ಅಂಚೆಯಣ್ಣನ ನಿಸ್ವಾರ್ಥ ಸೇವೆಗೆ ಸಾಕ್ಷಿಯಾದ ಸೇವಾಮನೋಭಾವ
ಅಂಚೆಯಣ್ಣನ ನಿಸ್ವಾರ್ಥ ಸೇವೆಗೆ ಸಾಕ್ಷಿಯಾದ ಸೇವಾಮನೋಭಾವ ಅದು ೧೯೮೦ನೇ ಇಸವಿ ಮೇ ತಿಂಗಳ ಮೊದಲನೇ ವಾರ. ನಮ್ಮ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮುಗಿದು ಮೂರು ವಾರಗಳ ಮೇಲಾಗಿತ್ತು. ಮೇ ಹತ್ತರ ಒಳಗೆ ಫಲಿತಾಂಶ ಬರುವ ನಿರೀಕ್ಷೆಯೂ ಇತ್ತು. ಫಲಿತಾಂಶದ ನಿಖರ ದಿನಾಂಕವನ್ನು ಅಂದಿನ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಇನ್ನೂ ಪ್ರಕಟ ಮಾಡಿರಲಿಲ್ಲ. ಇಂದಿನ ಹಾಗೆ ಅಂತರ್ಜಾಲದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶಗಳನ್ನು ಪ್ರಕಟಿಸುವ ಸವಲತ್ತು ಅಂದಿನ ದಿನಗಳಲ್ಲಿ ಉಪಲಬ್ಧವಿರಲಿಲ್ಲ. ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶಗಳನ್ನು ಪ್ರಕಟಿಸುವ, ಹಲವು ವರ್ಷಗಳ…