ಗುರುಗಳಿಗೆ ಸಹಾಯ ಮಾಡಲು ಹೋಗಿ ಪಜೀತಿಗೆ ಸಿಕ್ಕ ಶಿಷ್ಯ
ಗುರುಗಳಿಗೆ ಸಹಾಯ ಮಾಡಲು ಹೋಗಿ ಪಜೀತಿಗೆ ಸಿಕ್ಕ ಶಿಷ್ಯ “ನೋಡು ಲೋಕಪ್ಪ, ಮುಂದಿನ ತಿಂಗಳು ಸರಿಯಾದ ಸಮಯಕ್ಕೆ ಬಡ್ಡಿ ಕೊಡಬೇಕು. ಇಲ್ಲಾ ಅಂದ್ರೆ ಮುಂದಿನ ತಿಂಗಳು ಅಸಲು ಸೇರಿದಂತೆ ನನ್ನ ದುಡ್ಡು ವಾಪಾಸು ಮಾಡಿಬಿಡು” ಎನ್ನುವ ಅವ್ವನ ಏರಿದ ಧ್ವನಿಯ ಮಾತುಗಳು ಮನೆಯ ಪಡಸಾಲೆಯಿಂದ ಕೇಳಿ ಬಂದದ್ದು ನನಗೆ ಅಂತಹಾ ಹೊಸ ವಿಷಯವೇನಾಗಿರಲಿಲ್ಲ. ಸಾಕಷ್ಟು ವ್ಯಾಪಕವಾಗಿ ನಮ್ಮೂರಿನಲ್ಲಿ ಅಷ್ಟೇ ಅಲ್ಲದೆ ಸುತ್ತಮುತ್ತಲ ಕೂನಬೇವು, ಕಡಬನಕಟ್ಟೆ, ಹುಣಸೇಕಟ್ಟೆ, ಬಾಗೇನಾಳ್ , ಬೆಣ್ಣೆಹಳ್ಳಿ, ದೊಣ್ಣೆಹಳ್ಳಿ, ಕಟ್ಟಿಗೆಹಳ್ಳಿ, ದೊಡಘಟ್ಟ, ಬಂಗಾರಕ್ಕನಹಳ್ಳಿ, ನಾಯಕನಹಟ್ಟಿ,…