ಮದುವೆ ದಲ್ಲಾಳಿಯ ಚಾಕುಚಕ್ಯತೆ
ಮದುವೆ ದಲ್ಲಾಳಿಯ ಚಾಕುಚಕ್ಯತೆ “ಇಂದ್ರಮ್ಮಾ, ಇಂದ್ರಮ್ಮಾ” ಎನ್ನುವ ಪರಿಚಿತ ಕಂಠವೊಂದು ನನ್ನ ಅಮ್ಮನ ಹೆಸರಿಡಿದು ಕೂಗುತ್ತಾ, ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿದ್ದ ನಮ್ಮ ಬಾಡಿಗೆ ಮನೆಯ ಮುಂಬಾಗಿಲು ದಾಟಿ ಒಳಬರಲು, ಹೊರಕೋಣೆಯಲ್ಲಿ ಕುಳಿತು ಅಂದಿನ “ವಿಜಯಕರ್ನಾಟಕ” ದಿನಪತ್ರಿಕೆಯ ಹಾಳೆಗಳನ್ನು ಮುಗುಚಿ ಹಾಕುತ್ತಿದ್ದ ನಾನು, ಯಾರು ಬಂದಿರಬಹುದು ಎನ್ನುವ ಕುತೂಹಲವನ್ನು ಅದುಮಿಡಲಾಗದೆ, ಮುಂಭಾಗದ ಹಾಲನ್ನು ಪ್ರವೇಶಿಸಿದೆ. “ಏನಪ್ಪಾ, ಪ್ರಕಾಶ, ಬೆಂಗಳೂರಿನಿಂದ ಯಾವಾಗ ಬಂದಿದ್ದು?” ಎಂದು ನನ್ನ ಯೋಗಕ್ಷೇಮವನ್ನು ವಿಚಾರಿಸಲು ಮೊದಲಿಟ್ಟ ಅತಿಥಿಯ ಮುಖವನ್ನು ದಿಟ್ಟಿಸಿ ನೋಡತೊಡಗಿದೆ. “ಯಾಕೆ ಸಾಹೇಬರೇ? ನನ್ನ…