Girl in a jacket

Daily Archives: December 26, 2021

ಡಿಸೆಂಬರ್ 24 ಆಡಿಯೋ ಬಿಡುಗಡೆ

ಎಂಜಿ ಎನ್ ಪ್ರೊಡಕ್ಷನ್ ತಯಾರಾಗುತ್ತಿರುವ ಡಿಸೆಂಬರ್ 24 ಚಿತ್ರಕ್ಕೆ ದೇವು ಹಾಸನ್ ಇದೇ ಮೊದಲಬಾರಿಗೆ ಸಿನಿಮಾ ನಿರ್ಮಾಪಕರಾಗುತ್ತಿದ್ದಾರೆ. ಹುಲಿಯೂರು ದುರ್ಗದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಅವರು ನಿರ್ಮಾಣ ಮಾಡಿರುವ ಚಿತ್ರ ಡಿಸೆಂಬರ್‌ 24. ಹಾರರ್, ಥ್ರಿಲ್ಲರ್, ಕಥಾನಕ ಹೊಂದಿರುವ ಈ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ನಟ ಶ್ರೀನಗರ ಕಿಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಕೋರಿದರು. ನಾಗರಾಜ್ ಎಂಜಿ ಗೌಡ ಕಥೆ, ಚಿತ್ರಕಥೆ…

ಓಮೈಕ್ರಾನ್ ಭೀತಿ;ರಾಜ್ಯದಲ್ಲಿ ಡಿ ೨೮ ರಿಂದ ಹತ್ತು ದಿನ ನೈಟ್ ಕರ್ಪ್ಯೂ ಜಾರಿ

ಬೆಂಗಳೂರು, ಡಿ,೨೬; ರಾಜ್ಯದಲ್ಲಿ ಓಮೈಕ್ರಾನ್ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹರಡುವಿಕೆ ತಡೆಯಲು ಸರ್ಕಾರ ಹತ್ತು ದಿನಗಳ ಕಾಲ ನೈಟ್ ಕರ್ಪ್ಯೂ ಜಾರಿಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ರಾಜ್ಯದ ಕೋವಿಡ್ ಸ್ಥಿತಿಗತಿ ಕುರಿತು ಉನ್ನತ ಮಟ್ಟದ ಸಭೆ ನಡೆಸಿದರು. ಕಂದಾಯ ಸಚಿವ ಆರ್. ಅಶೋಕ, ಗೃಹ ಸಚಿವ ಆರಗ ಜ್ಞಾನೇಂದ್ರ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಡಿಸೆಂಬರ್ ೨೮ರಿಂದ ೧೦ ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೊಳಿಸಲು ಒಪ್ಪಿಗೆ ನೀಡಲಾಗಿದೆ.…

ಶ್ರೀ ಶೈಲ ಮಹಾತ್ಮೆಯಲ್ಲಿಬಾಲನಟಿಯಾಗಿಜಯಲಲಿತ ಮಾಯಾಮಂತ್ರಗಳ ಚಿತ್ರಆಶಾಸುಂದರಿ

ಶ್ರೀ ಶೈಲ ಮಹಾತ್ಮೆಯಲ್ಲಿಬಾಲನಟಿಯಾಗಿಜಯಲಲಿತ ಮಾಯಾಮಂತ್ರಗಳ ಚಿತ್ರಆಶಾಸುಂದರಿ ಶ್ರೀಶೈಲ ಮಹಾತ್ಮೆಚಿತ್ರದಲ್ಲಿ ಪಾತ್ರವೊಂದನ್ನು ಮಾಡಿದ್ದ ನಟಿ ಸಂಧ್ಯಾ ಮದರಾಸಿನ ಸ್ಟುಡಿಯೊದಲ್ಲಿಚಿತ್ರೀಕರಣ ನಡೆಯುತ್ತಿದ್ದ ವೇಳೆ ತಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದರು. ಬೆಂಗಳೂರಿನ ಕಾನ್ವೆಂಟ್‌ಒಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಈ ಬಾಲೆ ಚಿತ್ರೀಕರಣವನ್ನುಕುತೂಹಲದಿಂದ ನೋಡುತ್ತಾ ಕುಳಿತಿದ್ದಳು.ಬಾಲನಟಿಯಾಗಿನೃತ್ಯದ ಪಾತ್ರ ನಿರ್ವಹಿಸಬೇಕಾಗಿದ್ದ ಶಾಲಾ ಬಾಲಕಿಯೊಬ್ಬಳು ಅಂದಿನ ಚಿತ್ರೀಕರಣಕ್ಕೆಗೈರುಹಾಜರಾಗಿದ್ದುಚಿತ್ರದ ನಿರ್ಮಾಪರು ಹಾಗೂ ನಿರ್ದೇಶಕರಲ್ಲಿ ತಳಮಳ ತಂದಿತ್ತು. ನಿರ್ದೇಶಕಆರೂರು ಪಟ್ಟಾಭಿಯವರಕಣ್ಣಿಗೆಚಿತ್ರೀಕರಣ ವೀಕ್ಷಿಸುತ್ತಿದ್ದ ಬಾಲಕಿ ಕಾಣಿಸಿದಳು. ತಾಯಿ ಸಂಧ್ಯಾಅವರೊಂದಿಗೆ ಮಾತನಾಡಿ ಪಾತ್ರ ನಿರ್ವಹಿಸಲು ಸಮ್ಮತಿ ಪಡೆದು, ಬಣ್ಣ ಹಚ್ಚಿಸಿದರು. ಆ ಬಾಲಕಿ…

ಅಪರೂಪದ ಕೋಟಿಲಿಂಗಗಳ ಪ್ರಾಚೀನ ತಾಣ ಓಹಿಲಾಪುರ

 ಅಪರೂಪದ ಕೋಟಿಲಿಂಗಗಳ ಪ್ರಾಚೀನ ತಾಣ ಓಹಿಲಾಪುರ ೧೯೯೮ನೇ ಇಸವಿ, ಕನ್ನಡ ವಿಶ್ವವಿದ್ಯಾಲಯದ ವಸ್ತುಸಂಗ್ರಹಾಲಯಕ್ಕಾಗಿ ಶಿಲ್ಪ, ಶಾಸನ, ವೀರಗಲ್ಲು ಮೊದಲಾದ ಪ್ರಾಚೀನ ವಸ್ತುವಿಶೇಷಗಳನ್ನು ಸಂಗ್ರಹಿಸಿ ತರಲೆಂದೇ ನೇಮಕವಾದ ತಂಡ ನಮ್ಮದು. ತಂಡದಲ್ಲಿ ನನ್ನನ್ನು ಸೇರಿದಂತೆ ವಾಸುದೇವ ಬಡಿಗೇರ, ಎಂ. ಕೊಟ್ರೇಶ ಮತ್ತು ನೆರಗಲ್ಲಪ್ಪ ಸೇರಿದ್ದೆವು. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಹಳ್ಳಿಗಳನ್ನು ಸುತ್ತುತ್ತಾ ಅಲ್ಲಿನ ದೇವಾಲಯ, ಮಠ-ಮಂದಿರ, ಕಚೇರಿಗಳನ್ನು ಕಂಡು ಅಲ್ಲಿನ ಮುಖಂಡರು, ಅಧಿಕಾರಿಗಳು ಮತ್ತು ಸ್ಥಳೀಯ ಜನರನ್ನು ಒಪ್ಪಿಸಿ, ಓಲೈಸಿ ವಸ್ತುಗಳನ್ನು ಸಂಗ್ರಹಿಸುವ ಕಾಯಕವದು. ಈ ಸಂದರ್ಭದಲ್ಲಿ…

ಸಂಗೀತದ ಅನನ್ಯ ಉಪಾಸಕನ ಅಸಂಗತ ಬದುಕು..!

ಸಂಗೀತದ ಅನನ್ಯ ಉಪಾಸಕನ ಅಸಂಗತ ಬದುಕು..! “ನೀರ ಮೇಲಣ ಗುಳ್ಳೆ ನಿಜವಲ್ಲೊ ಹರಿಯೇ” ಎನ್ನುವ ಸುಶ್ರಾವ್ಯ ಕಂಠವೊಂದು ಕಿವಿಗಳನ್ನು ಅಪ್ಪಳಿಸಲು, ಜಳಕಕ್ಕೆಂದು ಬಚ್ಚಲು ಮನೆಗೆ ನಡೆದಿದ್ದವನು ಹಿಂತಿರುಗಿ ಓಡುತ್ತಾ ಸೀದಾ ಮುಂಬಾಗಿಲಿಗೆ ಬಂದು ನಿಂತು, ಕತ್ತನ್ನು ನೀಳವಾಗಿ ಹೊರಚಾಚಿ, ರಸ್ತೆಯ ಎರಡೂ ಬದಿಗೆ ದೃಷ್ಟಿ ಹರಿಸುತ್ತಾ, ಬಾಗಿಲ ಎಡತೋಳಿಗೆ ದೇಹದ ಅಷ್ಟೂ ಭಾರವನ್ನು ಹಾಕಿ ಒರಗಿ ನಿಂತೆನು. ನಾನು ಊಹಿಸಿದಂತೆಯೇ ಸುಮಾರು ಐವತ್ತನ್ನು ಮೀರಿದ ವಯಸ್ಸಿನ ಕೃಶಕಾಯದ, ಗೌರವರ್ಣದ, ಬಣ್ಣದ ಪಟ್ಟೆಪಟ್ಟೆ ಲುಂಗಿ ಮತ್ತು ಬಿಳಿಯ ಬನಿಯನ್…

Girl in a jacket