Girl in a jacket

Daily Archives: November 26, 2021

ರಾಜ್ಯಪಾಲರಿಗೆ ವಿಪಕ್ಷಗಳ ದೂರು ಹಾಸ್ಯಾಸ್ಪದ- ಸಿಎಂ

Post by kendhooli desk ದಾವಣಗೆರೆ, ನ, 26: ಸರ್ಕಾರ ವಜಾ ಮಾಡುವ ಬಗ್ಗೆ ರಾಜ್ಯಪಾಲರಿಗೆ ವಿಪಕ್ಷಗಳು ದೂರು ಸಲ್ಲಿಸಿರುವವುದು ಹಾಸ್ಯಾಸ್ಪದ. ಕಾಮಗಾರಿಗಳ ಪರ್ಸಂಟೇಜ್ ವಿಚಾರದಲ್ಲಿ ಕಾಂಗ್ರೆಸ್ ಬಹಳ ಆಸಕ್ತಿ ವಹಿಸಿರುವುದರಿಂದ ಅವರ ಕಾಲದ ಟೆಂಡರ್ ಕಾಮಗಾರಿಗಳನ್ನು ತನಿಖೆಗೊಳಪಡಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ದಾವಣಗೆರೆಯಲ್ಲಿಸಂವಿಧಾನ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದರು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿನ ಗುತ್ತಿಗೆದಾರರ ಪರ್ಸೆಂಟೇಜ್ ಅನುಭವವನ್ನು ಪತ್ರದಲ್ಲಿ ಬರೆದಿದ್ದಾರೆ.…

ಬಂಡವಾಳ ಆಕರ್ಷಿಸಲು ಬೆಂಗಳೂರಿನಲ್ಲಿ ಮೊರಾಕ್ಕೊ ರೋಡ್-ಶೋ

ಬೆಂಗಳೂರು,ನ,25: ಕರ್ನಾಟಕ ಮತ್ತು ಮೊರಾಕ್ಕೊ ನಡುವೆ ಎರಡೂ ಕಡೆಗಳಿಂದ ನೇರ ವಿಮಾನ ಸಂಪರ್ಕವನ್ನು ಆರಂಭಿಸಿದರೆ ದ್ವಿಪಕ್ಷೀಯ ವಾಣಿಜ್ಯ ವಹಿವಾಟು ವೃದ್ಧಿಯಾಗುವ ಸದವಕಾಶವಿದೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. ಮೊರಾಕ್ಕೊದ ಹೂಡಿಕೆ ಮತ್ತು ರಫ್ತು ಅಭಿವೃದ್ಧಿ ಸಂಸ್ಥೆಯು ಬಂಡವಾಳ ಆಕರ್ಷಿಸಲು `ಮೊರಾಕ್ಕೊ ನೌ’ ಉಪಕ್ರಮದಡಿ ನಗರದ ಖಾಸಗಿ ಹೋಟೆಲಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೋಡ್ ಶೋ ಸಭೆಯಲ್ಲಿ ಸಚಿವರು ಮಾತನಾಡಿದರು. `ಬೆಂಗಳೂರು ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಟ್ಟದ ನಗರವಾಗಿದ್ದು, ಅತ್ಯುತ್ತಮ…

ಡೆಡ್ಲಿ ಚಂಡಮಾರುತಕ್ಕೆ ದಕ್ಷಿಣ ಭಾರತ ತತ್ತರ,ವಿಜ್ಞಾನಿಗಳಿಗೆ ಸಿಗುತ್ತಿಲ್ಲ ಉತ್ತರ..!

ಡೆಡ್ಲಿ ಚಂಡಮಾರುತಕ್ಕೆ ದಕ್ಷಿಣ ಭಾರತ ತತ್ತರ,ವಿಜ್ಞಾನಿಗಳಿಗೆ ಸಿಗುತ್ತಿಲ್ಲ ಉತ್ತರ..! Writing- ಪರಶಿವ ಧನಗೂರು ಪ್ರಚಂಡ ಚಂಡಮಾರುತ..! ದಕ್ಷಿಣ ಭಾರತದ ಮೇಲೇಕೆ ಮುರಿದುಕೊಂಡು ಬಿದ್ದಿವೆ ಈ ಡೆಡ್ಲಿ ಚಂಡಮಾರುತಗಳು?ವೀಶ್ವ ಭೂಪಟದಲ್ಲಿ ಹಲವು ನಗರಗಳು ನಾಪತ್ತೆ ಯಾಗುವ ಕಾಲ ಬಂದೇ ಬಿಡ್ತಾ? ಭಾರತದ ಹನ್ನೆರಡು ಪ್ರಮುಖ ನಗರಗಳು ಈ ಶತಮಾನದಂತ್ಯಕ್ಕೆ ಸಮುದ್ರದೊಳಗೆ ಮುಳುಗಿಹೋಗಬಹುದು ಎಚ್ಚರಾ! ಎಂದು ನಾಸಾ ವಿಜ್ಞಾನಿಗಳು ಹೇಳಿದ್ದು ಯಾಕೇ? ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂದ್ರ ಪ್ರದೇಶ, ಕೇರಳ, ತೆಲಂಗಾಣ, ತಮಿಳು ನಾಡುಗಳನ್ನು ಜಲಪ್ರಳಯ ದಲ್ಲಿ…

ಅಣ್ಣಿಗೇರಿಯ ಆಕಸ್ಮಿಕ ತಲೆಬುರುಡೆಗಳತ್ತ . . . . .

ಅಣ್ಣಿಗೇರಿಯ ಆಕಸ್ಮಿಕ ತಲೆಬುರುಡೆಗಳತ್ತ . . . . ಅಣ್ಣಿಗೇರಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಪ್ರಾಚೀನ ಗ್ರಾಮ. ಇದು ಪ್ರಸಿದ್ಧವಾಗಿರುವುದು ಹೊಯ್ಸಳ ಕಾಲದ ಅಮೃತೇಶ್ವರ ದೇವಾಲಯದಿಂದ. ಕ್ರಿ.ಶ.೧೦೫೦ರಲ್ಲಿ ನಿರ್ಮಾಣವಾದ ಈ ದೇವಾಲಯವಲ್ಲದೆ, ಈ ಗ್ರಾಮವು ಬೆಳವೊಲ-೩೦೦ ನಾಡಿನ ಪ್ರಸಿದ್ಧ ರಾಜಧಾನಿಯಾಗಿದ್ದುದು ಗಮನಾರ್ಹ. ಇಲ್ಲಿ ಹನ್ನೆರಡಕ್ಕೂ ಹೆಚ್ಚು ಪ್ರಾಚೀನ ದೇವಾಲಯ ಮತ್ತು ಜಿನಾಲಯಗಳು ಹಾಗೂ ಇಪ್ಪತ್ತೆಂಟಕ್ಕೂ ಹೆಚ್ಚು ಶಾಸನಗಳನ್ನು ಕಾಣಬಹುದು. ಅವುಗಳಲ್ಲಿ ರಾಮಲಿಂಗೇಶ್ವರ, ಬನಶಂಕರಿ, ಕಲ್ಮಠ(ತ್ರಿಕೂಟ), ಪುರದ ವೀರಭದ್ರೇಶ್ವರ, ಪಾರ್ಶ್ವನಾಥ ಬಸದಿ ಮುಖ್ಯವಾಗಿವೆ. ಇವು ಅಣ್ಣಿಗೇರಿಯ ಪ್ರಾಚೀನ…

ಕತ್ತಿವರಸೆಯಲ್ಲ್ಲಿ ವಿಸ್ಮಯ ಮೂಡಿಸಿದ ರಾಜಕುಮಾರ್ ಕಲಾವಿದರಿಗೆ ಆಶ್ರಯ ನೀಡಿದ್ದ ಗುಗ್ಗುಮಹಲ್

ಕತ್ತಿವರಸೆಯಲ್ಲ್ಲಿ ವಿಸ್ಮಯ ಮೂಡಿಸಿದ ರಾಜಕುಮಾರ್  ಕಲಾವಿದರಿಗೆ ಆಶ್ರಯ ನೀಡಿದ್ದ ಗುಗ್ಗುಮಹಲ್ ಗಿರಿಜಾ ಮತ್ತು ಸೂರ್ಯಪ್ರಭಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ೧೯೬೦ರಲ್ಲಿ ಬಿಡುಗಡೆಗೊಂಡ ರಾಣಿ ಹೊನ್ನಮ್ಮ ಕಪ್ಪು ಬಿಳುಪು ಜಾನಪದ ಚಿತ್ರವನ್ನು ಟಿ.ಎಸ್.ಕರಿಬಸಯ್ಯ ನಿರ್ಮಿಸಿದರು. ಕು.ರ.ಸೀತಾರಾಮಶಾಸ್ತ್ರಿ ನಿರ್ದೇಶಿಸಿದ ಈ ಚಿತ್ರಕ್ಕೆ ಎಸ್.ರಾಮನಾಥನ್ ಮತ್ತು ಬಿ.ಎಸ್. ವಿಶ್ವನಾಥ್ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ರಾಜಕುಮಾರ್, ಲೀಲಾವತಿ, ಲಲಿತಾರಾವ್, ಬಾಲಕೃಷ್ಣ, ನರಸಿಂಹರಾಜು, ಲಕ್ಷ್ಮಿ, ವೀರಭದ್ರಯ್ಯ, ಈಶ್ವರಪ್ಪ, ಸುಬ್ಬಣ್ಣ, ರಾಮಚಂದ್ರಶಾಸ್ತ್ರಿ, ಗುಗ್ಗು, ಜಿ.ವಿ.ಅಯ್ಯರ್, ಶಿವಾಜಿರಾವ್ ಅಭಿನಯಿಸಿದರು. ಕು.ರ.ಸೀತಾರಾಮಶಾಸ್ತ್ರಿ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ರಚಿಸಿದರು.…

ಅನ್ವೇಷಣೆಗಳ ಕರಾಳ ಹಾಗೂ ಬೆಳಕಿನ ಸಂಕೀರ್ಣ ಲೋಕ

ಅನ್ವೇಷಣೆಗಳ ಕರಾಳ ಹಾಗೂ ಬೆಳಕಿನ ಸಂಕೀರ್ಣ ಲೋಕ ಸಂಪ್ರದಾಯಿಕ ಚರಿತ್ರೆಯೆಂದರೆ ಏಕಮುಖಿಯಾದುದು. ಆಡಳಿತ ಮೂಲವಾದದು.ಪ್ರಭು ಪ್ರಧಾನವಾದುದು.ರಾಜಕೀಯವೇ ಮುಖ್ಯವಾದ ಇದರ ಆವರಣದೊಳಗೆ ಉತ್ಪಾದನಾ ಪ್ರಧಾನರ ಕಥನಗಳು ನಿರ್ಲಕ್ಷಕ್ಕೆ ಒಳಗಾಗಿವೆ.ತೆಳುವಾದ ಸರಳವಾದ ಚರಿತ್ರೆಯ ಈ ರೂಪಗಳ ಮಿತಿಯನ್ನ ಗ್ರಹಿಸಿಯೇ ಹೊಸ ಬಗೆಯ ಚರಿತ್ರೆಗಳನ್ನ ಕಟ್ಟುವ ರೂಪಿಸುವ ಪರಂಪರೆಗಳು ಈಗೀಗ ಗಟ್ಟಿಗೊಳ್ಳುತ್ತಿವೆ.ಜನ ಚರಿತ್ರೆ,ಮಹಿಳಾ ಚರಿತ್ರೆ,ಪ್ರಾದೇಶಿಕ ಚರಿತ್ರೆ,ಸಬಾಲ್ಟ್ರನ್ ಚರಿತ್ರೆ..ಹೀಗೆ ಹೊಸ ಹೊಸ ಅನ್ವೇಷಣಾ ಬರಹಗಳ ಕ್ರಮಗಳನ್ನ ಕಾಣಬಹುದಾಗಿದೆ. ಈ ನೆಲೆಯಲ್ಲಿ ಪರಂಪರೆಯ ಸಂಪ್ರದಾಯಿಕ ಚರಿತ್ರೆಯು ಗುರ್ತಿಸಲಾರದ ಚರಿತ್ರೆಯ ಬುನಾದಿಯಂತೆಯೇ ಆಗಿರುವ ಕಥನವೇ ರೈತರ…

ಮೋದಿ ಕ್ಷಮಾಯಾಚನೆ ಹಿಂದೆ -ಮುಂದೆ

ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸುವುದರ ಜೊತೆಗೇ ಜನರ ಕ್ಷಮೆಯನ್ನೂ ಕೋರಿದ್ದಾರೆ. ಪ್ರಧಾನಿಯೊಬ್ಬರು ಬಹಿರಂಗವಾಗಿ ಕ್ಷಮಾಯಾಚಿಸಿದ ಬಹು ಅಪರೂಪದ ಪ್ರಸಂಗವಿದು. ದುಡುಕಿನ ನಿರ್ಧಾರವಾಗಿ ತುರ್ತು ಪರಿಸ್ಥಿತಿ ಹೇರಿದ ಇಂದಿರಾಗಾಂಧಿ ತಾವು ಎಸಗಿದ ಪ್ರಮಾದಕ್ಕೆ ಪ್ರತಿಯಾಗಿ ಕ್ಷಮೆ ಕೋರದೆ ಜನಾಕ್ರೋಶಕ್ಕೆ ಈಡಾದ ರೀತಿ ಮೋದಿ ಜಾಗೃತಿಗೆ ಕಾರಣವಾಗಿರಬಹುದೆ…? ಮೋದಿ ಕ್ಷಮಾಯಾಚನೆ ಹಿಂದೆ -ಮುಂದೆ ಮಾಡಿದ್ದುಣ್ಣೊ ಮಹರಾಯ ಎನ್ನುವುದು ಕನ್ನಡದ ಸೊಗಸಾದ ಗಾದೆಗಳಲ್ಲಿ ಒಂದು. ಉಪ್ಪು ತಿಂದವರು ನೀರು ಕುಡಿಯಬೇಕು ಎನ್ನುವುದು ಮತ್ತೊಂದು. ಇಂಥ ಅರ್ಥಗರ್ಭಿತ…

Girl in a jacket