ಕಲೆಗಳಲ್ಲಿ ವಿಶೇಷವಾದ ಕಲೆ ನಾಟಕ ಕಲೆ: ಕವಿ ಬಿ.ಆರ್ ಲಕ್ಷ್ಮಣ್‌ರಾವ್
ಬೆಂಗಳೂರು ಜ, 04: ಎಲ್ಲಾ ಕಲೆಗಳ ಸಮ್ಮಿಲನವನ್ನು ಹೊಂದಿರುವ ವಿಶೇಷವಾದ ಕಲೆ ನಾಟಕ ಕಲೆ. ಗ್ರಾಮಾಂತರ ಪ್ರದೇಶಗಳಿಗೂ ಹವ್ಯಾಸಿ ನಾಟಕ ಕಲೆಯನ್ನು ಪಸರಿಸುವ ನಿಟ್ಟಿನಲ್ಲಿ ಇತ್ತೀಚಿನ ಬೆಳವಣಿಗೆಗಳು ಸ್ವಾಗತಾರ್ಹ ಎಂದು ಖ್ಯಾತ ಕವಿ ಲಕ್ಷ್ಮಣ್ ರಾವ್ ಹೇಳಿದರು. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಐಶ್ವರ್ಯ ಕಲಾನಿಕೇತನ ಸಂಸ್ಥೆ ಆಯೋಜಿಸಿದ್ದ ಆಷಾಢದ ಒಂದು ದಿನ ನಾಟಕ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲಾ ಕಲೆಗಳನ್ನು ಮಿಳಿತಗೊಂಡಂತಹ ನಾಟಕ ಕಲೆ ಬಹಳ ಪ್ರಮುಖವಾದದ್ದು. ಕವಿಯಾಗಿ ನಾನು ಪ್ರಸಿದ್ದಿಯಾಗಿದ್ದರೂ ಒಂದೆರಡು…