ಮಲ್ಲಣ್ಣನ ಏಕಾಂಗಿ ಹೋರಾಟದ ಸಾಧನೆಯ ಹಾದಿ..
ಮಲ್ಲಣ್ಣ ನ ಏಕಾಂಗಿ ಹೋರಾಟದ ಸಾಧನೆಯ ಹಾದಿ… ಅಂದು ಸೆಪ್ಟೆಂಬರ್ ತಿಂಗಳ ಒಂದು ಶನಿವಾರ, ಮುಂಜಾನೆಯ ಒಪ್ಪತ್ತಿನ ಶಾಲೆಗೆ ಆತುರಾತುರದಲ್ಲಿ ತಯಾರಾಗಿ ಮನೆ ಬಿಟ್ಟವನು, ಊರಿನ ಮುಖ್ಯರಸ್ತೆಯ ಚಂದ್ರಮೌಳೇಶ್ವರ ದೇವಸ್ಥಾನದ ಮುಂದಿನಿಂದ ಸಾಗಿ, ಪೊಲೀಸ್ ಸ್ಟೇಷನ್ ಬಲಕ್ಕೆ ತಿರುಗಿ, ಊರ ಮುಖ್ಯರಸ್ತೆಯನ್ನು ಕುರುಬರ ಕೇರಿಗೆ ಜೋಡಿಸುತ್ತಿದ್ದ ವಿಶಾಲವಾದ ರಸ್ತೆಯಲ್ಲಿ ಮುನ್ನಡೆಯುತ್ತಾ, ರಸ್ತೆಯ ಬಲಬದಿಗೆ ಬರುತ್ತಿದ್ದ ಭದ್ರಪ್ಪಶೆಟ್ಟಿಯವರ ಅಂಗಡಿಯನ್ನು ದಾಟಿ, ಪಕ್ಕದಲ್ಲಿಯೇ ಇದ್ದ ಕುಂಬಾರ ಏಕಾಂತಮ್ಮನ ಹೋಟೆಲ್ ಸಮೀಪಿಸಲು, ಹೆಗಲಿಗೆ ನೇತು ಹಾಕಿದ ಸ್ಕೂಲ್ ಬ್ಯಾಗ್…