ನಿವೃತ್ತರಾಗಿಬಿಡಬೇಕಿತ್ತು ಜವಾಹರಲಾಲ ನೆಹರೂ
ನಿವೃತ್ತರಾಗಿಬಿಡಬೇಕಿತ್ತು ಜವಾಹರಲಾಲ ನೆಹರೂ ತಾಯಿ ಭಾರತಿಯ ಹೆಮ್ಮೆಯ ಪುತ್ರ ರತ್ನವೆಂದು ನರೇಂದ್ರ ಮೋದಿಯವರನ್ನೂ, ಜವಾಹರಲಾಲ್ ನೆಹರೂ ಎಂದರೆ ಯಾರದು ಎಂದು ಕೇಳುವಂತಹ ಭವಿತವ್ಯವನ್ನೂ ಜೊತೆ ಜತೆಗೆ ರೂಪಿಸುವ ಘನ ಪ್ರಯತ್ನ ದೇಶದಲ್ಲಿ ಹಗಲಿರುಳು ಜರುಗಿದೆ. ಅವರ ತಪ್ಪುತಡೆಗಳನ್ನಷ್ಟೇ ಎತ್ತಿ ಭೂತಗಾಜಿನಡಿ ಇರಿಸಿ ತೋರಲಾಗುತ್ತಿದೆ. ತಪ್ಪುಗಳ ಮಾಡದಿರುವ ನಾಯಕನಿದ್ದಾನೆಯೇ? ಅವರು ಮಾಡಿದ ದೊಡ್ಡ ತಪ್ಪುಗಳ ಪೈಕಿ ದೀರ್ಘಕಾಲ ಅಧಿಕಾರಕ್ಕೆ ಅಂಟಿಕೊಂಡದ್ದೂ ಒಂದು. ನ್ಯಾಯ ಮತ್ತು ಸಮಾನತೆಯನ್ನು ಸಾಧಿಸಲು ಕಾಂಗ್ರೆಸ್ ಸಮಾಜವಾದೀ ಹಾದಿಯಲ್ಲಿ ನಡೆಯಬೇಕಿದೆ ಎಂಬ ಮಾತನ್ನು ನೆಹರೂ 1930ರಲ್ಲೇ…