ಉಚ್ಚಾಟಿತ ಬಸವನಗೌಡ ಪಾಟೀಲ್ ಯತ್ನಾಳ್ ಪರ ನಿಂತಿದ್ದ ಜಯಮೃತ್ಯಂಜಯ ಸ್ವಾಮೀಜಿ ಬಗ್ಗೆ ಎಚ್ಚರಿಕೆಯೂ ನೀಡಿದ್ದರು ಈ ಎಲ್ಲಾ ಬೆಳವಣಿಗೆಗಳ ನಡುವೆ ಇಂದು ಹುಬ್ಬಳ್ಳಿಯಲ್ಲಿ ಅಧ್ಯಕ್ಷರ ಆಯ್ಕೆ ಕುರಿತಾಗಿ ನಡೆದ ಸಭೆಯಲ್ಲಿ ಟ್ರಸ್ಟ್ ಪದಾಧಿಕಾರಿಗಳಿಂದ ಕಾಶಪ್ಪನವರ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಈ ಬೆಳವಣಿಗೆಯು…