Girl in a jacket

Daily Archives: November 25, 2021

ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ರಾಜ್ಯಪಾಲರಿಗೆ ಕಾಂಗ್ರೆಸ್ ಮನವಿ

ಬೆಂಗಳೀರು,ನ,25:ರಾಜ್ಯದಲ್ಲಿ ಕಾಮಗಾರಿಯಲ್ಲಿ ಅಂದಾಜು ವೆಚ್ಚದಲ್ಲಿ ಶೇ 40ರಷ್ಟು ಕಮಿಷನ್ ಕೊಡಬೇಕು,ಕಾನೂನು ಸಂಪೂರ್ಣ ಕುಸಿದಿದೆ ಹೀಗಾಗಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಕಾಂಗ್ರೆಸ್  ರಾಜ್ಯಪಾಲರಲ್ಲಿ ಒತ್ತಾಯಿಸಿದೆ. ಇಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿಯೋಗ  ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಇತ್ತೀಚಿಗೆ ಮಾಧ್ಯಮಗಳಲ್ಲಿ  ಬಂದ  ವರದಿಯಲ್ಲಿ ಸರ್ಕಾರಿ ಕಾಮಗಾರಿಗಳ ಅಂದಾಜು ವೆಚ್ಚದಲ್ಲಿ ಸುಮಾರು 40% ಅನ್ನು ಸರ್ಕಾರದ ಸಚಿವರು ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಕಮಿಷನ್ ರೂಪದಲ್ಲಿ ನೀಡಬೇಕು ಎಂದು…

ಉನ್ನತ ಶಿಕ್ಷಣಕ ವಿದ್ಯಾರ್ಥಿಗಳಿಗೆ 2.5 ಲಕ್ಷ ಡಾಲರ್‌ ವಿದ್ಯಾರ್ಥಿ ವೇತನ ಘೊಷಿಸಿದ ನೆಸ್ಟ್‌ಲಿಸ್ಟ್‌ ಸಂಸ್ಥೆ

ಬೆಂಗಳೂರು,ನ,25: ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಕುರಿತು ಉಚಿತವಾಗಿ ಮಾರ್ಗದರ್ಶನ ಹಾಗೂ ಉನ್ನತ ಮಟ್ಟದ ಕಾಲೇಜುಗಳಿಗೆ ದಾಖಲಾತಿಗೆ ಕೌನ್ಸಲಿಂಗ್ ನೀಡಲು ಅಮೆರಿಕಾ ಮೂಲದ ನೆಸ್ಟ್‌ಲಿಂಗ್ ಸಂಸ್ಥೆ ತನ್ನ ಮೊದಲ ಕೌನ್ಸಿಲಿಂಗ್ ಕೇಂದ್ರವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದೆ.ಇದಲ್ಲದೆ ಈ ಕೇಂದ್ರಲ್ಲಿ ಕೌನ್ಸಲಿಂಗ್ ಪಡೆದು ವಿದೇಶಕ್ಕೆಉನ್ನತ ಶಿಕ್ಷಣಕ್ಕೆ ಕೌನ್ಸಲಿಂಗ್ ಪಡೆಯುವ ವಿದ್ಯಾರ್ಥಿಗಳಿಗೆ 2.5 ಲಕ್ಷ ಡಾಲರ್‌ ವಿದ್ಯಾರ್ಥಿ ವೇತನ ಘೊಷಿಸಿದ ನೆಸ್ಟ್‌ಲಿಸ್ಟ್‌ ಸಂಸ್ಥೆ* ಓದಲು ತೆರಳುವ ವಿದ್ಯಾರ್ಥಿಗಳಿಗೆ 2.5 ಲಕ್ಷ ಡಾಲರ್‌ ಸ್ಕಾಲರ್‌ಶಿಪ್‌ ನೀಡುವುದಾಗಿಯೂ ಘೋಷಿಸಿದೆ. ಉನ್ನತ ಶಿಕ್ಷಣ ಸಚಿವ…

ಸಚಿವ ಸಂಪುಟದ ನಿರ್ಣಯದಂತೆ ಟೆಂಡರ್ ಪರಿಶೀಲನೆಗೆ ಎರಡು ಸಮಿತಿಗಳ ರಚನೆ : ಸಿಎಂ

ಬೆಂಗಳೂರು, ನ, 25: ಸಚಿವ ಸಂಪುಟದ ನಿರ್ಣಯದಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಟೆಂಡರ್ ಅಂದಾಜು ಹಾಗೂ ಟೆಂಡರ್ ನಿಬಂಧನೆಗಳ ಪರಿಶೀಲನೆಗಾಗಿ ಎರಡು ಸಮಿತಿಗಳನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಇಲಾಖೆಗಳ ಮುಖ್ಯಸ್ಥರ ಗಮನಕ್ಕೆ ತಂದು, ವಿಚಾರಣೆ ನಡೆಸಿ,ಯಾವುದೇ ತಪ್ಪು ಕಂಡುಬಂದಲ್ಲಿ , ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ. ನನ್ನ ಸರ್ಕಾರ ಬಂದ ಮೇಲೆ ಯಾವುದೇ ಟೆಂಡರ್ ಅಂತಿಮವಾಗಿದ್ದರೆ ಅದನ್ನು ವಿಶೇಷವಾಗಿ ಪರಿಶೀಲನೆ…

ರೈತನ ಬೆತ್ತಲೆ ಮಾಡಿ ಪುಟಗೋಸಿ ಎಸೆವ ಪ್ರಧಾನಿ

ರೈತನ ಬೆತ್ತಲೆ ಮಾಡಿ ಪುಟಗೋಸಿ ಎಸೆವ ಪ್ರಧಾನಿ ವಿಶ್ವದ ಗಮನ ಸೆಳೆದ ರೈತ ಆಂದೋಲನಕ್ಕೆ ವರ್ಷ ತುಂಬುವ ಹೊತ್ತಿನಲ್ಲಿ ಮೂರು ಕೃಷಿ ಕಾಯಿದೆಗಳನ್ನು ರದ್ದು ಮಾಡುವ ವಚನ ನೀಡಿದ್ದಾರೆ ಪ್ರಧಾನಿ. ’ಛಪ್ಪನ್ನೈವತ್ತಾರು’ ಇಂಚಿನ ಎದೆಗಾರಿಕೆಯ ಪ್ರಧಾನಿ ತಾವು ಆಡಿರುವ ಈ ನುಡಿಯನ್ನು ನಿರ್ವಂಚನೆಯಿಂದ ನಡೆಸಿಕೊಡಲಿ. ಮುಂಬರುವ ದಿನಗಳಲ್ಲಿ ಇವೇ ಕಾಯಿದೆಯ ಅನಿಷ್ಟಗಳು ಛದ್ಮ ವೇಷ ಹೊದ್ದು ಪ್ರತ್ಯಕ್ಷವಾಗದಿರಲಿ. ಒಂದು ಸಂದೇಹವನ್ನು ಮೋದಿಯವರು ಮತ್ತು ಅವರ ಪಕ್ಷ ನಿವಾರಿಸಬೇಕಿದೆ. ತಮ್ಮ ಮಾತುಗಳ ಕನ್ನಡಿಯಲ್ಲಿ ತಮ್ಮದೇ ಮುಖ ನೋಡಿಕೊಳ್ಳಬೇಕಿದೆ. ದೇಶದ…

Girl in a jacket