Girl in a jacket

Daily Archives: February 7, 2025

ಆರ್ ಬಿ ಐ ಬಡ್ಡಿದರದಲ್ಲಿ 25 ಬಿಪಿಎಸ್ ಕಡಿತ, ಆರ್ಥಿಕ ಬೆಳವಣಿಗೆಗೆ ಉತ್ತೇಜನಕ್ಕೆ ಎಪ್ ಕೆಸಿಸಿಐ ಸ್ವಾಗತ

ಆರ್ ಬಿ ಐ ಬಡ್ಡಿದರದಲ್ಲಿ 25 ಬಿಪಿಎಸ್ ಕಡಿತ, ಆರ್ಥಿಕ ಬೆಳವಣಿಗೆಗೆ ಉತ್ತೇಜನಕ್ಕೆ ಎಪ್ ಕೆಸಿಸಿಐ ಸ್ವಾಗತ by- ಕೆಂಧೂಳಿ ಬೆಂಗಳೂರು, ಫೆ,07- ಸುಮಾರು ಐದು ವರ್ಷಗಳಲ್ಲಿ ಮೊದಲ ಬಾರಿಗೆ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತಗೊಳಿಸುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ಧಾರವನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಸ್ವಾಗತಿಸಿದೆ. ಆರ್‌ಬಿಐ ಗವರ್ನರ್ ಆದ ಶ್ರೀ ಸಂಜಯ್ ಮಲ್ಹೋತ್ರಾ ಅವರು ಘೋಷಿಸಿದ ಈ ಬಹು ನಿರೀಕ್ಷಿತ ಕ್ರಮವು ಆರ್ಥಿಕ ಬೆಳವಣಿಗೆಯನ್ನು…

ಮುಡಾ ಹಗರಣ, ನ್ಯಾಯ ಸಿಗುವವರೆಗೂ ಕಾನೂನು ಹೋರಾಟ: ಆರ್.ಅಶೋಕ್

ಮುಡಾ ಹಗರಣ, ನ್ಯಾಯ ಸಿಗುವವರೆಗೂ ಕಾನೂನು ಹೋರಾಟ: ಆರ್.ಅಶೋಕ್                        by-ಕೆಂಧೂಳಿ ಬೆಂಗಳೂರು,ಫೆ,07-: ಮುಡಾ ಹಗರಣ, ಸಿದ್ದರಾಮಯ್ಯನವರ ವಿಚಾರದಲ್ಲಿ ಕಾನೂನು ಹೋರಾಟವನ್ನು ಮುಂದುವರೆಸಲಿದ್ದೇವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ತಿಳಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹೈಕೋರ್ಟಿನ ಆದೇಶವನ್ನು ಒಪ್ಪಲೇಬೇಕಿದೆ. ಆದರೆ, ನ್ಯಾಯ ಸಿಗುವವರೆಗೂ ಕಾನೂನು ಹೋರಾಟ ಮುಂದುವರೆಸಲಾಗುವುದು ಎಂದು ಹೇಳಿದರು.…

ಕರ್ನಾಟಕ- ಲಿವರ್ ಪೂಲ್ ವಿ.ವಿ. ಒಡಂಬಡಿಕೆಗೆ ಅಂಕಿತ

ಕರ್ನಾಟಕ- ಲಿವರ್ ಪೂಲ್ ವಿ.ವಿ. ಒಡಂಬಡಿಕೆಗೆ ಅಂಕಿತ ಬೆಂಗಳೂರು: ಶಿಕ್ಷಣ ಹಾಗೂ ಸಂಶೋಧನೆಗೆ ಸಂಬಂಧಿಸಿದಂತೆ ಹೆಚ್ಚಿನ ಸಹಭಾಗಿತ್ವ ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮತ್ತು ಲಿವರ್ ಪೂಲ್ ವಿಶ್ವವಿದ್ಯಾಲಯಗಳು ಮಹತ್ವದ ಒಡಂಬಡಿಕೆಗೆ ಶುಕ್ರವಾರ ಸಹಿ ಹಾಕಿದವು. ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರಿ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ಒಡಂಬಡಿಕೆ ಏರ್ಪಟ್ಟಿತು. ಬ್ರಿಟಿಷ್ ಡೆಪ್ಯುಟಿ ಹೈಕಮಿಷನ್ ನ ಬ್ರಿಟಿಷ್ ಕೌನ್ಸಿಲ್ ವಿಭಾಗದ ನಿರ್ದೇಶಕ ಜನಕ…

ಮುಡಾ ಹಗರಣ; ಸಿಬಿಐಗೆ ವಹಿಸಲು ಕೋರ್ಟ್ ನಿರಾಕರಣೆ,ಸಿದ್ದು ನಿರಾಳ

ಮುಡಾ ಹಗರಣ; ಸಿಬಿಐಗೆ ವಹಿಸಲು ಕೋರ್ಟ್ ನಿರಾಕರಣೆ,ಸಿದ್ದು ನಿರಾಳ by -ಕೆಂಧೂಳಿ ಬೆಂಗಳೂರು, ಫೆ,07-ಸಿಎಂ ಸಿದ್ದರಾಮಯ್ಯ ವಿರುದ್ದದ ಮುಡಾ ಹಗರಣ ವನ್ನು ಸಿಬಿಐಗೆ ನೀಡಲು ನ್ಯಾಯಲಯ ನಿರಾಕರಿಸಿದೆ.ಈ ಮೂಲಕ ಅವರು ನಿರಾಳವಾದಂತಾಗಿದೆ. ಸಿದ್ದರಾಮಯ್ಯ ವಿರುದ್ದಸ ಮುಡಾ ಹಗರಣ ಸಂಬಂಧ ತನಿಖೆಯನ್ನ ಸಿಬಿಐಗೆ ನೀಡುವಂತೆ ಕೋರಿ ಸ್ನೇಹಮಯಿ ಕೃಷ್ಣ ಹೈಕೋರ್ಟ್ ಗೆ ಅರ್ಜಿಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಲಯ ತನಿಖೆ ನಡೆಸುವ ಅಗತ್ಯ ಕಾಣುತ್ತಿಲ್ಲ ಎಂದು ಪರಿಗಣಿಸಿ ಸಿಬಿಐಗೆ ವಹಿಸಲು ನಿರಾಕರಿಸಿದೆ.ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ…

ವಿವಿ ಕರಡನ್ನು ವಾಪಾಸ್ ಪಡೆಯಲು ಸಿಎಂ ಆಗ್ರಹ

ವಿವಿ ಕರಡನ್ನು ವಾಪಾಸ್ ಪಡೆಯಲು ಸಿಎಂ ಆಗ್ರಹ by-ಕೆಂಧೂಳಿ ಬೆಂಗಳೂರು, ಫೆ,07- ಒಕ್ಕೂಟ ವ್ಯವಸ್ಥೆ ಗೆ ವಿರುದ್ಧವಾಗಿರುವ ವಿಶ್ವವಿದ್ಯಾಲಯಗಳ ಕರಡನ್ನು ಕೂಡಲೇ ವಾಪಸ್ಸ ಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ನಗರದಲ್ಲಿ ನಡೆದ ವಿವಿಧ ರಾಜ್ಯಗಳ ಉನ್ನತ ಶಿಕ್ಷಣ ಸಚಿವ ಸಮಾವೇಶಕ್ಕೆ ಕಳುಹಿಸಿದ್ದ ವಿಡಿಯೋ ಸಂದೇಶದಲ್ಲಿ ಈ ಆಗ್ರಹ ಮಾಡಿದ್ದಾರೆ. ರಾಜ್ಯ ಸರ್ಕಾರಗಳಿಂದ ಸ್ಥಾಪಿತವಾದ ವಿಶ್ವವಿದ್ಯಾಲಯಗಳಿಗೆ ರಾಜ್ಯ ಸರ್ಕಾರವೇ ಒಟ್ಟಾರೆ ಅಭಿವೃದ್ಧಿಗಾಗಿ, ವೇತನ ಮತ್ತು ಇತರೆ ಭತ್ಯೆಗಳು, ಮಾನವ, ಭೌತಿಕ ಮತ್ತು ತಾಂತ್ರಿಕ ಮೂಲಸೌಕರ್ಯಗಳ ಸೃಜನೆ ಮತ್ತು ನಿರ್ವಹಣೆ,…

ಮೆಟ್ರೋ ಪ್ರಯಾಣ ದರ ಹೆಚ್ಚಳ ಸಮಿತಿ ತೀರ್ಮಾನ; ಸರ್ಕಾರ ಹಸ್ತಕ್ಷೇಪ ಇಲ್ಲ: ಡಿ.ಕೆ.ಶಿ

ಮೆಟ್ರೋ ಪ್ರಯಾಣ ದರ ಹೆಚ್ಚಳ ಸಮಿತಿ ತೀರ್ಮಾನ; ಸರ್ಕಾರ ಹಸ್ತಕ್ಷೇಪ ಇಲ್ಲ: ಡಿ.ಕೆ.ಶಿ by-ಕೆಂಧೂಳಿ ಬೆಂಗಳೂರು, ಫೆ.07-“ಮೆಟ್ರೋ ಪ್ರಯಾಣ ದರ ಹೆಚ್ಚಳದ ಬಗ್ಗೆ ಬಿಎಂಆರ್ ಸಿಎಲ್ ತೀರ್ಮಾನ ಮಾಡುತ್ತದೆ. ಇದಕ್ಕಾಗಿ ನ್ಯಾಯಮೂರ್ತಿ ನೇತೃತ್ವದಲ್ಲಿ ಕೇಂದ್ರದ ಸಮಿತಿ ರಚಿಸಲಾಗಿದ್ದು, ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ಬೆಂಗಳೂರು ಅಭಿವೃದ್ದಿಗೆ ಸಂಬಂಧಿಸಿದ ಇಲಾಖೆಗಳು, ಪ್ರಾಧಿಕಾರದ ಅಧಿಕಾರಿಗಳ ಜೊತೆ ನಗರ ಪ್ರದಕ್ಷಿಣೆ ನಡೆಸಿದ ನಂತರ ಬಿಎಂಆರ್ ಸಿಎಲ್ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಅವರು  ಮಾತನಾಡಿದರು.…

ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ : ವಿಜಯೇಂದ್ರ

ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ವಿಜಯೇಂದ್ರ by- ಕೆಂಧೂಳಿ ಬೆಂಗಳೂರು,ಫೆ,07-ಜನರ ರಕ್ಷಣೆಗೆ ಬರಬೇಕಾದ ರಾಜ್ಯ ಸರಕಾರವು ದೌರ್ಜನ್ಯ ಎಸಗುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಸಂಜೆ 5 ಗಂಟೆತನಕ ಹೋಗಲು ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬೆಳಿಗ್ಗೆ 10ರಿಂದ 5ಗಂಟೆವರೆಗೆ ಹೋಗಿ ಎಂಬ ಮಾತನ್ನು ರಾಜ್ಯ ಸರಕಾರ ಹೇಳುತ್ತಿರುವುದು ದುರ್ದೈವ…

ಬಿಜೆಪಿ ಎಂದರೆ ಬುರುಡೆ ಪಕ್ಷ- ರಾಮಲಿಂಗ ರೆಡ್ಡಿ

ಬಿಜೆಪಿ ಎಂದರೆ ಬುರುಡೆ ಪಕ್ಷ- ರಾಮಲಿಂಗ ರೆಡ್ಡಿ   by-ಕೆಂಧೂಳಿ ಬೆಂಗಳೂರು, ಫೆ,07-ಬಿಜೆಪಿ ಎಂದರೆ ಬುರುಡೆ‌ ಜನರ ಪಕ್ಷ, ಅವರಿಗೆ ಬುರುಡೆಯಲ್ಲಿ ಮೆದುಳು ಇದೆಯೋ ಇಲ್ಲವೋ ಗೊತ್ತಿಲ್ಲ. ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಬಿಜೆಪಿಗೆ ಖಡಕ್ ಉತ್ತರ ನೀಡಿದ್ದಾರೆ. ಪದೇ ಪದೇ ಬಿಜೆಪಿ ಕರ್ನಾಟಕ ಸುಳ್ಳು ಲೆಕ್ಕವನ್ನು ಕೊಡುತ್ತಿದೆ, ಈ ಮೂಲಕ ಬಿಜೆಪಿಗೆ ಮುಖಭಂಗವಾಗುತ್ತಿದೆ ಎಂದು ಸಾರಿಗೆ ಸಚಿವರು ಹೇಳುತ್ತಿದ್ದರು. ಇದೀಗ ನೇರವಾಗಿ ಬಿಜೆಪಿ ಎಂದರೆ ಬುರುಡೆ ಜನರ ಪಕ್ಷ ಎನ್ನುವ ಮೂಲಕ ಬಿಜೆಪಿ ಆರೋಪಕ್ಕೆ…

Girl in a jacket