ಸರ್ಕಾರ ಗಾಂಜಾಗೆ ಜೈ ಎಂದಿದ್ದೇಕೇ..?
Writing- ಪರಶಿವ ಧನಗೂರು ಸರ್ಕಾರ ಗಾಂಜಾಗೆ ಜೈ ಎಂದಿದ್ದೇಕೇ? ಮಾದಕ ವಸ್ತುಗಳ ಸಾಗಾಣಿಕೆ-ಮಾರಾಟ-ಸೇವನೆ ವಿರುದ್ಧ ಜಗತ್ತಿನ ಎಲ್ಲಾ ದೇಶಗಳ ಜೊತೆ ಸೇರಿಕೊಂಡು 1960ರಲ್ಲೇ ಸಮರ ಸಾರಿದ್ದ ನಮ್ಮ ಭಾರತ ದೇಶ, ಯುದ್ಧ ಘೋಷಿಸಿ ಗೆಲ್ಲುವ ಮೊದಲೇ ಸೋಲೊಪ್ಪಿಕೊಳ್ಳುತ್ತಿರುವ ಕಾರಣವೇನೆಂದು ತಿಳಿಯುತ್ತಿಲ್ಲ. ಕೇಂದ್ರ ಸರ್ಕಾರ ಈಗ ಕಳೆದ ಅಕ್ಟೋಬರ್ ತಿಂಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮೂಲಕ “ಸಣ್ಣ ಪ್ರಮಾಣದ ಮಾದಕ ವಸ್ತು ಸೇವಿಸುವ, ಇಟ್ಟುಕೊಳ್ಳುವ ವ್ಯಕ್ತಿಗಳಿಗೆ ಶಿಕ್ಷೆ ಬೇಡ!” ಎಂಬ ಆದೇಶ ಹೊರಡಿಸಿ ತಮ್ಮ ಕೆಳಹಂತದ…