ಸಾಂಬಶಿವಶೆಟ್ಟಿ ಮತ್ತು ಸೈಕಲ್
ಸಾಂಬಶಿವಶೆಟ್ಟಿ ಮತ್ತು ಸೈಕಲ್ ಇತ್ತಿಚೆಗೆ ಶಾಲಾ ವೇಳೆಗಿಂತ ಒಂದು ಗಂಟೆ ಮುಂಚಿತವಾಗಿಯೇ ಮನೆಯನ್ನು ಬಿಡುವ ಅಭ್ಯಾಸವೊಂದನ್ನು ರೂಢಿ ಮಾಡಿಕೊಂಡಿದ್ದೆ. ನಾನಿನ್ನೂ ಆಗ ಪ್ರಾಥಮಿಕ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿ. ಹತ್ತು ಗಂಟೆಗೆ ಶುರುವಾಗುವ ಶಾಲೆಗೆ ಬೆಳಿಗ್ಗೆ ಒಂಬತ್ತು ಗಂಟೆಗೇ ಮನೆ ತೊರೆಯುವ ನನ್ನ ಆತುರವನ್ನು ನೋಡಿ ಅವ್ವ “ಏನೋ, ಮಠದಲ್ಲಿ ಕಸ ಹೊಡೆಯಲು ಜವಾನ ಇಲ್ಲವೇ? ಇಷ್ಟು ಜಲ್ದಿ ಮಠಕ್ಕೆ ಹೋಗಿ ಏನು ಕಿಸಿಯುತ್ತೀಯಾ? ನಾನೇ ನಾಳೆ ಮಠಕ್ಕೆ ಬಂದು ನೆವ್ವಾರರ ಲೋಕಪ್ಪನನ್ನು ಕೇಳುತ್ತೇನೆ ತಾಳು”ಎಂದು…