Girl in a jacket

Daily Archives: March 23, 2022

ಜೇಮ್ಸ್ ಸಿನಿಮಾ ಪ್ರದರ್ಶನಕ್ಕೆ ಅಡ್ಡಿಯಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮಾ, 23: ಜೇಮ್ಸ್ ಸಿನಿಮಾ ಪ್ರದರ್ಶನಕ್ಕೆ ಯಾವುದೇ ಅಡ್ಡಿ ಪಡಿಸಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಪ್ರದಯೇಶಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿರುವ ಬಗ್ಗೆ ಇಂದು ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. “ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಯವರೊಂದಿಗೆ ಮಾತನಾಡಿದ್ದೇನೆ. ತೊಂದರೆಯಾಗಿರುವಲ್ಲಿ ಕೂಡಲೇ ಸರಿಪಡಿಸಿ, ಅನಾವಶ್ಯಕವಾಗಿ ಜೇಮ್ಸ್ ಸಿನಿಮಾವನ್ನು ಯಾರೂ ಚಿತ್ರಮಂದಿರಗಳಿಂದ ತೆಗೆಯತಕ್ಕದ್ದಲ್ಲ. ಸಂಬಂಧಪಟ್ಟ ನಿರ್ಮಾಪಕರು, ಚಿತ್ರಮಂದಿರದವರಿಗೆ ಇದನ್ನು ಸರಿಪಡಿಸುವ ಅಧಿಕಾರವಿದೆ.…

ಹಿಂದೂ ದೇವಾಲಯಗಳ ಜಾತ್ರೆಗಳಿಗೆ ಮುಸ್ಲಿಂ ವರ್ತಕರಿಗೆ ನಿರ್ಬಂಧ ಕುರಿತು ಸದನದಲ್ಲಿ ವಾಗ್ವಾದ

ಬೆಂಗಳೂರು,ಮಾ,23;ಹಿಂದೂ ದೇವಾಲಯಗಳ ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ನಿರ್ಬಂಧ ಹೇರಿರುವ ಕುರಿತು ವಿಧಾನ ಸಭೆಯಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಶಾಸಕ ಯು.ಟಿ.ಖಾದರ್, ಹಿಂದೂ ದೇವಾಲಯಗಳ ಧಾರ್ಮಿಕ ಕೇಂದ್ರಗಳಲ್ಲಿ ಕೆಲವು ಧರ್ಮದವರು ವ್ಯಾಪಾರ ಮಾಡಬಾರದು ಎಂದು ಬ್ಯಾನರ್ ಹಾಕಿದ್ದಾರೆ. ಈ ರೀತಿಯ ಬ್ಯಾನರ್ ಹಾಕಿರುವರು ಹೇಡಿಗಳು, ಕ್ರೂರಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ನ ಕೆಲವು ಶಾಸಕರು ಇದಕ್ಕೆ ದನಿಗೂಡಿಸಿದರು. ಈ ವೇಳೆ ಉಡುಪಿ ಹಾಗೂ…

ಅಕ್ರಮ ಪಡಿತರ ಅಕ್ಕಿ ವಶ

ಚಳ್ಳಕೆರೆ ,ಮಾ,23:ತಾಲೂಕಿನ ನೆಹರೂ ರುತ್ತದ ಬಳಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ 12 ಟನ್ ಪಡಿತರ ಅಕ್ಕಿಯನ್ನು ಚಳ್ಳಕೆರೆ ತಾಸಿಲ್ದಾರ್ ಮತ್ತು ಸಿಬ್ಬಂದಿ ವರ್ಗದವರು ವಶಪಡಿಸಿಕೊಂಡಿದ್ದಾರೆ ಬಳ್ಳಾರಿಯಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಲಾರಿ ಸಂಖ್ಯೆ ಕೆಎ 06 AA5508 ರಲ್ಲಿ 12 ಅಕ್ಕಿಯನ್ನು ಅನಧಿಕೃತವಾಗಿ ಸರಬರಾಜು ಮಾಡುತ್ತಾರೆಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಇಂದು ಮಧ್ಯಾನ ತಶಿಲ್ದಾರ್ ಆಹಾರ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಈ ಲಾರಿಯನ್ನು ತಪಾಸಣೆ ಮಾಡಿ ಡ್ರೈವರ್ ಅಜ್ಮನ್ ಸಮೇತ ದಸ್ತಗಿರ್ ಮಾಡಿ ಇವರುಗಳ ಮೇಲೆ…

ಸೋನಿಯಾಗೆ ಧೃತರಾಷ್ಟ್ರ ಪ್ರೇಮದ ಕುರುಡು

ಸ್ವಾತಂತ್ರ್ಯ ಬಂದ ಬಳಿಕ ಸತತ ಐವತ್ತು ವರ್ಷ ಕೇಂದ್ರ ಮತ್ತು ರಾಜ್ಯಗಳನ್ನಾಳಿದ ಕಾಂಗ್ರೆಸ್ಸು ಈಗ ಶೋಚನೀಯ ಹಂತಕ್ಕೆ ಬಂದಿದೆ. ಏಐಸಿಸಿ ಹೊಂದಿರುವ ಅಗಾಧ ಸಂಪತ್ತಿನ ಒಡೆತನವನ್ನು ಬಿಟ್ಟುಕೊಡುವುದಕ್ಕೆ ಸೋನಿಯಾ ಅಂಡ್ ಚಿಲ್ಡೃನ್ಸ್ ಸಿದ್ಧವಿಲ್ಲ. ಪ್ರಧಾನಿ ಪಟ್ಟವನ್ನಾದರೂ “ತ್ಯಾಗ” ಮಾಡಬಹುದು ಆದರೆ ಏಐಸಿಸಿ ಅಧ್ಯಕ್ಷ ಸ್ಥಾನವನ್ನಲ್ಲ ಎಂದು ಕೂತಿರುವ ಸೋನಿಯಾ, ಧೃತರಾಷ್ಟ್ರ ಪ್ರೇಮದ ಅಮಲಿನಲ್ಲಿ ಕರುಡಾಗಿದ್ದಾರೆ. ಸೋನಿಯಾಗೆ ಧೃತರಾಷ್ಟ್ರ ಪ್ರೇಮದ ಕುರುಡು ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕು, ಸಂವಿಧಾನದ ಆಶಯದಂತೆ ಎಲ್ಲರನ್ನೂ ಒಳಗೊಂಡ ಭಾರತ ವಿಕಾಸವಾಗಬೇಕು. “ಸರ್ವ ಜನಾಂಗದ ಶಾಂತಿಯ…

ಭಾರತೀಯರ ಪ್ರಾಣ ಹಿಂಡುತ್ತಿರುವ ಲೈಂಗಿಕ ಸುಲಿಗೆಯೆಂಬ ಬ್ಲಾಕ್ ಮೇಲ್ ಬಿಸಿನೆಸ್!

ಭಾರತೀಯರ ಪ್ರಾಣ ಹಿಂಡುತ್ತಿರುವ ಲೈಂಗಿಕ ಸುಲಿಗೆಯೆಂಬ ಬ್ಲಾಕ್ ಮೇಲ್ ಬಿಸಿನೆಸ್! writing-ಪರಶಿವ ಧನಗೂರು ಭಾರತದಲ್ಲಿ ಈಗ ಸದ್ದಿಲ್ಲದೆ ದುಡ್ಡುಮಾಡುತ್ತಿರುವ ಸೆಕ್ಸ್ ಟಾರ್ಶನ್ ಮಾಫಿಯಾ ಹಲವಾರು ಅಮಾಯಕರ ಪ್ರಾಣ ಬಲಿಪಡೆದುಕೊಂಡು ತನಿಖಾ ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿದೆ! ಲೈಂಗಿಕತೆಯ ಕೆಟ್ಟ ಕುತೂಹಲಕ್ಕೆ ಬಾಯಿ ತೆರೆದಿರುವ ವ್ಯಕ್ತಿಗಳು, ಒಂಟಿ ಬದುಕಿಗೆ ಬೇಸತ್ತು ಲೈಂಗಿಕ ಏಕತಾನತೆ ನೀಗಿಸಿಕೊಳ್ಳಲು ಅಡ್ಡದಾರಿ ಹಿಡಿಯುವ ಯುವಕರು-ಮಧ್ಯವಯಸ್ಕರು ಲೈಂಗಿಕ ಸುಲಿಗೆಯೆಂಬ ಸೆಕ್ಸ್ ಟಾರ್ಶನ್ ಮಾಫಿಯಾಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ! ಮೊಬೈಲ್ ಬಳಸುತ್ತಿರುವ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪುರುಷರು, ಮಹಿಳೆಯರು…

ಲಂಡನ್‌ನಲ್ಲಿ ಪ್ರದರ್ಶನಗೊಂಡ ನಾಂದಿ

ಲಂಡನ್‌ನಲ್ಲಿ ಪ್ರದರ್ಶನಗೊಂಡ ನಾಂದಿ ಶ್ರೀ ಭಾರತಿಚಿತ್ರ ಲಾಂಛನದಲ್ಲಿ ವಾದಿರಾಜ್ ಹಾಗೂ ಜವಹರ್ ಸೋದದರು ನಿರ್ಮಾಣ ಮಾಡಿದ ಕಪ್ಪುಬಿಳುಪು ಸಾಮಾಜಿಕಕಥಾ ಹಂದರದಚಿತ್ರನಾಂದಿ ೧೯೬೪ರಲ್ಲಿ ಬಿಡುಗಡೆಗೊಂಡಿತು.ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನಿರ್ದೇಶಕಎನ್.ಲಕ್ಷ್ಮಿನಾರಾಯಣ್ ಮೊದಲ ಚಿತ್ರಇದಾಗಿತ್ತು. ಆರ್.ನಾಗೇಂದ್ರರಾವ್ ಸೇರಿದಂತೆ ಹಲವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಿನಾರಾಯಣ್ ‘ನಾಂದಿಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು. ರಾಜಕುಮಾರ್, ಹರಿಣಿ, ಕಲ್ಪನಾ, ಬಾಲಕೃಷ್ಣ, ವಾದಿರಾಜ್, ದಿನೇಶ್, ಗಣಪತಿಭಟ್, ಶೈಲಶ್ರೀ, ಉದಯಕುಮಾರ್, ಸೋರಟ್‌ಅಶ್ವತ್ಥ್, ಹನುಮಂತಾಚಾರ್, ಜಯಶ್ರೀ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆಎನ್.ಲಕ್ಷ್ಮಿನಾರಾಯಣ್‌ಅವರೇಕಥೆ, ಹಾಗೂ ಚಿತ್ರಕಥೆ ರಚಿಸಿದರು.…

Girl in a jacket