ನೀರಿನ ಸಮಸ್ಯೆ ಕುರಿತ ‘ಬೆಟ್ಟದ ದಾರಿ’ ಮಕ್ಕಳ ಚಿತ್ರ
ಉತ್ತರಕರ್ನಾಟಕ ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸರ್ಕಾರದಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ ರಾಜಕೀಯದ ಕೆಸರಾಟದಿಂದ ಮುಂದೇ ಹೋಗುತ್ತಿಲ್ಲ. ಇದನ್ನು ಹೇಳಲು ಕಾರಣವಿದೆ. ’ಬೆಟ್ಟದ ದಾರಿ’ ಎನ್ನುವ ಮಕ್ಕಳ ಸಿನಿಮಾದ ಕತೆಯು ನೀರಿನದ್ದೆ ಆಗಿದೆ. ಕಾಲ್ಪನಿಕ ಬರದ ಊರಿನಲ್ಲಿ ನೀರು ಸಿಗದೆ ಜನರು ಪರದಾಡುತ್ತಿರುತ್ತಾರೆ. ಇದಕ್ಕೆ ಅಲ್ಲಿನ ಮುಖಂಡರು, ಶಾಸಕರು ಪ್ರಯತ್ನಪಟ್ಟರೂ ಪರಿಹಾರ ಸಿಗುವುದಿಲ್ಲ. ಕೊನೆಗೆ ಸ್ಥಳೀಯ ಮಕ್ಕಳು ಸೇರಿಕೊಂಡು ಚಾಣಾಕ್ಷತನದಿಂದ ಇದಕ್ಕೆ ಪರಿಹಾರ ಕಂಡುಹಿಡಿದು ಜನರು ನಿರಾಳರಾಗುವಂತೆ ಮಾಡುತ್ತಾರೆ. ಚಿಣ್ಣರುಗಳು ಇದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು…