Girl in a jacket

Daily Archives: January 24, 2025

ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ: ಶಿವಾನಂದ ಎಸ್‌.ಪಾಟೀಲ

ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ: ಶಿವಾನಂದ ಎಸ್‌.ಪಾಟೀಲ್ by ಕೆಂಧೂಳಿ ಬೆಂಗಳೂರು,ಜ,24- ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ ಮಾಡಲು ಒಂದು ವಾರದೊಳಗೆ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್‌. ಪಾಟೀಲ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿಗೆ ಅನುಮತಿ ನೀಡಿದ್ದು, ಕ್ವಿಂಟಲ್‌ಗೆ 5,650 ರೂ. ಗಳಂತೆ ಖರೀದಿ ಮಾಡಲಾಗುವುದು. ನೋಂದಣಿಗೆ 80 ದಿನ ಹಾಗೂ ಖರೀದಿಗೆ 90 ದಿನ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.…

ಕಲಾತ್ಮಕ ಚಿತ್ರಗಳ ಪ್ರೋತ್ಸಾಹಕ್ಕೆ ಪ್ರತೀ ಜಿಲ್ಲೆಗೂ 200 ಆಸನಗಳ ಮಿನಿ ಚಿತ್ರಮಂದಿರ ಸ್ಥಾಪನೆ: ಸಿ.ಎಂ ಘೋಷಣೆ

ಕಲಾತ್ಮಕ ಚಿತ್ರಗಳ ಪ್ರೋತ್ಸಾಹಕ್ಕೆ ಪ್ರತೀ ಜಿಲ್ಲೆಗೂ 200 ಆಸನಗಳ ಮಿನಿ ಚಿತ್ರಮಂದಿರ ಸ್ಥಾಪನೆ: ಸಿ.ಎಂ ಘೋಷಣೆ by ಕೆಂಧೂಳಿ ಬೆಂಗಳೂರು ಜ 24-ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಟಿಕೆಟ್ ದರ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ, ಕಲಾತ್ಮಕ ಚಿತ್ರಗಳ ಪ್ರೋತ್ಸಾಹಕ್ಕೆ ಪ್ರತೀ ಜಿಲ್ಲೆಗೂ 200 ಆಸನಗಳ ಮಿನಿ ಚಿತ್ರಮಂದಿರ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ರವೀಂದ್ರ ಕಲಾ ಕ್ಷೇತ್ರದಲ್ಲಿ ಕನ್ನಡ ಸೇನಾನಿ ಸಾ.ರಾ.ಗೋವಿಂದು ಅವರ ಅಭಿನಂದನ ಕಾರ್ಯಕ್ರಮದಲ್ಲಿ ಗೋವಿಂದು ಅವರನ್ನು ಸನ್ಮಾನಿಸಿ, ಅಭಿನಂದಿಸಿ…

ಖೋಖೋ ಭಾರತ ಗೆಲುವಿಗೆ ಕಾರಣರಾದ ಗೌತಮ್,ಚೈತ್ರಾಗೆ ಸಿಎಂ ಸನ್ಮಾನ

ಖೋಖೋ ಭಾರತ ಗೆಲುವಿಗೆ ಕಾರಣರಾದ ಗೌತಮ್,ಚೈತ್ರಾಗೆ ಸಿಎಂ ಸನ್ಮಾನ by ಕೆಂಧೂಳಿ ಬೆಂಗಳೂರು, ಜ,24-2025ರ ಪುರುಷರ ಹಾಗೂ ಮಹಿಳಾ ಖೋ ಖೋ ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಟವಾಡಿ ಭಾರತ ತಂಡವು ಎರಡೂ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಲು ಅತ್ಯುತ್ತಮ‌ ಪ್ರದರ್ಶನ ನೀಡಿದ ಮಂಡ್ಯ ಜಿಲ್ಲೆಯ ಡಿ.ಮಲ್ಲಿಗೆರೆ ಗ್ರಾಮದ ಎಂ.ಕೆ ಗೌತಮ್ ಹಾಗೂ ಮೈಸೂರು ನರಸೀಪುರದ ಕುರಬೂರಿನ ಚೈತ್ರಾ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು. ಇಬ್ಬರೂ ಪಟುಗಳಿಗೆ ತಲಾ 5 ಲಕ್ಷ ರೂಪಾಯಿಯ…

ನಟ ದರ್ಶನ್ ಗೆ ಮತ್ತೆ ಸಂಕಷ್ಟ, ಸುಪ್ರೀಂಕೋರ್ಟ್ ನೊಟೀಸ್

ನಟ ದರ್ಶನ್ ಗೆ ಮತ್ತೆ ಸಂಕಷ್ಟ, ಸುಪ್ರೀಂಕೋರ್ಟ್ ನೊಟೀಸ್ by ಕೆಂಧೂಳಿ ನವದೆಹಲಿ, ಜ,24- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದರ್ಶನ್ ಸೇರಿದಂತೆ ಎಲ್ಲಾ ಏಳು ಮಂದೊಗೂ ಸುಪ್ರೀಂಕೋರ್ಟ್ ನೋಟೀಸ್ ಜಾರಿಮಾಡಿದೆ. ಈ ಮೂಲಕ ಬೇಲಿನಿಂದ ಹೊರಗಿರುವ ದರ್ಶನ್ ಗೆ ಮತ್ತೆ ಸಂಕಷ್ಟ ಎದುರಾದಂತಾಗಿದೆ. ಆರೋಪಿಗಳಾದ  ದರ್ಶನ್ ತೂಗುದೀಪ, ಪವಿತ್ರಾ ಗೌಡ, ಜಗದೀಶ್, ಪ್ರದೋಷ್, ನಾಗರಾಜು, ಅನುಕುಮಾರ್ ಸೇರಿದಂತೆ ಏಳು ಜನ ಆರೋಪಿಗಳಿಗೆ ನೋಟೀಸ್ ಜಾರಿ ಮಾಡಲಾಗಿದ್ದು ಈಗ ಮತ್ತೆ ಆತಂಕ ಎದುರಾಗಿದೆ. ನಟ ದರ್ಶನ್…

ರಾಜ್ಯದ ಎಲ್ಲಾ ರೈತರ ಮನೆಗೂ ನಿರಂತರ ವಿದ್ಯುತ್- ಕೆ.ಜೆ ಜಾರ್ಜ್ 

ರಾಜ್ಯದ ಎಲ್ಲಾ ರೈತರ ಮನೆಗೂ ನಿರಂತರ ವಿದ್ಯುತ್- ಕೆ.ಜೆ ಜಾರ್ಜ್  by ಕೆಂಧೂಳಿ ಬಾಗಲಕೋಟೆ,ಜ,24-ರಾಜ್ಯದ ಹೊಲಗದ್ದೆಗಳಲ್ಲಿನ ರೈತರ ಮನೆಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಯೋಜಿಸಲಾಗಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದರು. ಬಾಗಲಕೋಟೆಯ ನೂತನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಇಂಧನ ಇಲಾಖೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಈ ಭಾಗದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಪ್ರವಾಹ ಪೀಡಿತ ಕುಟುಂಬಗಳು ತಮ್ಮ ಹೊಲಗಳಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದು, ಈ ಮನೆಗಳಿಗೆ ನಿರಂತರ…

ದೆಹಲಿ ಗದ್ದುಗೆಗೆ ಮೂರು ಪಕ್ಷಗಳ ವಿಭಿನ್ನ ತಂತ್ರ..!

ದೆಹಲಿ ಗದ್ದುಗೆಗೆ ಮೂರು ಪಕ್ಷಗಳ ವಿಭಿನ್ನ ತಂತ್ರ..! by ಕೆಂಧೂಳಿ ನವದೆಹಲಿ,ಜ,24-ದೇಶಾದ್ಯಂತ ಕುತೂಹಲ ಕೆರಳಿಸಿರುವ ರಾಜಧಾನಿ ದೆಹಲಿಯ ವಿಧಾನಸಭೆ ಚುನಾವಣೆ ಮೂರುಪಕ್ಷಗಳಿಗೂ ಮಹತ್ವದ್ದಾಗಿದೆ. ಎರಡುಭಾರಿ ಅಧಿಕಾರ ಪಡೆದುಕೊಂಡು ಹಾಲಿ ಅಧಿಕಾರ ನಡೆಸುತ್ತಿರುವ ಎಎಪಿ ಮೂರನೇ ಬಾರಿಗೆ ಅಧಿಕಾರಕ್ಕಾಗಿ ತೀವ್ರ ಪ್ರಯತ್ನ ನಡೆಸುತ್ತಿದ್ದರೆ,ಬಿಜೆಪಿ ಅಧಿಕಾರ ಗದ್ದುಗೆಗಾಗಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ.ಕಾಂಗ್ರೆಸ್ ತನ್ನದೆ ತಂತ್ರಗಳೊಂದಿಗೆ ಗೆಲುವಿಗಾಗಿ ಶತ ಪ್ರಯತ್ನ ನಡೆಸುತ್ತಿದೆ. 27 ವರ್ಷಗಳ ಬಳಿಕ ದೆಹಲಿ ಗದ್ದುಗೆ ಹಿಡಿಯಲು ಬಿಜೆಪಿ ಮತದಾರರಿಗೆ ಭರ್ಜರಿ ಕೊಡುಗೆಗಳನ್ನು ಘೋಷಿಸಿದೆ. 2013 ರಲ್ಲಿ ಅರವಿಂದ್…

Girl in a jacket