ಗುಂಡಜ್ಜಿ ಎಂಬ ಅಬಲೆಯ ಜೀವಗಾಥೆಯ ಹೆಜ್ಜೆ ಗುರಿತು…
ಗುಂಡಜ್ಜಿ ಎಂಬ ಅಬಲೆಯ ಜೀವಗಾಥೆಯ ಹೆಜ್ಜೆ ಗುರಿತು… ಅದು ಎಪ್ಪತ್ತನೇ ದಶಕದ ಮಧ್ಯಭಾಗದ ಜುಲೈ ತಿಂಗಳ ಮಂಗಳವಾರದ ಒಂದು ದಿನ. ಎಂದಿನಂತೆ ಬೆಳಿಗ್ಗೆ ಒಂಬತ್ತರ ಸುಮಾರಿಗೆ ಶಾಲೆಗೆ ಹೊರಟು ನಿಂತಿದ್ದವನು ವಿರುಪಣ್ಣ ತಾತನ ಬರುವನ್ನು ಎದುರು ನೋಡುತ್ತಾ ಮನೆ ಬಾಗಿಲಿನಲ್ಲಿ ನಿಂತಿದ್ದೆ. ಬೆಳಿಗ್ಗೆ ನಾನು ಶಾಲೆಗೆ ಹೊರಡುವ ಸಮಯಕ್ಕೆ ಸರಿಯಾಗಿ ತಾತ ಚಂದ್ರಮೌಳೇಶ್ವರ ದೇವಸ್ಥಾನದ ತಮ್ಮ ನಿತ್ಯಪೂಜೆಯ ಸಲುವಾಗಿ ನಮ್ಮ ಮನೆಯ ಮುಂದೆ ಹಾದು ಹೋಗುತ್ತಿದ್ದ ಊರ ಮುಖ್ಯರಸ್ತೆಯಲ್ಲಿ ನಡೆದು ಹೋಗುತ್ತಿದ್ದದ್ದು ವರ್ಷಗಳಿಂದ ಚಾಲ್ತಿಯಲ್ಲಿದ್ದ ಪದ್ಧತಿ.…