Girl in a jacket

Daily Archives: November 9, 2021

ಅಲ್ಲಮ ಕಾವ್ಯ ಪ್ರಶಸ್ತಿ’ಗೆ ಯುವಕವಿಗಳಿಂದ ಹಸ್ತಪ್ರತಿ ಆಹ್ವಾನ.

ಬೆಂಗಳೂರು,ನ,೦೯: ಅಲ್ಲಮ ಪ್ರಕಾಶನದಿಂದ ಅಲ್ಲಮ ಕಾವ್ಯ ಪ್ರಶಸ್ತಿಗಾಗಿ ನಲವತ್ತೈದು ವರ್ಷದೊಳಗಿನ ಯುವಕವಿಗಳಿಂದ ಹಸ್ತಪ್ರತಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ನಿಮಗಳ ಅನುಸಾರ ಕವಿತೆಗಳನ್ನು ಕಳುಹಿಸಬಹುದು. ಹಸ್ತಪ್ರತಿ ಕಳಿಸಲು ನಿಯಮಗಳು ಈ ಕೆಳಗಿನಂತಿವೆ. ೧. ಮೂವತ್ತಕ್ಕಿಂತಲೂ ಹೆಚ್ಚಿನ ಸ್ವರಚಿತ ಕನ್ನಡ ಕವಿತೆಗಳನ್ನು ಹಸ್ತಪ್ರತಿಯು ಒಳಗೊಂಡಿರಬೇಕು. ೨. ಅನುವಾದಿತ, ಹನಿಗವನ ಮತ್ತು ಚುಟುಕು ಕವಿತೆಗಳ ಹಸ್ತಪ್ರತಿಗಳು ಬೇಡ. ೩. ಪ್ರವೇಶವನ್ನು ಕಳಿಸುವ ಯುವಕವಿಗಳು ನಲವತ್ತೈದು ವರ್ಷದೊಳಗಿನವರಾಗಿರಬೇಕು. ೪ ಈ ಪ್ರಶಸ್ತಿಯು ೫,೦೦೦ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ೫.…

ರಾಜ್ಯದ ೨೫ ವಿಧಾನರಪಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆ

ಬೆಂಗಳೂರು,ನ,೦೯:ಕರ್ನಾಟಕ ವಿಧಾನ ಪರಿಷತ್‌ನ ೨೫ ಸ್ಥಾನಗಳಿಗೆ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ರಾಜ್ಯ ಮೇಲ್ಮನೆಯ ೨೫ ಸ್ಥಾನಗಳಿಗೆ ಡಿಸೆಂಬರ್ ೧೦ರಂದು ಚುನಾವಣೆ ನಡೆಯಲಿದ್ದು ಡಿಸೆಂಬರ್ ೧೪ರಂದು ಫಲಿತಾಂಶ ಪ್ರಕಟವಾಗಿಲಿದೆ. ನವೆಂಬರ್ ೧೬ರಂದು ಮೇಲ್ಮನೆ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದ್ದು, ನವೆಂಬರ್ ೨೩ರಂದು ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದೆ. ನವೆಂಬರ್ ೨೪ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ನವೆಂಬರ್ ೨೬ ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿದೆ. ಡಿಸೆಂಬರ್ ೧೦ ಶುಕ್ರವಾರ ಬೆಳಗ್ಗೆ ೮ರಿಂದ ಸಂಜೆ ೪ರವರೆಗೆ ಮತದಾನ ನಡೆಯಲಿದೆ. ಬೆಂಗಳೂರು ನಗರ,…

ಅಪ್ಪು ಅನ್ನ ಸಂತರ್ಪಣೆಗೆ ಹರಿದು ಬಂದ ಜನಸಾಗರ

ಬೆಂಗಳೂರು,ನ,೦9: ನಾಡಿನಾದ್ಯಂತ ಮತ್ತೆ ಹರಿದು ಬಂದು ಒಂದೆಡೆ ಸೇರಿದ ಅಭಿಮಾನದ ಹೊಳೆ. ಮೇರೆ ಮೀರಿದ ಜಯಘೋಷ, ಅಭಿಮಾನದ ಹರಿವಿಗೆ ಸಾವಿರಾರು ನದಿಗಳು… ಎಂಬ ಹೊಸ ಭಾವನಾತ್ಮಕ ರೂಪಕಕ್ಕೆ ಪುನೀತ್ ಪುಣ್ಯಸ್ಮರಣೆಯ ೧೨ನೇ ದಿನ ಸಾಕ್ಷಿಯಾಯಿತು ಪುಣ್ಯಸ್ಮರಣೆಯ ಅಂಗವಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಗರದ ಅರಮನೆ ಮೈದಾನದ ‘ತ್ರಿಪುರವಾಸಿನಿ’ ಅಂಗಣದಲ್ಲಿ ನಡೆಯಿತು. .ಪುನೀತ್ ಪತ್ನಿ ಅಶ್ವಿನಿ, ನಟ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಅಭಿಮಾನಿಗಳಿಗೆ ಊಟ ಬಡಿಸಿದರು. ಬಳಿಕ ಶಿವರಾಜ್‌ಕುಮಾರ್ ರಕ್ತದಾನ ಮಾಡಿದರು. ಅನ್ನಸಂತರ್ಪಣೆಗೆ ಚಾಲನೆ ನೀಡಿದ ಬಳಿಕ ಭಾವುಕರಾದ…

Girl in a jacket