ವಿಜಯನಗರ ಸಾಮ್ರಾಜ್ಯದ ಪ್ರಥಮ ರಾಜಧಾನಿ ಆನೆಗೊಂದಿ
ವಿಜಯನಗರ ಸಾಮ್ರಾಜ್ಯದ ಪ್ರಥಮ ರಾಜಧಾನಿ ಆನೆಗೊಂದಿ ತುಂಗಭದ್ರಾ ನದಿಯ ಬಲದಂಡೆಯು ಹಂಪೆಗೆ ಆಶ್ರಯ ನೀಡಿದ್ದರೆ, ಎಡದಂಡೆಯು ಪ್ರಾಚೀನ ಆನೆಗೊಂದಿಗೆ ನೆಲೆಯಾಗಿದೆ. ಈ ಎರಡೂ ಚಾರಿತ್ರಿಕ ಸ್ಥಳಗಳು ಆದಿಮ ಕಾಲದಿಂದಲೂ ಮಾನವನ ಪ್ರಮುಖ ಪ್ರಸಿದ್ಧ ವಸತಿತಾಣಗಳು. ಭೌಗೋಳಿಕವಾಗಿಯೂ ಈ ಪ್ರದೇಶವು ಕಣಶಿಲೆಯ ಬೆಟ್ಟಗುಡ್ಡ, ಗುಹೆಗಹ್ವರ, ನದಿ, ಕಣಿವೆಗಳಿಂದ ಕೂಡಿದ ಅತ್ಯಂತ ಸುಂದರ ತಾಣ. ಆನೆಗೊಂದಿ ಪರಿಸರವು ಇತ್ತೀಚೆಗೆ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇದಕ್ಕೆ ಕಾರಣ ಇಲ್ಲಿನ ಹತ್ತಾರು ಪ್ರವಾಸಿ ಸ್ಥಳಗಳು. ಇಲ್ಲಿರುವ ಪ್ರಸಿದ್ಧ ಪ್ರಾಗೈತಿಹಾಸಿಕ, ಚಾರಿತ್ರಿಕ ಮತ್ತು ಪೌರಾಣಿಕ…