Girl in a jacket

Daily Archives: February 24, 2025

ಭದ್ರಾ ಮೇಲ್ದಂಡೆಗೆ ರಾಜ್ಯ ಬಜೆಟ್ ನಲ್ಲಿ ಐದು ಸಾವಿರ ಕೋಟಿ ಅನುದಾನಕ್ಕೆ ಹಕ್ಕೊತ್ತಾಯ

ಭದ್ರಾ ಮೇಲ್ದಂಡೆಗೆ ರಾಜ್ಯ ಬಜೆಟ್ ನಲ್ಲಿ ಐದು ಸಾವಿರ ಕೋಟಿ ಅನುದಾನಕ್ಕೆ ಹಕ್ಕೊತ್ತಾಯ by-ಕೆಂಧೂಳಿ ಚಿತ್ರದುರ್ಗ,ಫೆ,24-ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ ರುಪಾಯಿ ಅನುದಾನ ಕಾಯ್ದಿರಿಸುವಂತೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ರಾಜ್ಯ ಸರ್ಕಾರದ ಮುಂದೆ ಹಕ್ಕೊತ್ತಾಯ ಮಂಡಿಸಿದೆ. ಇಲ್ಲಿನ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸಮಿತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್,ಶಾಸಕರುಗಳಾದ ಟಿ.ರಘುಮೂರ್ತಿ, ವೀರೇಂದ್ರ ಪಪ್ಪಿ ಅವರಿಗೆ ಈ ಸಂಬಂಧ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯದ ಪತ್ರ…

ಪೂಜ್ಯರ ಬೇಡಿಕೆಗಳನ್ನು ಪರಿಶೀಲಿಸಿ ಹಂತ ಹಂತವಾಗಿ ಜಾರಿ: ಸಿ.ಎಂ

ಪೂಜ್ಯರ ಬೇಡಿಕೆಗಳನ್ನು ಪರಿಶೀಲಿಸಿ ಹಂತ ಹಂತವಾಗಿ ಜಾರಿ: ಸಿ.ಎಂ by-ಕೆಂಧೂಳಿ ಬೆಂಗಳೂರು ಫೆ 24-ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟದ ಬಗ್ಗೆ ನಮ್ಮ ಸರ್ಕಾರಕ್ಕೆ ಪೂರ್ಣ ಬದ್ಧತೆ ಇದ್ದು, ಪೂಜ್ಯರ ಬೇಡಿಕೆಗಳಲ್ಲಿ ಸಾಧ್ಯ ಇರುವವಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.‌ ಕಾವೇರಿ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಲಿಂಗಾಯತ ಸ್ವಾಮೀಜಿಗಳು, ಸಚಿವರು, ಶಾಸಕರು, ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದರು. ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಬಸವ ಜಯಂತಿಯಂದೇ ಪ್ರಮಾಣವಚನ ಸ್ವೀಕರಿಸಿದೆ.…

ಉದಯಗಿರಿ ಗಲಭೆಕೋರರನ್ನು ನಿರ್ದಯವಾಗಿ ಶಿಕ್ಷಿಸಿ- ಎಚ್ ಡಿಕೆ ಆಗ್ರಹ

ಉದಯಗಿರಿ ಗಲಭೆಕೋರರನ್ನು ನಿರ್ದಯವಾಗಿ ಶಿಕ್ಷಿಸಿ- ಎಚ್ ಡಿಕೆ ಆಗ್ರಹ by-ಕೆಂಧೂಳಿ ಮೈಸೂರು,ಫೆ,24- ಮುಡಾ‌ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ನಾಲ್ವರು ಆರೋಪಿಗಳ ಅಪರಾಧದ ಕುರಿತು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿರುವ ಲೋಕಾಯುಕ್ತ ಸಂಸ್ಥೆಯನ್ನು ದೇವರೇ ಕಾಪಾಡಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು. ಮೈಸೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು; ಮುಡಾ‌ ಹಗರಣದಲ್ಲಿ ಏನೆಲ್ಲ ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ದಾಖಲೆಗಳು ಹಾದಿ ಸರಕಾರ ನಡೆಸುವ ಮುಖ್ಯಮಂತ್ರಿ ತಮಗೆ ಅವರಿಗೆ ಇಷ್ಟಬಂದಂತೆ, ಅನುಕೂಲ ಆಗುವಂತೆ…

ಬೆಂಗಳೂರು ಜಲಮಂಡಳಿ ಸುಪರ್ದಿಗೆ ನೀರು ಶುದ್ಧೀಕರಣ ಘಟಕಗಳ ಹಸ್ತಾಂತರಕ್ಕೆ  ಡಿ.ಕೆ. ಶಿ ಸೂಚನೆ

ಬೆಂಗಳೂರು ಜಲಮಂಡಳಿ ಸುಪರ್ದಿಗೆ ನೀರು ಶುದ್ಧೀಕರಣ ಘಟಕಗಳ ಹಸ್ತಾಂತರಕ್ಕೆ  ಡಿ.ಕೆ. ಶಿ ಸೂಚನೆ by-ಕೆಂಧೂಳಿ ಬೆಂಗಳೂರು, ಫೆ.24-“ಬಿಬಿಎಂಪಿ ನಿರ್ವಹಣೆ ಮಾಡುತ್ತಿರುವ ಶುದ್ದ ಕುಡಿಯುವ ನೀರಿನ ಘಟಕಗಳ (ಆರ್.ಓ ಪ್ಲಾಂಟ್ ಗಳ) ನಿರ್ವಹಣೆಯ ಹೊಣೆಯನ್ನು ಬೆಂಗಳೂರು ಜಲಮಂಡಳಿಗೆ ಹಸ್ತಾಂತರ ಮಾಡಲು ಸೂಕ್ತ ಆದೇಶ ಹೊರಡಿಸಿ” ಎಂದು ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಬಗ್ಗೆ ನಗರಾಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ಡಿಸಿಎಂ ಡಿ.ಕೆ. ಶಿವಕುಮಾರ್…

2028ರ ಚುನಾವಣೆಗೆ ಸಜ್ಜಾಗುವಂತೆ ಪರಾಜಿತ ಅಭ್ಯರ್ಥಿಗಳಿಗೆ ಡಿ.ಕೆ. ಶಿ ಸೂಚನೆ

2028ರ ಚುನಾವಣೆಗೆ ಸಜ್ಜಾಗುವಂತೆ ಪರಾಜಿತ ಅಭ್ಯರ್ಥಿಗಳಿಗೆ  ಡಿ.ಕೆ. ಶಿ ಸೂಚನೆ by-ಕೆಂಧೂಳಿ ಬೆಂಗಳೂರು, ಫೆ.24-“ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಕ್ಷೇತ್ರಗಳ ಪೈಕಿ ಸುಮಾರು 60 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ಸಾಧ್ಯತೆಗಳಿವೆ ಎಂದು ನಮ್ಮ ಆಂತರಿಕ ಸಮೀಕ್ಷೆಗಳು ವರದಿ ನೀಡಿವೆ. ಈ ಹಿನ್ನೆಲೆಯಲ್ಲಿ ಪರಾಜಿತ ಅಭ್ಯರ್ಥಿಗಳ ಕಷ್ಟ ಆಲಿಸಿ, ಮುಂದಿನ 2028ರ ಚುನಾವಣೆಗೆ ಸಜ್ಜಾಗಿ ಎಂದು ಸೂಚನೆ ನೀಡಲಾಗಿದೆ” ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಪರಾಜಿತ ಅಭ್ಯರ್ಥಿಗಳ ಜತೆ ಸಭೆ…

ನಾಗವಲ್ಲಿ ಬಂಗಲೆ” ಈ ವಾರ ತೆರೆಗೆ

“ನಾಗವಲ್ಲಿ ಬಂಗಲೆ” ಈ ವಾರ ತೆರೆಗೆ by-ಕೆಂಧೂಳಿ ಕನ್ನಡದಲ್ಲಿ ಉತ್ತಮ ಕಂಟೆಂಟ್ ವುಳ್ಳ ಚಿತ್ರಗಳೇ ಹೆಚ್ಚಾಗಿ ಜನರನ್ನು ತಲುಪುತ್ತಿದೆ. ಅಂತಹ ಉತ್ತಮ ಹಾಗೂ ವಿಭಿನ್ನ ಕಂಟೆಂಟ್ ಹೊತ್ತು “ನಾಗವಲ್ಲಿ ಬಂಗಲೆ” ನಿರ್ಮಾಣವಾಗಿದೆ. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ,ಮೋಹ, ಮದ, ಮತ್ಸರ ಈ ಆರು ಗುಣಗಳನ್ನು ಪ್ರತಿನಿಧಿಸುವ ಆರು ಪಾತ್ರಗಳ ಜೊತೆಗೆ ಮತ್ತೊಂದು ವಿಶೇಷ ಪಾತ್ರವಿರುವ “ನಾಗವಲ್ಲಿ ಬಂಗಲೆ” ಚಿತ್ರ ಈ ವಾರ(ಫೆಬ್ರವರಿ 28) ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಹಂಸ ವಿಷನ್ಸ್ ಲಾಂಛನದಲ್ಲಿ ನೆಲ ಮಹೇಶ್ ಮತ್ತು ನೇವಿ…

ಈ ವಾರ ಬಿಡುಗಡೆಯಾಗಲಿದೆ ಹೊಸತಂಡದ ಹೊಸಪ್ರಯತ್ನ “1990s”

ಈ ವಾರ ಬಿಡುಗಡೆಯಾಗಲಿದೆ ಹೊಸತಂಡದ ಹೊಸಪ್ರಯತ್ನ “1990s” by-ಕೆಂಧೂಳಿ ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ C M ನಿರ್ದೇಶಿಸಿರುವ ಹಾಗೂ ಅರುಣ್ – ರಾಣಿ ವರದ್ ನಾಯಕ, ನಾಯಕಿಯಾಗಿ ನಟಿಸಿರುವ “1990s” ಚಿತ್ರ ಈ ವಾರ(ಫೆಬ್ರವರಿ 28) ಬಿಡುಗಡೆಯಗುತ್ತಿದೆ. ಈಗಾಗಲೇ ಮಹಾರಾಜ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಚಿತ್ರದ ಹಾಡುಗಳಿಗೆ ಮೆಚ್ಚುಗೆ ದೊರಕಿದೆ. 90ರ ಕಾಲಘಟ್ಟದ ಕಥೆಯ ಟೀಸರ್ ಹಾಗೂ ಟ್ರೇಲರ್ ಸಹ ಎಲ್ಲರಿಗೂ ಪ್ರಿಯವಾಗಿದೆ ಎನ್ನುತ್ತಾರೆ ನಿರ್ಮಾಪಕರಲ್ಲೊಬ್ಬರಾದ ಅರುಣ್ ಹಾಲೇಶ್ ಛಾಯಾಗ್ರಹಣ, ಕೃಷ್ಣ…

ಒಲವೇ ಇಂತಿ ನಿನಗಾಗಿ…

ಒಲವೇ ಇಂತಿ ನಿನಗಾಗಿ… “ ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ ಕಂಡು ನಿಂತೆ ನಿಂತು ಸೋತೆ ಸೋತು ಕವಿಯಾಗಿ ಕವಿತೆ ಹಾಡಿದೆ” ಬೆಣ್ಣೆ ಮಾತಿನ,ಹಾಲು ನಗೆಯ,ಹೂ ಮನಸಿನ ಓ ನನ್ನ ಪಾದರಸದಂತಹ ಸಖಿಯೇ, ನಿನ್ನ ನೆನಪಾದಾಗಲೆಲ್ಲಾ ಬೆಟ್ಟವೇ ಬಂದು ತಲೆಯ ಮೇಲೆಳಿದಂತಾಗುತ್ತದೆ. ಯಾವ ಸುಖದ ಹಂಗಿಲ್ಲದೇ ಬರೀ ಮಾತು…ಮಾತು…ಮಾತುಗಳಲ್ಲೇ ಕನಸು ಕಟ್ಟಿಕೊಂಡು ನೆಲ ಮುಗಿಲು ಒಂದಾಗುವಂತೆ ನಗುತ್ತಾ ಓಡಾಡುತಿದ್ದೆವಲ್ಲಾ ಎಲ್ಲಿ ಹೋದವು ಆ ದಿನಗಳು!! ಹಾಳೂರಿನ ಹಳೆಯ ಒಂಟಿಕೋಣೆಯಲ್ಲಿ ಪುಸ್ತಕಗಳ ಜೊತೆಗೆ ಪಿಶಾಚಿಯ ಹಾಗೆ ಹಗಲು ರಾತ್ರಿಗಳನ್ನಮುಕ್ಕುತ್ತಾ…

ಕೊಹ್ಲಿ ದಾಖಲೆ ಶತಕ ; ಪಾಕ್ ವಿರುದ್ಧ ಭಾರತಕ್ಕೆ ೬ ವಿಕೆಟ್ ಜಯ

ಕೊಹ್ಲಿ  ದಾಖಲೆಶತಕ ; ಪಾಕ್ ವಿರುದ್ಧ ಭಾರತಕ್ಕೆ ೬ ವಿಕೆಟ್ ಜಯ ಕೆಂಧೂಳಿ ದುಬೈ: ಒಂದೂವರೆ ವರ್ಷದ ಬಳಿಕ ವಿರಾಟ್ ಕೊಹ್ಲಿ(೧೦೦) ಬಾರಿಸಿದ ಶತಕ ವೈಭವದ ನೆರವಿನಿಂದ ಭಾನುವಾರ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ಭಾರತ, ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ೬ ವಿಕೆಟ್ ಅಂತರದಿಂದ ಗೆದ್ದು ಬೀಗಿದೆ. ಈ ಗೆಲುವಿನೊಂದಿಗೆ ೨೦೧೭ರ ಫೈನಲ್ ಸೋಲಿಗೂ ಸೇಡು ತೀರಿಸಿಕೊಂಡಿದೆ. ಸೋಲು ಕಂಡ ಪಾಕಿಸ್ತಾನ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ಭಾರತ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಬಹುತೇಕ…

Girl in a jacket