ವಿಜಯಪುರ ಮಿನಿ ತಾರಾಲಯಕ್ಕೆ ₹12.88 ಕೋಟಿ,ಅಸ್ತು: ಎಂ ಬಿ ಪಾಟೀಲ
ವಿಜಯಪುರ ಮಿನಿ ತಾರಾಲಯಕ್ಕೆ ₹12.88 ಕೋಟಿ,ಅಸ್ತು: ಎಂ ಬಿ ಪಾಟೀಲ by-ಕೆಂಧೂಳಿ ಬೆಂಗಳೂರು,ಫೆ,22-ವಿಜಯಪುರದಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಕಿರು ತಾರಾಲಯ (ಮಿನಿ ಪ್ಲಾನೆಟೇರಿಯಂ) ಹಾಗೂ ಬಬಲೇಶ್ವರ ಮತ್ತು ವಿಜಯಪುರದಲ್ಲಿ ಎರಡು ಹಾಸ್ಟೆಲ್ ಗಳ ನಿರ್ಮಾಣಕ್ಕೆ ಒಟ್ಟು ₹56.88 ಕೋಟಿ ವ್ಯಯಿಸಲು ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅವರು, `2015-16ನೇ ಸಾಲಿನ ಬಜೆಟ್ಟಿನಲ್ಲೇ ವಿಜಯಪುರವೂ ಸೇರಿದಂತೆ ರಾಜ್ಯದ ಹಲವು…