ಹೊಸ ಪ್ರತಿಭೆಗಳ ಸಮಾಗಮದ “ಉಜ್ಜಯಿನಿ ಮಹಾಕಾಲ”
ಹೊಸ ಪ್ರತಿಭೆಗಳ ಸಮಾಗಮದ “ಉಜ್ಜಯಿನಿ ಮಹಾಕಾಲ” by-ಕೆಂಧೂಳಿ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ “ಉಜ್ಜಯಿನಿ ಮಹಾಕಾಲ” ಕೂಡ ಒಂದು. ಈಗ ಅದೇ ಶೀರ್ಷಿಕೆಯಲ್ಲಿ ಕನ್ನಡ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಹರಿಪ್ರಸಾದ್ ಎಂ ಮಂಡ್ಯ ನಿರ್ಮಾಣ – ನಿರ್ದೇಶನದಲ್ಲಿ ವಿನಯ್ ನಾಯಕನಾಗಿ ನಟಿಸುತ್ತಿರುವ “ಉಜ್ಜಯಿನಿ ಮಹಕಾಲ” ಪೌರಾಣಿಕ ಚಿತ್ರವಲ್ಲ. ಹೊಸತಂಡದ ಸಮಾಗಮದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ.ನರಸಿಂಹಲು ಬಿಡುಗಡೆ ಮಾಡಿದರು. ನಿರ್ಮಾಪಕ ನಾಗೇಶ್ ಕುಮಾರ್, ನಿರ್ದೇಶಕ ಜೆ.ಜಿ.ಶ್ರೀನಿವಾಸ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.…