Girl in a jacket

Daily Archives: January 16, 2025

ಬೊಸಿಯಾ ರಾಷ್ಟ್ರೀಯ ಚಾಂಪಿಯನ್ ಶಿಪ್ ಕ್ರೀಡೆ; ಕರ್ನಾಟಕದ‌ ಅನ್ನಪೂರ್ಣ ಚಾಂಪಿಯನ್

ಬೊಸಿಯಾ ರಾಷ್ಟ್ರೀಯ ಚಾಂಪಿಯನ್ ಶಿಪ್ ಕ್ರೀಡೆ; ಕರ್ನಾಟಕದ‌ ಅನ್ನಪೂರ್ಣ ಚಾಂಪಿಯನ್ ಬೆಂಗಳೂರು, ಜ,16-ಆಂಧ್ರಪ್ರದೇಶದ ವಿಶಾಖ ಪಟ್ಟಣದಲ್ಲಿ ನಡೆದ 9 ನೇ ರಾಷ್ಟೀಯ ಪ್ಯಾರಾ ಬೊಸಿಯಾ ( BOCCIA) ರಾಷ್ಟೀಯ ಚಾಂಪಿಯನ್ ಶಿಪ್ ಕ್ರೀಡಾ ಕೂಟದಲ್ಲಿ ಬೆಂಗಳೂರಿನ ಅನ್ನಪೂರ್ಣ ಅವರು ಚಿನ್ನದ ಪದಕ‌ ಗೆಲ್ಲುವ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ. ಜನವರಿ ‌8 ರಿಂದ 16 ರ ತನಕ ಆಂಧ್ರಪ್ರದೇಶದ ವಿಶಾಖ ಪಟ್ಟಣದಲ್ಲಿ ಬೊಸಿಯಾ ಸ್ಪೋರ್ಟ್ಸ್ ಫೆಡರೇಷನ್ ಆಫ್‌ ಇಂಡಿಯಾ ಹಾಗೂ‌ ಪ್ಯಾರಾ ಒಲಿಂಪಿಕ್ ಕಮಿಟಿ ಆಫ್ ಇಂಡಿಯಾ…

ಬೀದರ್ ದರೋಡೆ – ಗನ್ ಮ್ಯಾನ್  ಸುತ್ತಾ ಪೊಲೀಸರ ಅನುಮಾನ

ಬೀದರ್ ದರೋಡೆ – ಗನ್ ಮ್ಯಾನ್  ಸುತ್ತಾ ಪೊಲೀಸರ ಅನುಮಾನ ಬೀದರ್,ಜ,16-ಗನ್ ಮ್ಯಾನ್ ಇಲ್ಲದೆ ಎಟಿಎಂ ಗೆ ಹಣ ತುಂಬಲು ಬಂದಿದ್ದ ಎಟಿಎಂಗೆ ಹಣ ಹಾಕಲು ಬಂದಿದ್ದ ಸಿಬ್ಬಂದಿಯ ಚಲನವಲನಗಳೆ ಅನುಮಾನಕ್ಕೆ ಕಾರಣವಾಗಿದೆ. ಯಾವುದೇ ಎಟಿಎಂ ಗೆ ಹಣ ತುಂಬುವಾಗ ಗನ್ ಮ್ಯಾನ್ ಇಲ್ಲದೆ ಹೇಗೆ ಬಂದರು ಎನ್ನುವುದೆ ಪ್ರಶ್ನೆಯಾಗಿದ್ದು ,ಇದೇ ಅನುಮಾನದ ಮೇಲೆ ಪೊಲೀಸರು ತನಿಖೆ ನಡಿಸುತ್ತಿದ್ದಾರೆ. ಬೀದರ್‌ನ ಎಸ್‌ಬಿಐ ಮುಖ್ಯ ಕಚೇರಿ ಮುಂದೆ ಗುರುವಾರ ಬೆಳಿಗ್ಗೆ ನಡೆದ ಈ ಕೃತ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ ಬೈಕ್‌ನಲ್ಲಿ…

ರುದ್ರ ಗರುಡ ಪುರಾಣ” ಚಿತ್ರದ ಟ್ರೇಲರ್ ಅನಾವರಣ

“ರುದ್ರ ಗರುಡ ಪುರಾಣ” ಚಿತ್ರದ ಟ್ರೇಲರ್ ಅನಾವರಣ ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ರಿಷಿ ನಾಯಕರಾಗಿ ನಟಿಸಿರುವ “ರುದ್ರ ಗರುಡ ಪುರಾಣ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬಹು ನಿರೀಕ್ಷಿತ ಈ ಚಿತ್ರದ ಟ್ರೇಲರ್ ಅನ್ನು ನಟ ರಾಕ್ಷಸ ಡಾಲಿ ಧನಂಜಯ ಅನಾವರಣ ಮಾಡಿದರು. ನಿರ್ಮಾಪಕ ಕೆ.ಮಂಜು ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಟ್ರೇಲರ್ ಕುತೂಹಲ ಮೂಡಿಸಿದ್ದು,‌ ಜನವರಿ 24 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿರುವ ಈ ಚಿತ್ರವನ್ನು ನೋಡುವ ಕಾತುರವನ್ನು ಹೆಚ್ಚಿಸಿದೆ. ಟ್ರೇಲರ್ ಬಿಡುಗಡೆ…

ಜಾರಕಿಹೊಳಿ ಸಹೋದರರಿಗೆ ಧನಬಲದ ದುರಹಂಕಾರದ ಆಟ..!

ಜಾರಕಿಹೊಳಿ ಸಹೋದರರಿಗೆ ಧನಬಲದ ದುರಹಂಕಾರದ ಆಟ..! ಟಿ.ಕೆ.ತ್ಯಾಗರಾಜ್,ಹಿರಿಯ ಪತ್ರಕರ್ತರು ಬೆಂಗಳೂರು, ಜ,16-ಇದು ಧನಬಲದ ದುರಹಂಕಾರವಲ್ಲದೇ ಬೇರೇನಲ್ಲ.ನಾಲ್ವರು ಜಾರಕೀಹೊಳಿ ಸಹೋದರರು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿದ್ದುಕೊಂಡು ತಮಗೆ ಬೇಕಾದಂತೆ ಆಟವಾಡುತ್ತಿದ್ದಾರೆ. ಹಿರಿಯ ಸಹೋದರ ರಮೇಶ್ ಜಾರಕೀಹೊಳಿ ಬಿಜೆಪಿ ರಾಜ್ಯಾಧ್ಯಕ್ಣ ಬಿ.ವೈ.ವಿಜಯೇಂದ್ರ ಬದಲಾವಣೆಗೆ ಆಗ್ರಹಿಸಿ ಸರ್ವಪ್ರಯತ್ನ ನಡೆಸುತ್ತಿದ್ದರೆ, ನಂತರದ ಸಹೋದರ ಸತೀಶ್ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದುಕೊಂಡೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬದಲಾವಣೆಗೆ ಆಗಿಂದಾಗ್ಗೆ ದನಿ ಎತ್ತುತ್ತಿದ್ದಾರೆ. ಓಟು ತರುವವರನ್ನು ಅಧ್ಯಕ್ಷ ಸ್ಥಾನಕ್ಕೆ ತರಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ತರುತ್ತಿದ್ದಾರೆ. ಸತೀಶ್…

ಇರಿತಕ್ಕೊಳಗಾಗಿದ್ದ ಸೈಫ್  ಅಲಿಖಾನ್ ಮೊದಲ ಶಸ್ತ್ರ ಚಿಕಿತ್ಸೆ ಯಶಸ್ವಿ

ಇರಿತಕ್ಸೈಕೊಳಗಾಗಿದ್ದ ಸೈಫ್  ಅಲಿ ಖಾನ್ ಮೊದಲ ಶಸ್ತ್ರ ಚಿಕಿತ್ಸೆ ಯಶಸ್ವಿ ಮುಂಬೈ,ಜ,16-ಸಿದ್ದಕಿ ಹತ್ಯೆ ನಂತರ ಬಾಲಿವುಡ್‌ ನಟರ ಮೇಲೆ ದಾಳಿಮಾಡಲಾಗುತ್ತದೆ ಎನ್ನುವ ಮಧ್ಯೆಯೇ ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕುವಿನಿಂದ ಇರಿದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇಂದು ಬೆಳಗಿನ ಜಾವ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.ಮನೆಗಳ್ಳತನಕ್ಕೆ ಬಂದಿದ್ದ ದುಷ್ಕರ್ಮಿಯೊಬ್ಬ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ಚಾಕುವಿನಿಂದ ಹಲವು ಬಾರಿ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ಗಾಯಗೊಂಡ ಅವರನ್ನು ಲೀಲಾವತಿ ಆಸ್ಪತ್ರೆ…

ಪ್ರೀತಂ ಗೌಡ ಕಾಂಗ್ರೆಸ್ ಸೇರಲಿದ್ದಾರೆಯೇ?

ಪ್ರೀತಂ ಗೌಡ ಕಾಂಗ್ರೆಸ್ ಸೇರಲಿದ್ದಾರೆಯೇ? Publish by desk team ಬೆಂಗಳೂರು, ಜ,16- ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಾಗಿನಿಂದಲೂ ಅಸಮಾಧಾನಗೊಂಡಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಾಸನದಲ್ಲಿ ಗೌಡರ ಕುಟುಂಬದ ವಿರುದ್ಧ ರಾಜಕಾರಣ ಮಾಡುತ್ತಿದ್ದ ಅವರಿಗೆ ಈ ಮೈತ್ರಿಯಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದರು,ಸದ್ಯ ಮೈತ್ರಿಯಿಂದ ಬಿಜೆಪಿ ಹೊರಬರುವ ಸಾಧ್ಯತೆಗಳು ಕಡಿಮೆ ಎನ್ನುವ ದೃಷ್ಟಿಯಿಂದ ಅವರು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹಾಸನದ ಮಾಜಿ ಶಾಸಕ ಪ್ರೀತಂ ಗೌಡ…

Girl in a jacket