ರೇಡಿಯೋ ಜಾಕಿ ರಚನಾ ಹೃದಯಾಘಾತದಿಂದ ನಿಧನ
ಬೆಂಗಳೂರು,ಫೆ.೨೨: ಮಾತಿನ ಮಲ್ಲಿ ಎಂದೇ ಕರೆಸಿಕೊಳ್ಳುತ್ತಿದ್ದ ರೇಡಿಯೋ ಜಾಕಿ ರಚನಾ ಹೃದಯಾಘಾತದಿಂದ ಇಂದು ಬೆಳಿಗ್ಗೆ ನಿಧನಹೊಂದಿದ್ದಾರೆ. ರೆಡಿಯೋ ಮಿರ್ಚಿಯಲ್ಲಿ ಆರ್‌ಜೆ ಆಗಿದ್ದ ರಚನಾ ತಮ್ಮ ಮಾತುಗಳಿಂದಲೇ ಜನರ ಮನ ಗೆದ್ದಿದ್ದರು. ಬಳಿಕ ರೆಡಿಯೋ ಜಾಕಿ ವೃತ್ತಿಗೆ ವಿದಾಯ ಕೋರಿದ್ದ ಅವರು ಮನೆಯಲ್ಲೇ ಇದ್ದರೆನ್ನಲಾಗಿದೆ. ಆದರೆ ಫಿಟ್ ಆಂಡ್ ಫೈನ್ ಆಗಿದ್ದ ರಚನಾ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಜೆಪಿ ನಗರದ ಪ್ಲಾಟ್‌ನಲ್ಲಿ ರಚನಾಗೆ ಎದೆ ನೋವು ಕಾಣಿಸಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ನಿಧನರಾಗಿದ್ದಾರೆ. ರಚನಾಗೆ ೩೯ ವರ್ಷ ವಯಸ್ಸಾಗಿತ್ತು. ಕಳೆದ…