ಸಕ್ರಜ್ಜಿ ಬದುಕಿನ ನೈಜತೆಯ ಕಥೆ…!
ಸಕ್ರಜ್ಜಿ ಬದುಕಿನ ನೈಜತೆಯ ಕಥೆ…! ಆಗಷ್ಟೇ ನಾಚುತ್ತಲೇ ದಾಂಗುಡಿಯಿಡುತ್ತಿದ್ದ ಚಳಿಗಾಲದ ದಿನವೊಂದರ ಚುಂಚುಂ ಮುಂಜಾನೆ. ಹೊರಗೆ ಇನ್ನೂ ಮಬ್ಬುಗತ್ತಲು ಕವಿದಿತ್ತು. ರಾತ್ರಿ ಎಂಟರ ವೇಳೆಗೆ, ಎಂದಿಗಿಂತ ಮುಂಚಿತವಾಗಿಯೇ ಹಾಸಿಗೆ ಸೇರಿದವನು, ಬೆಳಿಗ್ಗೆ ಐದರ ವೇಳೆಗೇ ಎಚ್ಚರವಾಗಲು, ಮತ್ತೆ ನಿದ್ದೆ ಬಾರದೆ, ಕಣ್ಣು ಬಿಟ್ಟುಕೊಂಡೇ ಹಾಸಿಗೆಯ ಮೇಲೆ ಬಿದ್ದುಕೊಂಡು ಹೊರಳಾಡುತ್ತಿದ್ದೆ. ಹೊರಗೆ ಹಕ್ಕಿಗಳು “ವಿಪರೀತ” ಎನ್ನುವ ಮಟ್ಟಕ್ಕೆ ತಮ್ಮ “ಚಿಲಿಪಿಲಿ” ಗಾನದ, ಪ್ರಾತಃಕಾಲದ ಉದಯರಾಗವನ್ನು, ಅದಾಗಲೇ ಶುರುವಿಟ್ಟುಕೊಂಡು, ಆಲಾಪದ ತಾರಕಕ್ಕೇರಿದ್ದವು. ನನಗಿಂತ ಎರಡು ತಾಸುಗಳ ಮುಂಚೆಯೇ ಎದ್ದಿದ್ದ…