Girl in a jacket

Daily Archives: February 21, 2025

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಬಿಗ್ ರಿಲೀಪ್

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಬಿಗ್ ರಿಲೀಪ್ by-ಕೆಂಧೂಳಿ ಬೆಂಗಳೂರು,ಫೆ,21-ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್ ದಾಖಲಿಸಿದ್ದ ಕೇಸ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿ ಹೈಕೋರ್ಟ್‌ ವಿಚಾರಣೆ ಮುಂದೂಡುವ ಮೂಲಕ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ರಿಲೀಪ್ ಸಿಕ್ಕಂತಾಗಿದೆ. ಮಾ.12 ರ ವರೆಗೆ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿಕೆ ಮಾಡಿದೆ. ಅರ್ಜಿ ವಿಚಾರಣಾ ಸಂದರ್ಭದಲ್ಲಿ ರಾಜಿ ಸಂಧಾನಕ್ಕೆ ಪ್ರಯತ್ನಿಸುವಂತೆ ನ್ಯಾ.ಮೊಹಮ್ಮದ್ ನವಾಜ್ ಸಲಹೆ ನೀಡಿದ್ದಾರೆ. ಈ ಮೊದಲು ಬೆಂಗಳೂರಿನ 7 ನೇ ಎಸಿಎಂಎಂ ಕೋರ್ಟ್‌ಗೆ ರೂಪಾ‌ ಖಾಸಗಿ ದೂರು ಸಲ್ಲಿಸಿದ್ದರು. ಐಎಎಸ್…

ಸರ್ಕಾರಿ ನೌಕರರಿಗೆ ರಾಜ್ಯದ ಹಿತವೇ ಪರಮೋಚ್ಛ: ಈಶ್ವರ ಖಂಡ್ರೆ

ಸರ್ಕಾರಿ ನೌಕರರಿಗೆ ರಾಜ್ಯದ ಹಿತವೇ ಪರಮೋಚ್ಛ: ಈಶ್ವರ ಖಂಡ್ರೆ by-ಕೆಂಧೂಳಿ ಬೆಂಗಳೂರು, ಫೆ21- ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯದ ಹಿತವೇ ಪರಮೋಚ್ಛವಾಗಿರಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಅರಣ್ಯ ಭವನದಲ್ಲಿಂದು ರಾಜ್ಯದ ಪ್ರಥಮ ಮಹಿಳಾ ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ ಹಾಗೂ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಸರ್ಕಾರಿ ನೌಕರಿ ಎಲ್ಲರಿಗೂ ದೊರಕುವುದಿಲ್ಲ. ಅದು ಪ್ರತಿಭಾವಂತರು, ಅದೃಷ್ಟವಂತರಿಗೆ ಮಾತ್ರ ದೊರಕುತ್ತದೆ…

ಒಂದು‌ ವಾರದಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣ: ಲಕ್ಷ್ಮೀ ಹೆಬ್ಬಾಳಕರ್

ಒಂದು‌ ವಾರದಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣ: ಲಕ್ಷ್ಮೀ ಹೆಬ್ಬಾಳಕರ್ by-ಕೆಂಧೂಳಿ ಬೆಂಗಳೂರು, ಫೆ,21- ಇನ್ನೊಂದು ವಾರದಲ್ಲಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ‌ ಬೆಳಗಾವಿಯ ಗೃಹ ಕಚೇರಿಯಲ್ಲಿ ಮಾತನಾಡಿದ ಸಚಿವರು, ತಾಲೂಕು ಪಂಚಾಯಿತಿ ಮುಖಾಂತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ರಸ್ತೆ ಅಪಘಾತದಿಂದಾಗಿ ವಿಶ್ರಾಂತಿಯಲ್ಲಿದ್ದುದರಿಂದಾಗಿ ಹಣ ಸಂದಾಯವಾಗಲು ಸ್ವಲ್ಪ ವಿಳಂಬ…

ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಬಿಜೆಪಿ ರೆಬಲ್ ನಾಯಕ  ಯತ್ನಾಳ್

ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಬಿಜೆಪಿ ರೆಬಲ್ ನಾಯಕ ಯತ್ನಾಳ್ by-ಕೆಂಧೂಳಿ ಬೆಂಗಳೂರು, ಫೆ,21-ಗುರುವಾರವಷ್ಟೆ ಬಿಜೆಪಿ ಬಂಡಾಯ ನಾಯಕರು ಮುಂದಿನ ನಡೆ ಕುರಿತು ಸಭೆ ನಡೆಸಿದ ಬೆನ್ನಲ್ಲೇ ಶುಕ್ರವಾರ ಬೆಳಿಗ್ಗೆ ನಾಡದೇವತೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ರೆಬಲ್ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಪೂಜೆ ಸಲ್ಲಿಸಿದರು. ಕೇಂದ್ರ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ನೋಟಿಸ್ ಗೆ ಪ್ರತಿಯಾಗಿ ಉತ್ತರ ಬರೆದಿರುವ ಫೈಲ್ ಅನ್ನು ಇಟ್ಟು ಪೂಜೆ ಸಲ್ಲಿಸಿದ್ದಾರೆ. ನೋಟಿಸ್ ನಲ್ಲಿ ಮಾಜಿ ಸಿಎಂ ಬಿಎಸ್…

ಪ್ರವಾಸೋದ್ಯಮ ನೀತಿ;ಮೆಚ್ಚುಗೆ ಸೂಚಿಸಿ  ಅಭಿನಂದಿಸಿದ ವಾಣಿಜ್ಯೋದ್ಯಮಿಗಳು

ಪ್ರವಾಸೋದ್ಯಮ ನೀತಿ;ಮೆಚ್ಚುಗೆ ಸೂಚಿಸಿ  ಅಭಿನಂದಿಸಿದ ವಾಣಿಜ್ಯೋದ್ಯಮಿಗಳು, by-ಕೆಂಧೂಳಿ ಬೆಂಗಳೂರು, ಫೆ,21-ಸರ್ಕಾರ ಇತ್ತೀಚಿಗೆ ಜಾರಿಗೆ ತಂದಿರುವ ಹೊಸ ಪ್ರವಾಸೋದ್ಯಮ ನೀತಿ ವಾಣಿಜ್ಯೋದ್ಯಮಿಗಳು ಮತ್ತು ವಾಣಿಜ್ಯ ಸಂಘ ಸಂಸ್ಥೆಗಳಿಂದ ಒಕ್ಕೋರಲ ಮೆಚ್ಚುಗೆ ವ್ಯಕ್ತವಾಯಿತು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ವಾಣಿಜ್ಯ ಸಂಘ ಸಂಸ್ಥೆಗಳ ಬಜೆಟ್ ಪೂರ್ವ ಸಭೆಯಲ್ಲಿ ಬಹುತೇಕ ಎಲ್ಲರೂ ಹೊಸ ಪ್ರವಾಸೋದ್ಯಮ ನೀತಿಯನ್ನು ಶ್ಲಾಘಿಸಿದರು. ಈ ನೀತಿ ಏಕ ಕಾಲಕ್ಕೆ ರಾಜ್ಯದ ಆರ್ಥಿಕತೆ ವೃದ್ಧಿಸುವ ಜೊತೆಗೆ ಉದ್ಯಮಗಳ ಬೆಳವಣಿಗೆಗೂ ಪೂರಕವಾಗಿದೆ ಎಂದು ಸರ್ಕಾರದ ನಿಲುವು ಮತ್ತು ತೀರ್ಮಾನವನ್ನು ಶ್ಲಾಘಿಸಿದರು.‌

Girl in a jacket