ಶೌಕತ್ ಆಲಿಯ ಮುಗ್ದಮನಸ್ಸಿನ ಸುತ್ತಲ ನೆನಪುಗಳು
ಶೌಕತ್ ಆಲಿಯ ಮುಗ್ದಮನಸ್ಸಿನ ಸುತ್ತಲ ನೆನಪುಗಳು… ಅದು ನಾನು ಆರನೇ ತರಗತಿಯಲ್ಲಿದ್ದಾಗಿನ ಸೆಪ್ಟೆಂಬರ್ ತಿಂಗಳ ಒಂದು ದಿನ ಅನ್ನಿಸುತ್ತದೆ, ನಮ್ಮ ಅಂದಿನ ವಿಜ್ಞಾನ ಪಿರಿಯಡ್ ಆ ದಿನದ ಕೊನೇ ಅವಧಿಯಾಗಿತ್ತು. ಪಿರಿಯಡ್ ಮುಗಿಯುದಕ್ಕೆ ಇನ್ನೇನು ಒಂದು ಹದಿನೈದು ನಿಮಿಷ ಬಾಕಿ ಎನ್ನುವಾಗಲೇ ಜವಾನ ತಮ್ಮಯ್ಯ ಒಂದು ಸಣ್ಣಗಾತ್ರದ ನೋಟ್ ಬುಕ್ ನೊಂದಿಗೆ ನಮ್ಮ ತರಗತಿಯ ಒಳಗೆ ಕಾಲಿಟ್ಟ. ತಮ್ಮಯ್ಯನ ನಿರೀಕ್ಷೆಯನ್ನು ನಾವು ದಿನದ ಮೊದಲನೇ ಪಿರಿಯಡ್ ನಿಂದಲೂ ಮಾಡುತ್ತಲೇ ಬಂದಿದ್ದೆವು. ಸಪೂರ ದೇಹದ, ಆರೋಗ್ಯಕರ ಕಂದು ದೇಹವರ್ಣದ,…