Girl in a jacket

Daily Archives: January 22, 2025

ಇನ್ವೆಸ್ಟ್ ಕರ್ನಾಟಕ; ದೆಹಲಿಯಲ್ಲಿ ಉದ್ಯಮ ದಿಗ್ಗಜರ ಜೊತೆ ಎಂ. ಬಿ. ಪಾಟೀಲ ಸಮಾಲೋಚನೆ

ಇನ್ವೆಸ್ಟ್ ಕರ್ನಾಟಕ; ದೆಹಲಿಯಲ್ಲಿ ಉದ್ಯಮ ದಿಗ್ಗಜರ ಜೊತೆ ಎಂ. ಬಿ. ಪಾಟೀಲ ಸಮಾಲೋಚನೆ by ಕೆಂಧೂಳಿ ನವದೆಹಲಿ,ಜ,22-ಮುಂದಿನ ತಿಂಗಳು 11ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ʼಇನ್ವೆಸ್ಟ್‌ ಕರ್ನಾಟಕ 2025ʼರ ಪೂರ್ವಸಿದ್ಧತೆಗಳ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರವು ಬುಧವಾರ ಇಲ್ಲಿ ಯಶಸ್ವಿಯಾಗಿ ರೋಡ್‌ಷೋ ನಡೆಸಿತು. ಐಟಿಸಿ ಲಿಮಿಟೆಡ್‌, ರಿನ್ಯೂ ಪವರ್‌, ಸಂವರ್ಧನ ಮದರ್‌ಸನ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌, ಹ್ಯಾವೆಲ್ಸ್‌, ಕೆಇಐ ಇಂಡಸ್ಟ್ರೀಸ್‌, ದಾಲ್ಮಿಯಾ, ಫ್ಲೆಕ್ಸಿಬಸ್‌ ಮತ್ತಿತರ ಕಂಪನಿಗಳ ಉನ್ನತಾಧಿಕಾರಿಗಳ ಜೊತೆಗೆ ರಾಜ್ಯದ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು…

2019ನೇ ಸಾಲಿನ ಚಲನಚಿತ್ರ ಪ್ರಶಸ್ತಿಗೆ ಸುದೀಪ್,ಅನುಪಗೌಡ ಗೆ ಅತ್ಯುತ್ತಮ ನಟ,ನಟಿ ಪ್ರಶಸ್ತಿ

2019ನೇ ಸಾಲಿನ ಚಲನಚಿತ್ರ ಪ್ರಶಸ್ತಿಗೆ ಸುದೀಪ್,ಅನುಪಗೌಡ ಅತ್ಯುತ್ತಮ ನಟ,ನಟಿ ಪ್ರಶಸ್ತಿ by ಕೆಂಧೂಳಿ ಬೆಂಗಳೂರು,ಜ,22: 2019ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಲಾಗಿದ್ದು, ನಟ ಸುದೀಪ್ ಹಾಗೂ ನಟಿ ಅನುಪಮ ಗೌಡ ಕ್ರಮವಾಗಿ ಅತ್ಯುತ್ತಮ ನಟ, ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಪೈಲ್ವಾನ್’ ಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ಸುದೀಪ್ ಗೆ ಈ ಪ್ರಶಸ್ತಿ ಬಂದಿದೆ. ಇನ್ನೂ ಥ್ರಿಲ್ಲರ್ ಚಿತ್ರ ‘ತ್ರಯಂಬಕಂನ ‘ ಅಮೋಘ ನಟನೆಗಾಗಿ ಅನುಪಮ ಗೌಡ ‘ಅತ್ಯುತ್ತಮ ನಟಿ’ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಹಿರಿಯ ನಿರ್ದೇಶಕ…

ದೆಹಲಿ ಗಣರಾಜ್ಯೋತ್ಸವದಲ್ಲಿಲಕ್ಕುಂಡಿ ಶಿಲ್ಪಕಲೆಗಳ ಅನಾವರಣ

ದೆಹಲಿ ಗಣರಾಜ್ಯೋತ್ಸವದಲ್ಲಿ ಲಕ್ಕುಂಡಿ ಶಿಲ್ಪಕಲೆಗಳ ಅನಾವರಣ By ಕೆಂಧೂಳಿ ನವದೆಹಲಿ, ಜ. 22– ಸರ್ವಜನಾಂಗದ ಶಾಂತಿಯ ತೋಟದಂತೆ ಕಂಗೊಳಿಸುತ್ತಿರುವ ‘ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲುʼ ಸ್ತಬ್ಧಚಿತ್ರವು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲು ಸಂಪೂರ್ಣವಾಗಿ ಸಿದ್ಧಗೊಂಡಿದೆ. ರಾಜಧಾನಿಯ ಕರ್ತವ್ಯಪಥದಲ್ಲಿ (ರಾಜ್‌ಪಥ್‌) ಇದೇ ಜ. 26 ರಂದು ಸಾಗುವುದರೊಂದಿಗೆ ಕರ್ನಾಟಕ ರಾಜ್ಯದ ಹಿರಿಮೆ, ಸರ್ವಧರ್ಮ ಸಮನ್ವಯ. ಶಾಂತಿ, ಸಹಬಾಳ್ವೆಯನ್ನು ಪ್ರತಿಪಾದಿಸಲಿದೆ. ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿ ವರ್ಷ ತನ್ನ ವೈಶಿಷ್ಟಪೂರ್ಣ ಸ್ತಬ್ಧಚಿತ್ರಗಳ…

ಮಲ್ಲಿಕಾರ್ಜುನ ಖರ್ಗೆನಾಡಿನ ಜನರ ಕ್ಷಮೆ ಕೇಳಬೇಕು : ಸಿ.ಟಿ.ರವಿ

ಮಲ್ಲಿಕಾರ್ಜುನ ಖರ್ಗೆನಾಡಿನ ಜನರ ಕ್ಷಮೆ ಕೇಳಬೇಕು : ಸಿ.ಟಿ.ರವಿ By ಕೆಂಧೂಳಿ ಬೆಂಗಳೂರು,ಜ,22- ಕಾಂಗ್ರೆಸ್ ಸಮಾವೇಶದಲ್ಲಿ ನಿನ್ನೆ ಪ್ರಿಯಾಂಕ ಗಾಂಧಿಯವರನ್ನು ಕಿತ್ತೂರು ರಾಣಿ ಚನ್ನಮ್ಮನಿಗೆ ಹೋಲಿಸಿದ್ದಾರೆ. ಇದೊಂದು ರೀತಿಯ ಭಟ್ಟಂಗಿತನದ ಪರಮಾವಧಿ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಟೀಕಿಸಿದ್ದಾರೆ. ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ವೀರರಾಣಿ. ಅವರನ್ನು ಪ್ರಿಯಾಂಕ ಗಾಂಧಿಗೆ ಹೋಲಿಕೆ ಮಾಡುವುದು ಅಥವಾ ಕಿತ್ತೂರು ರಾಣಿ ಚನ್ನಮ್ಮರಿಗೆ ಅವಮಾನ ಮಾಡುವುದು ಒಂದೇ…

ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗದ ಅಧ್ಯಕ್ಷರೊಂದಿಗೆ ಪ್ರಿಯಾಂಕ ಖರ್ಗೆ ಸಭೆ

ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗದ ಅಧ್ಯಕ್ಷರೊಂದಿಗೆ ಪ್ರಿಯಾಂಕ ಖರ್ಗೆ ಸಭೆ By ಕೆಂಧೂಳಿ ಬೆಂಗಳೂರು, ಜ,22-ಸಮಗ್ರ ದತ್ತಾಂಶ ಸಂಗ್ರಹದೊಂದಿಗೆ ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪೂರವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸುವ ಅವಶ್ಯಕತೆಯಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಪ್ರೊ.ಗೋವಿಂದರಾವ್‌ ಅವರ ಅಧ್ಯಕ್ತತೆಯಲ್ಲಿ ಸರ್ಕಾರ ರಚಿಸಿರುವ ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗಕ್ಕೆ ಸಲಹೆ…

ಮಂಡ್ಯದಲ್ಲಿ ಕೃಷಿ ವಿವಿ ಅನುಮೋದನೆ ನೀಡಿದ ಸಿಎಂ ಗೆ ಅಭಿನಂದನೆ

ಮಂಡ್ಯದಲ್ಲಿ ಕೃಷಿ ವಿವಿ ಅನುಮೋದನೆ ನೀಡಿದ ಸಿಎಂ ಗೆ ಅಭಿನಂದನೆ By ಕೆಂಧೂಳಿ ಬೆಂಗಳೂರು, ಜ,22-ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲು ಸರ್ಕಾರ ಅನುಮೋದನೆ ಹಾಗೂ ಸ್ವಾಮ್ಯದ ಮೈಸೂರು ಸಕ್ಕರೆ ಕಾರ್ಖಾನೆ ಬಾಕಿ ಉಳಿಸಿಕೊಂಡಿದ್ದ ವಿದ್ಯುತ್‌ ಬಿಲ್‌ ಮನ್ನ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಮಂಡ್ಯ ಜಿಲ್ಲೆಯ ಶಾಸಕರು ಅಭಿನಂದನೆ ಸಲ್ಲಿಸಿದರು. ಸಚಿವ ಸಂಪುಟದಲ್ಲಿ ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲು ಸರ್ಕಾರ ಅನುಮೋದನೆ ನೀಡಿರುವುದು ಹಾಗೂ ಸರ್ಕಾರಿ ಸ್ವಾಮ್ಯದ ಮೈಸೂರು ಸಕ್ಕರೆ ಕಾರ್ಖಾನೆ ಕಳೆದ 24 ವರ್ಷಗಳಿಂದ ಬಾಕಿ…

ಅಧಿಕಾರ ಹುಡುಕಿಕೊಂಡು ಹೋಗಿವುದಿಲ್ಲ; ಡಿ.ಕೆ.ಶಿ

ಅಧಿಕಾರ ಹುಡುಕಿಕೊಂಡು ಹೋಗಿವುದಿಲ್ಲ; ಡಿ.ಕೆ.ಶಿ ಬೆಂಗಳೂರು, ಜ,22- ಅಧಿಕಾರ ಹಸ್ತಾಂತರ ಕುರಿತಂತೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಸದ್ಯ ಯಾವುದು ತುರ್ತು ಇಲ್ಲ ಪಕ್ಷ ತೀರ್ಮಾನ ಮಾಡುತ್ತದೆ ನಾನು ಅಧಿಕಾರ ಹುಡುಕಿಕೊಂಡು ಹೋಗುವುದಿಲ್ಲ ಎಂದು ಉಒ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅಧಿಕಾರ ಹಂಚಿಕೆ ಮುಂದಿನ ಸಿಎಂ ವಿಚಾರದ ಬಗ್ಗೆ ಚರ್ಚೆ ಮುನ್ನೆಲೆಗೆ ಬರುತ್ತಲೇ ಇದ್ದು, ಡಿಸಿಎಂ ಡಿಕೆ ಶಿವಕುಮಾರ್ ಗೆ ಸಿಎಂ ಪಟ್ಟ ನೀಡುವಂತೆ ಅವರ ಅಭಿಮಾನಿಗಳು, ಅವರ ಬೆಂಬಲಿಗರು ಆಗ್ರಹಿಸುತ್ತಲೇ ಇದ್ದಾರೆ. ಬಿಜೆಪಿ ಎಂಎಲ್ ಸಿ…

Girl in a jacket